ETV Bharat / international

ಪ್ಯಾಲೆಸ್ಟೈನ​ರಿಗೆ 2.5 ಕೋಟಿ ರೂ. ದೇಣಿಗೆ, ಕದನ ವಿರಾಮಕ್ಕೆ ಕರೆ ನೀಡಲು ಇಸ್ರೇಲ್ ಸರ್ಕಾರಕ್ಕೆ ಮನವಿ.. ಮಲಾಲಾ

ಗಾಜಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ಅವರು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವಂತೆ ಮನವಿ ಮಾಡಿದ್ದಾರೆ.

Gaza and Israel war  Malala Yousafzai Donates two and Half Crore  Donates two and Half Crore For Palestinians  ಕದನ ವಿರಾಮಕ್ಕೆ ಕರೆ ನೀಡಲು ಇಸ್ರೇಲ್ ಸರ್ಕಾರಕ್ಕೆ ಮನವಿ  ಮೂರು ದತ್ತಿ ಸಂಸ್ಥೆಗಳಿಗೆ ದೇಣಿಗೆ  ಗಾಜಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ  ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ  ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿ  ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ವಿಷಾದ  ವಿಡಿಯೋ ಸಂದೇಶವನ್ನು ಬಿಡುಗಡೆ  ಕದನ ವಿರಾಮಕ್ಕೆ ಕರೆ ನೀಡುವಂತೆ ಮನವಿ ಮಾಡಿರುವ ಮಲಾಲಾ  Gaza and Israel war  Malala Yousafzai Donates two and Half Crore  Donates two and Half Crore For Palestinians  ಕದನ ವಿರಾಮಕ್ಕೆ ಕರೆ ನೀಡಲು ಇಸ್ರೇಲ್ ಸರ್ಕಾರಕ್ಕೆ ಮನವಿ  ಮೂರು ದತ್ತಿ ಸಂಸ್ಥೆಗಳಿಗೆ ದೇಣಿಗೆ  ಗಾಜಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ  ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ  ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿ  ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ವಿಷಾದ  ವಿಡಿಯೋ ಸಂದೇಶವನ್ನು ಬಿಡುಗಡೆ  ಕದನ ವಿರಾಮಕ್ಕೆ ಕರೆ ನೀಡುವಂತೆ ಮನವಿ ಮಾಡಿರುವ ಮಲಾಲಾ
ಕದನ ವಿರಾಮಕ್ಕೆ ಕರೆ ನೀಡಲು ಇಸ್ರೇಲ್ ಸರ್ಕಾರಕ್ಕೆ ಮನವಿ
author img

By ETV Bharat Karnataka Team

Published : Oct 19, 2023, 10:13 AM IST

ಜೆರುಸಲೇಂ: ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಅವರು ಪ್ಯಾಲೆಸ್ಟೈನ್ ಜನರಿಗೆ ಸಹಾಯ ಮಾಡುವ ಮೂರು ದತ್ತಿ ಸಂಸ್ಥೆಗಳಿಗೆ 3 ಲಕ್ಷ ಡಾಲರ್ (ರೂ. 2.5 ಕೋಟಿ) ದೇಣಿಗೆ ನೀಡುವುದಾಗಿ ಘೋಷಿಸಿದರು.

ಈ ಕುರಿತು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಮಲಾಲಾ, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಬಾಂಬ್ ದಾಳಿಯಿಂದ ಗಾಬರಿಯಾಗಿದೆ. ಈ ಕೃತ್ಯವನ್ನು ನಿರ್ವಿವಾದವಾಗಿ ಖಂಡಿಸುತ್ತೇನೆ. ಇಸ್ರೇಲ್, ಪ್ಯಾಲೆಸ್ಟೈನ್ ಮತ್ತು ಪ್ರಪಂಚದಾದ್ಯಂತ ಶಾಂತಿಯನ್ನು ಬಯಸುವ ಜನರೊಂದಿಗೆ ನಾನು ಸೇರುತ್ತೇನೆ. ಸಾಮೂಹಿಕ ಶಿಕ್ಷೆ ಪರಿಹಾರವಲ್ಲ. ಗಾಜಾದ ಅರ್ಧದಷ್ಟು ಜನಸಂಖ್ಯೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಅವರು ತಮ್ಮ ಇಡೀ ಜೀವನದುದ್ದಕ್ಕೂ ಬಾಂಬ್ ಸ್ಫೋಟಗಳ ಮಧ್ಯೆ ಬದುಕಬಾರದು ಎಂದು ಹೇಳಿದ್ದಾರೆ.

  • I’m horrified to see the bombing of al-Ahli Hospital in Gaza and unequivocally condemn it. I urge the Israeli government to allow humanitarian aid into Gaza and reiterate the call for a ceasefire. I am directing $300K to three charities helping Palestinian people under attack. pic.twitter.com/JiIPfnTUvY

    — Malala Yousafzai (@Malala) October 17, 2023 " class="align-text-top noRightClick twitterSection" data=" ">

ನಾನು ತುಂಬಾ ಗಾಬರಿಗೊಂಡಿದ್ದೇನೆ. ಗಾಜಾಕ್ಕೆ ಮಾನವೀಯ ನೆರವು ನೀಡಲು ಮತ್ತು ಕದನ ವಿರಾಮಕ್ಕೆ ಕರೆ ನೀಡಲು ಇಸ್ರೇಲ್ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನಾನು ಪ್ಯಾಲೆಸ್ಟೈನ್‌ಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ $300K ದೇಣಿಗೆ ನೀಡುತ್ತಿದ್ದೇನೆ. ಸಾಮಾನ್ಯ ಜನರ ಮೇಲೆ ಹಲ್ಲೆ ನಡೆಯುತ್ತಿದೆ, ಇದು ತಪ್ಪು ಎಂದು ಅವರ ಪರ ಮಲಾಲಾ ಧ್ವನಿ ಎತ್ತಿದ್ದಾರೆ.

ಕದನ ವಿರಾಮಕ್ಕೆ ಕರೆ ನೀಡುವಂತೆ ಮನವಿ ಮಾಡಿರುವ ಮಲಾಲಾ ಅವರು, ಯುದ್ಧ ಬಂದಾಗಲೆಲ್ಲ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಯುದ್ಧ ವಲಯದಲ್ಲಿ ಶಾಂತಿ ಮತ್ತು ನ್ಯಾಯಕ್ಕಾಗಿ ಆಶಿಸುತ್ತಿರುವ ಜನರಿಗಾಗಿ ನಾನು ದುಃಖಿತನಾಗಿದ್ದೇನೆ. ಯುದ್ಧದಲ್ಲಿ ಸಿಕ್ಕಿಬಿದ್ದಿರುವ ಪ್ಯಾಲೆಸ್ಟೈನ್ ಮತ್ತು ಇಸ್ರೇಲಿ ಮಕ್ಕಳ ಬಗ್ಗೆ ಚಿಂತಿಸುತ್ತಿದ್ದೇನೆ. ಯುದ್ಧವು ಮಕ್ಕಳನ್ನು ಎಂದಿಗೂ ಉಳಿಸುವುದಿಲ್ಲ ಎಂದು ಮಲಾಲಾ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಮಲಾಲಾ ಯೂಸುಫ್‌ಜಾಯ್ ಅವರು 2012 ರಲ್ಲಿ ಕೇವಲ 11 ವರ್ಷದವಳಿದ್ದಾಗ ತನ್ನ ಮೇಲೆ ನಡೆದ ಭಯೋತ್ಪಾದನೆಯ ಭಯಾನಕ ದೃಶ್ಯವನ್ನು ನೆನಪಿಸಿಕೊಂಡರು. ಆ ಸಮಯದಲ್ಲಿ ತಾಲಿಬಾನ್ ಪಡೆಗಳು ಅವಳನ್ನು ಕೊಲ್ಲಲು ಪ್ರಯತ್ನಿಸಿದವು. ಆದರೆ ಅವಳು ಬದುಕುಳಿದಳು. ಹಿಂಸೆ ಮತ್ತು ಭಯೋತ್ಪಾದನೆಯನ್ನು ನೋಡಿದಾಗ ನನಗೆ ಕೇವಲ 11 ವರ್ಷ ವಯಸ್ಸಾಗಿತ್ತು. ನಾನು ಶಾಲೆ ಮತ್ತು ಮಸೀದಿಯ ಸ್ಫೋಟವನ್ನು ಕಣ್ಣಾರೆ ಕಂಡಿದ್ದೇನೆ. ಈಗ ಶಾಂತಿ ಕಾಪಾಡುವುದೇ ನನ್ನ ಕನಸಾಗಿದೆ ಎಂದು ನೊಬೆಲ್​ ಪುರಸ್ಕೃತೆ ಹೇಳಿದ್ದಾರೆ.

ಆಸ್ಪತ್ರೆಯ ಮೇಲೆ ದಾಳಿ: ಗಾಜಾದಲ್ಲಿ ಸ್ಫೋಟದ ನಂತರ ಅಲ್ ಅಹ್ಲಿ ಆಸ್ಪತ್ರೆ ಸಂಪೂರ್ಣ ನಾಶವಾಯಿತು. ಈ ದಾಳಿಯಲ್ಲಿ ಸರಿ ಸುಮಾರು 500 ಜನರು ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಮೇಲಿನ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಹಮಾಸ್ ಬೆಂಬಲಿತ ಇಸ್ಲಾಮಿಕ್ ಜಿಹಾದ್ ಸಂಘಟನೆ ಈ ದಾಳಿ ನಡೆಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಕೆಲವು ವಿಡಿಯೋ ತುಣುಕನ್ನು ಮತ್ತು ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಈ ವೇಳೆ ಅಮಾಯಕ ಗಾಜಾಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ಹೇಳಿಕೊಂಡಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು ಮತ್ತು ವೃದ್ಧರು ಈ ಯುದ್ಧದ ತೀವ್ರತೆಯನ್ನು ಅನುಭವಿಸಿದ್ದಾರೆ.

ಓದಿ: ಹಮಾಸ್​ ಉಗ್ರ ಗುಂಪುಗಳ ಹಣಕಾಸು ಜಾಲಗಳಿಗೆ ನಿರ್ಬಂಧ: ಗಾಜಾ, ವೆಸ್ಟ್‌ ಬ್ಯಾಂಕ್‌ಗೆ $100 ಮಿಲಿಯನ್​ ನೆರವು ಘೋಷಿಸಿದ ಅಮೆರಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.