ETV Bharat / international

ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಶಾಶ್ವತವಲ್ಲದ ಸ್ಥಾನಕ್ಕೆ ಐದು ರಾಷ್ಟ್ರಗಳ ಆಯ್ಕೆ - UN Security Council

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯಂ ಅಲ್ಲದ ಐದು ಹೊಸ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗಿದೆ. ವಿಶ್ವ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಂಡಳಿಗೆ ಸುಧಾರಣೆ ತರಬೇಕು ಎಂದು ಭಾರತ ಮತ್ತೊಮ್ಮೆ ವಾದ ಮಂಡಿಸಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ
ವಿಶ್ವಸಂಸ್ಥೆ ಭದ್ರತಾ ಮಂಡಳಿ
author img

By

Published : Jun 7, 2023, 7:57 AM IST

ನ್ಯೂಯಾರ್ಕ್(ಅಮೆರಿಕ): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳಾಗಿ ಅಲ್ಜೀರಿಯಾ, ಗಯಾನಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ದಕ್ಷಿಣ ಕೊರಿಯಾ ಮಂಗಳವಾರ ಆಯ್ಕೆಯಾಗಿವೆ. ನಿನ್ನೆ ನಡೆದ ವಿಶ್ವಸಂಸ್ಥೆ​ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಹೊಸದಾಗಿ ಭದ್ರತಾ ಮಂಡಳಿಗೆ ಸೇರ್ಪಡೆಯಾಗಿರುವ ರಾಷ್ಟ್ರಗಳು ಜನವರಿ 1, 2024 ರಿಂದ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.

ಪ್ರತಿವರ್ಷ ಭದ್ರತಾ ಮಂಡಳಿಗೆ 5 ಸದಸ್ಯ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷ ಅಲ್ಜೀರಿಯಾ, ಗಯಾನಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್ ಮತ್ತು ಸ್ಲೊವೇನಿಯಾಗೆ ಅವಕಾಶ ನೀಡಲಾಗಿದೆ. ಇವು ಮುಂದಿನ 2 ವರ್ಷ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆಯಲಿವೆ.

  • My congratulations to Algeria 🇩🇿, Guyana 🇬🇾, Republic of Korea 🇰🇷, Sierra Leone 🇸🇱 and Slovenia 🇸🇮, for being elected as non-permanent members of the @UN Security Council for a two-year term beginning on 1 January 2024.

    I thank the tellers for assisting in this election. pic.twitter.com/Lzbwi0jcmX

    — UN GA President (@UN_PGA) June 6, 2023 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಅಧ್ಯಕ್ಷ ಸಿಸಾಬಾ ಕೊರೊಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಯಾದ ಅಲ್ಜೀರಿಯಾ, ಗಯಾನಾ, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್ ಮತ್ತು ಸ್ಲೊವೇನಿಯಾ ದೇಶಗಳಿಗೆ ಅಭಿನಂದನೆಗಳು. ಚುನಾವಣೆಯಲ್ಲಿ ಭಾಗವಹಿಸಿ ಆಯ್ಕೆ ಮಾಡಿದ ಇತರ ದೇಶಗಳಿಗೂ ಧನ್ಯವಾದಗಳು. ಐದು ರಾಷ್ಟ್ರಗಳ ಅವರಧಿ 2024ರ ಜನವರಿ 1 ರಿಂದ ಪ್ರಾರಂಭವಾಗಿ ಮುಂದಿನ 2 ವರ್ಷಗಳವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ಭದ್ರತಾ ಮಂಡಳಿ ಸರ್ಜರಿಗೆ ಭಾರತ ಒತ್ತಾಯ: ಅಸ್ತಿತ್ವದಲ್ಲಿರುವ ಭದ್ರತಾ ಮಂಡಳಿಗೆ ಸರ್ಜರಿ ಮಾಡುವ ಅಗತ್ಯವಿದೆ ಎಂದು ಭಾರತ ಮತ್ತೊಮ್ಮೆ ಧ್ವನಿ ಎತ್ತಿದೆ. ಸದ್ಯದ ಮಟ್ಟಿಗಿನ ಭದ್ರತಾ ಮಂಡಳಿ ವಿಶ್ವವನ್ನು ಪ್ರತಿನಿಧಿಸುವ ಮಂಡಳಿಯಾಗಿ ಉಳಿದಿಲ್ಲ. ಇತರ ರಾಷ್ಟ್ರಗಳಿಗೂ ಮಂಡಳಿಯಲ್ಲಿ ಸ್ಥಾನ ನೀಡಬೇಕು. ಆಗ ಅದು ರಚನಾತ್ಮಕ ರೂಪು ಪಡೆಯುವ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಅಂಗವಾಗ ಭದ್ರತಾ ಮಂಡಳಿಗೆ ಮೇಜರ್​ ಸರ್ಜರಿ ನಡೆಸಬೇಕಿದೆ. ಇದಕ್ಕೆ ತುರ್ತು ಸುಧಾರಣೆ ತರುವುದು ನಿರ್ಣಾಯಕ ವಿಷಯವಾಗಿದೆ. ಜಗತ್ತು ವಿಕಸನಗೊಳ್ಳುತ್ತಿದೆ. ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಹೆಚ್ಚು ಪ್ರಾತಿನಿಧಿಕ, ಅಂತರ್ಗತ ಮತ್ತು ಪರಿಣಾಮಕಾರಿಯಾದ ಕೌನ್ಸಿಲ್‌ನ ತುರ್ತು ಅವಶ್ಯಕತೆಯಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.

ಬ್ರೆಜಿಲ್, ಭಾರತ, ದಕ್ಷಿಣ ಆಫ್ರಿಕಾ ಮತ್ತು ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್‌ ರಾಷ್ಟ್ರಗಳು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಭದ್ರತಾ ಮಂಡಳಿ ಸುಧಾರಣೆಯ ದುಂಡುಮೇಜಿನ ಸಭೆಯಲ್ಲಿ ಭಾರತದ ರುಚಿರಾ ಕಾಂಬೋಜ್ ಮಾತನಾಡಿದ್ದಾರೆ. ವಿಶ್ವದ ರಾಷ್ಟ್ರಗಳಿಗೆ ಭದ್ರತಾ ಮಂಡಳಿಯಲ್ಲಿ ಹೆಚ್ಚು ಪ್ರಾತಿನಿಧ್ಯವನ್ನು ನೀಡಬೇಕು ಎಂದು ಭಾರತ ಪದೇ ಪದೇ ಕರೆ ನೀಡುತ್ತಲೇ ಇದೆ.

ಶಾಂತಿ ಸ್ಥಾಪನೆ, ಅಭಿವೃದ್ಧಿಯ ಉತ್ತೇಜನೆ, ಜಾಗತಿಕ ಸವಾಲುಗಳನ್ನು ನಿಭಾಯಿಸಲು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ ದೇಶಗಳ ಕೊಡುಗೆಗಳನ್ನು ಗುರುತಿಸುವ ಸಮಯವಿದು. ಭದ್ರತಾ ಮಂಡಳಿಯ ಸದಸ್ಯತ್ವವನ್ನು ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗಗಳಲ್ಲಿ ವಿಸ್ತರಿಸುವ ಮೂಲಕ ಅದರ ನ್ಯಾಯಸಮ್ಮತತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಬಹುದು ಎಂದು ಭಾರತ ಹೇಳಿದೆ.

ಓದಿ: ರಾಜಸ್ಥಾನದ ಬಿಕಾನೇರ್‌ನಲ್ಲಿ ಮತ್ತೆ 4.3 ತೀವ್ರತೆಯ ಭೂಕಂಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.