ETV Bharat / international

ದಕ್ಷಿಣ ಕೊರಿಯಾ: ಹ್ಯಾಲೋವೀನ್ ಹಬ್ಬದಲ್ಲಿ ಭೀಕರ ಕಾಲ್ತುಳಿತ, 151 ಮಂದಿ ಸಾವು - ದಕ್ಷಿಣ ಕೊರಿಯಾದಲ್ಲಿ ಹ್ಯಾಲೋವೀನ್ ಹಬ್ಬ

ಇಟಾವೊನ್​ನ ಕಿರಿದಾದ ಗಲ್ಲಿಯಲ್ಲಿ ಭಾರಿ ಜನಸಂದಣಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.

Crush kills at least 146 at Halloween festivities in Seoul
ಹ್ಯಾಲೋವೀನ್ ಹಬ್ಬದಲ್ಲಿ ಕಾಲ್ತುಳಿತ
author img

By

Published : Oct 30, 2022, 6:46 AM IST

Updated : Oct 30, 2022, 8:09 AM IST

ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ ಸಮೀಪದ ಇಟಾವೊನ್‌ ಎಂಬ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಹ್ಯಾಲೋವೀನ್ ಹಬ್ಬಾಚರಣೆಯ ವೇಳೆ ಭಾರಿ ಕಾಲ್ತುಳಿತ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 151 ಕ್ಕೇರಿದೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಇಟಾವೊನ್​ನ ಕಿರಿದಾದ ಗಲ್ಲಿಯಲ್ಲಿ ಹೆಚ್ಚು ಜನಸಂದಣಿ ಸೇರಿದ್ದರಿಂದ ದುರ್ಘಟನೆ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಹಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬೀದಿಯಲ್ಲಿ ಬಿದ್ದಿದ್ದವರನ್ನು ಅಗ್ನಿಶಾಮಕ ದಳದವರು ಆಸ್ಪತ್ರೆಗೆ ಸಾಗಿಸಿದರು. ಸಾವನ್ನಪ್ಪಿರುವವರಲ್ಲಿ 19 ಮಂದಿ ಹಾಗೂ ಗಾಯಗೊಂಡವರಲ್ಲಿ 15 ಮಂದಿ ವಿದೇಶಿಗರಾಗಿದ್ದು, ಇರಾನ್​, ಉಜ್ಬೇಕಿಸ್ತಾನ್, ಚೀನಾ ಮತ್ತು ನಾರ್ವೆ ದೇಶದವರು ಎಂದು ತಿಳಿದು ಬಂದಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ಸ್ಥಗಿತಗೊಂಡಿದ್ದ ಹ್ಯಾಲೋವೀನ್​ ಹಬ್ಬ ಎರಡು ವರ್ಷಗಳ ನಂತರ ಪ್ರಾರಂಭಗೊಂಡಿತ್ತು. ವರದಿಗಳ ಪ್ರಕಾರ, ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಜನ ಜಮಾಯಿಸಿದ್ದರು.

ಸಿಯೋಲ್‌ನ ಪ್ರಮುಖ ಪಾರ್ಟಿ ಸ್ಥಳವಾದ ಹ್ಯಾಮಿಲ್ಟನ್ ಹೋಟೆಲ್‌ನ ಸಮೀಪವಿರುವ ಕಿರಿದಾದ ಇಳಿಜಾರಿನ ರಸ್ತೆಯಲ್ಲಿ ದುರ್ಘಟನೆ ಜರುಗಿದೆ. ಎಲ್ಲರೂ ಒಟ್ಟೊಟ್ಟಿಗೆ ಸಾಗುತ್ತಿರುವಾಗ ನೂಕುನುಗ್ಗಲು ಉಂಟಾಗಿದ್ದು ಒಬ್ಬರಿಂದ ಒಬ್ಬರು ತಳ್ಳಲ್ಪಟ್ಟು ಬಿದ್ದಿದ್ದಾರೆ. ಈ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಹಲವರು ಜೀವ ಕಳೆದುಕೊಂಡರು ಎಂದು ಅಗ್ನಿಶಾಮಕ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ನಿರ್ಮಾಣ ಹಂತದ ವಿದ್ಯುತ್​​ ಕೇಂದ್ರದಲ್ಲಿ ಭಾರಿ ಭೂಕುಸಿತ: ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

Last Updated : Oct 30, 2022, 8:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.