ETV Bharat / international

ಸದ್ದು ಮಾಡಬೇಡ ಎಂದಿದ್ದಕ್ಕೆ ಗುಂಡು ಹಾರಿಸಿ ಕೊಂದೇ ಬಿಟ್ಟ!: ಟೆಕ್ಸಾಸ್​​ನಲ್ಲಿ ಐವರ ಹತ್ಯೆ - Family killed in shooting

ಅಮೆರಿಕದಲ್ಲಿ ಗುಂಡಿನ ದಾಳಿಗೆ 8 ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್‌ನ ಕ್ಲೀವ್‌ಲ್ಯಾಂಡ್‌ನಲ್ಲಿ ಈ ದುರಂತ ಸಂಭವಿಸಿದೆ. ಆರೋಪಿ ಇನ್ನೂ ಪತ್ತೆಯಾಗಿಲ್ಲ.

ಟೆಕ್ಸಾಸ್​​ನಲ್ಲಿ ಐವರ ಹತ್ಯೆ
ಟೆಕ್ಸಾಸ್​​ನಲ್ಲಿ ಐವರ ಹತ್ಯೆ
author img

By

Published : Apr 30, 2023, 11:19 AM IST

ಟೆಕ್ಸಾಸ್(ಅಮೆರಿಕ): ಅಮೆರಿಕದಲ್ಲಿ ಬಂದೂಕು ಹೊಂದಿರುವುದರ ಮೇಲೆ ನಿರ್ಬಂಧ ಹೇರುವ ವಿಚಾರ ಮುನ್ನೆಲೆಗೆ ಬಂದ ನಡುವೆಯೂ, ಅದರ ಮೊರೆತ ಮಾತ್ರ ನಿಂತಿಲ್ಲ. ಮಗು ನಿದ್ದೆ ಮಾಡುತ್ತಿದೆ ಗುಂಡು ಹಾರಿಸಬೇಡ ಎಂದು ಹೇಳಿದ ನೆರೆಮನೆಯವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ವಿಚಿತ್ರ ಘಟನೆ ನಡೆದಿದೆ. ಟೆಕ್ಸಾಸ್‌ನ ಕ್ಲೀವ್‌ಲ್ಯಾಂಡ್‌ನಲ್ಲಿ ದುರಂತ ನಡೆದಿದ್ದು, 8 ವರ್ಷದ ಮಗು ಸೇರಿದಂತೆ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬಂದೂಕುಧಾರಿಯೊಬ್ಬ ವಿನಾಕಾರಣ ಗುಂಡು ಹಾರಿಸುತ್ತಿದ್ದ. ನೆರೆಹೊರೆಯವರು ಹೀಗೆ ಮಾಡಬೇಡ. ಮಗು ಮನೆಯಲ್ಲಿ ಮಲಗಿದೆ. ಅದಕ್ಕೆ ನಿದ್ರಾಭಂಗವಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೇ ಸಿಟ್ಟಾದ ಆ ವ್ಯಕ್ತಿ ಮನೆಯವರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಶನಿವಾರ ಸ್ಥಳೀಯ ಕಾಲಮಾನ ಸುಮಾರು 11:30 ಗಂಟೆಗೆ ಈ ಶೂಟೌಟ್​ ನಡೆದಿದೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ 8 ವರ್ಷದ ಮಗು ಮತ್ತು ನಾಲ್ವರನ್ನು ಗುಂಡಿಕ್ಕಿರುವುದು ಕಂಡುಬಂದಿದೆ.

ಮದ್ಯಪಾನ ಮಾಡಿದ್ದ ವ್ಯಕ್ತಿ ತನ್ನ ಮುನೆಯ ಮುಂದೆ ಗುಂಡು ಹಾರಿಸುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ನೆರೆಮನೆಯವರು ಗುಂಡು ಹಾರಿಸದಂತೆ ಹೇಳಿದ್ದಾರೆ. ಮಗು ಮಲಗುತ್ತಿದೆ. ಸದ್ದು ಮಾಡದಂತೆ ಹೇಳಿದ್ದಾರೆ. ನನ್ನ ಮನೆಯ ಮುಂದೆ ಏನೂ ಬೇಕಾದರೂ ಮಾಡುವೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಸಿಟ್ಟಾದ ಆ ವ್ಯಕ್ತಿ ಕುಟುಂಬದ ಮೇಲೆ ಗುಂಡಿನ ಸುರಿಮಳೆ ಸುರಿಸಿದ್ದಾನೆ.

ಮನೆಯವರ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೆರಿಕದಲ್ಲಿ ಬಂದೂಕು ಹಿಂಸಾಚಾರ ಸಾಮಾನ್ಯವಾಗಿದೆ. ದೇಶದಲ್ಲಿ ಇದುವರೆಗೆ ಕನಿಷ್ಠ 174 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪತ್ರಕರ್ತ, ಮಗು ಹತ: ಅಮೆರಿಕದ ಸೆಂಟ್ರಲ್ ಫ್ಲೋರಿಡಾ ದೂರದರ್ಶನದ ಪತ್ರಕರ್ತ ಹಾಗೂ 9 ವರ್ಷದ ಮಗು ಶೂಟೌಟ್​ನಲ್ಲಿ ಹತರಾಗಿದ್ದಾರೆ. ಒರ್ಲ್ಯಾಂಡೊ ಪ್ರದೇಶದಲ್ಲಿ ದುಷ್ಕರ್ಮಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಬಾಲಕಿ ಮತ್ತು ಮಾಧ್ಯಮದ ಪತ್ರಕರ್ತನೊಬ್ಬ ಸಾವನ್ನಪ್ಪಿದ್ದಾನೆ. 19 ವರ್ಷದ ಕೀತ್ ಮೆಲ್ವಿನ್ ಮೋಸೆಸ್ ಎಂಬಾತನನ್ನು ಬಂಧಿಸಲಾಗಿದೆ.

ಈ ದಾಳಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಬಂದೂಕುಧಾರಿ ವ್ಯಕ್ತಿ ಮೊದಲು ಮಾಧ್ಯಮದ ವಾಹನದ ಬಳಿ ಬಂದು ಇಬ್ಬರು ಪತ್ರಕರ್ತರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ ಅವರ 9 ವರ್ಷದ ಮಗುವಿನ ಮೇಲೆ ದಾಳಿ ಮಾಡಿದ್ದ. ಇದರಲ್ಲಿ ಮಗು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದು, ತಾಯಿ ಹಾಗೂ ಮತ್ತೋರ್ವ ಪತ್ರಕರ್ತನ ಗಂಭೀರವಾಗಿ ಗಾಯಗೊಂಡಿದ್ದರು.

ಇನ್ನೊಂದು ಘಟನೆಯಲ್ಲಿ ಟೆನ್ನೆಸ್ಸೀ ಬಳಿಯ ಮಿಸ್ಸಿಸ್ಸಿಪ್ಪಿ ಪಟ್ಟಣದಲ್ಲಿ ಹಂತಕನ ಗುಂಡಿನ ದಾಳಿಗೆ ಆರು ಮಂದಿ ಅಸುನೀಗಿದ್ದರು. ಶಂಕಿತ ಆರೋಪಿಯನ್ನು ಪೊಲೀಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತ ಆರೋಪಿಯಾದ ರಿಚರ್ಡ್ ಡೇಲ್ ಕ್ರೂಮ್(52) ನನ್ನು ಬಂಧಿಸಲಾಗಿತ್ತು. ಹಂತಕ ಎರಡು ಅಂಗಡಿ, ಮನೆಗಳಿಗೆ ನುಗ್ಗಿ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿರಲಿಲ್ಲ.

ಓದಿ: ಮೂರು ಶೂಟೌಟ್ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜ ದೋಷಮುಕ್ತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.