ನೆದರ್ಲ್ಯಾಂಡ್: ಎಫ್‌ಐಹೆಚ್ ಹಾಕಿ ಪ್ರೋ ಟೂರ್ನಿಯಲ್ಲಿ ಶನಿವಾರ ಆತಿಥೇಯ ನೆದರ್ಲ್ಯಾಂಡ್ಸ್ ವಿರುದ್ಧ 2-3 ಅಂತರದ ಸೋಲಿನ ನಂತರ, ಭಾನುವಾರ ಇಲ್ಲಿಯ ಐಂಡ್‌ಹೋವನ್‌ನಲ್ಲಿ ನಡೆದ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ 2-1 ಗೆಲುವಿನೊಂದಿಗೆ ಭಾರತ ತನ್ನ ಎಫ್‌ಐಹೆಚ್ ಹಾಕಿ ಪ್ರೊ ಲೀಗ್ 2022-23 ಅಭಿಯಾನ ಕೊನೆಗೊಳಿಸಿತು.
-
End of Q3.
— Hockey India (@TheHockeyIndia) June 11, 2023 " class="align-text-top noRightClick twitterSection" data="
India still hold on to their two goal lead. Let's win this game.
🇮🇳 IND 2-0 ARG 🇦🇷#HockeyIndia #IndiaKaGame #FIHProLeague @CMO_Odisha @sports_odisha @Media_SAI @IndiaSports
">End of Q3.
— Hockey India (@TheHockeyIndia) June 11, 2023
India still hold on to their two goal lead. Let's win this game.
🇮🇳 IND 2-0 ARG 🇦🇷#HockeyIndia #IndiaKaGame #FIHProLeague @CMO_Odisha @sports_odisha @Media_SAI @IndiaSportsEnd of Q3.
— Hockey India (@TheHockeyIndia) June 11, 2023
India still hold on to their two goal lead. Let's win this game.
🇮🇳 IND 2-0 ARG 🇦🇷#HockeyIndia #IndiaKaGame #FIHProLeague @CMO_Odisha @sports_odisha @Media_SAI @IndiaSports
ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಕಾಶದೀಪ್ ಸಿಂಗ್ (2ನೇ ನಿಮಿಷ) ಮತ್ತು ಸುಖಜೀತ್ ಸಿಂಗ್ (14) ಅವರ ಆರಂಭಿಕ ಗೋಲುಗಳು ಭಾರತದ ಗೆಲುವಿಗೆ ಸಹಾಯ ಮಾಡಿತು. ಮತ್ತೊಂದೆಡೆ ಅರ್ಜೆಂಟೀನಾದ ಪರ ಲುಕಾಸ್ ಟೋಸ್ಕಾನಿ (58) ಏಕೈಕ ಗೋಲು ಗಳಿಸಿದರು.
ಅನುಭವಿ ಸ್ಟ್ರೈಕರ್ ಆಕಾಶದೀಪ್ ಸಿಂಗ್ ಆಟ ಪ್ರಾರಂಭವಾದ ಎರಡು ನಿಮಿಷಗಳಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಭಾರತದ ಆರಂಭಿಕ 1-0 ಮುನ್ನಡೆಯಿಂದ ವಿಚಲಿತರಾಗದ ಅರ್ಜೆಂಟೀನಾ 4ನೇ ನಿಮಿಷದಲ್ಲಿ ಮಾರಕ ಪ್ರತಿದಾಳಿ ನಡೆಸಿ ಗೋಲು ಗಳಿಸಲು ಪ್ರಯತ್ನಿಸಿತಾದರೂ ಅದಕ್ಕೆ ಅವಕಾಶ ಮಾಡಿಕೊಡದ ಭಾರತ ಗೋಲ್ಗಳನ್ನು ತಡೆಯುವಲ್ಲಿ ಯಶಸ್ವಿಯಾಯಿತು. ಬಳಿಕ ಮುಂದಿನ ಕೆಲ ನಿಮಿಷಗಳ ಕಾಲ ಭಾರತ ಆತಿಥೇಯರ ವಿರುದ್ಧ ಪ್ರತಿದಾಳಿ ಆರಂಭಿಸಿತು.
2ನೇ ಗೋಲು: 14 ನೇ ನಿಮಿಷದಲ್ಲಿ ಆಕಾಶದೀಪ್ ಅವರು ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಉತ್ತಮ ಬ್ಯಾಕ್ ಪಾಸ್ ನೀಡಿದರು. ಈ ವೇಳೆ ವಿವೇಕ್, ಸುಖಜೀತ್ ಅವರಿಗೆ ಚೆಂಡನ್ನು ಪಾಸ್ ಮಾಡಿದ್ದು, ಸುಖಜೀತ್ ಸುಲಭವಾಗಿ ಗೋಲು ಗಳಿಸುವ ಮೂಲಕ ಭಾರತಕ್ಕೆ 2ನೇ ಗೋಲು ಒದಗಿಸಿಕೊಟ್ಟರು.
ಮುಂದಿನ ಕ್ವಾರ್ಟರ್‌ನಲ್ಲಿ ಕಾರ್ತಿ ಸೆಲ್ವಂ, ಆಕಾಶದೀಪ್ ಮತ್ತು ಮನ್‌ದೀಪ್ ಸಿಂಗ್ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿದರೂ ಯಶಸ್ಸು ಕಾಣಲಿಲ್ಲ. ಮೂರನೇ ಕ್ವಾರ್ಟರ್ ಅನ್ನು 2-0 ಹಿನ್ನಡೆಯೊಂದಿಗೆ ಪ್ರಾರಂಭಿಸಿದ ಅರ್ಜೆಂಟೀನಾ ಹತ್ತು ನಿಮಿಷಗಳ ವಿರಾಮದಿಂದ ಪುಟಿದೇಳುವ ಉದ್ದೇಶದಿಂದ ಲಯಕ್ಕೆ ಮರಳಿತು. 2-0 ಮುನ್ನಡೆಯಲ್ಲಿದ್ದ ಭಾರತ ಅಂತಿಮ ಕ್ವಾರ್ಟರ್‌ನಲ್ಲಿ ಎಚ್ಚರಿಕೆಯಿಂದ ಆಡಿತು. ಆದರೇ 58 ನಿಮಿಷದಲ್ಲಿ ಲುಕಾಸ್ ಟೋಸ್ಕಾನಿ ಎಕೈಕ ಗೋಲು ಗಳಿಸುವ ಮೂಲ ತಂಡಕ್ಕೆ ಒಂದು ಗೋಲನ್ನು ಒದಗಿಸಿಕೊಟ್ಟರು. ಈ ಮೂಲಕ ಭಾರತದ ವಿರುದ್ಧ 2-1 ಅಂತರದಿಂದ ಅರ್ಜೆಂಟಿನಾ ಸೋಲು ಅನುಭವಿಸಿತು.
ಚೊಚ್ಚಲ ಜೂನಿಯರ್ ಹಾಕಿ ಏಷ್ಯಾಕಪ್ ಗೆದ್ದ ಭಾರತ
ಭಾರತೀಯ ವನಿತೆಯರ ತಂಡ ಮೊದಲ ಬಾರಿಗೆ ಜೂನಿಯರ್ ಹಾಕಿ ಏಷ್ಯಾ ಕಪ್ ಗೆದ್ದಿದೆ. ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 2-1 ಅಂತರದ ಗೋಲುಗಳಿಂದ ಸೋಲಿಸುವ ಮೂಲಕ ಜೂನಿಯರ್ ಹಾಕಿ ಏಷ್ಯಾ ಕಪ್ ಟೂರ್ನಿಯ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು.
ಇದನ್ನೂ ಓದಿ: Hockey Junior Asia Cup 2023: ಚೊಚ್ಚಲ ಕಪ್ ಗೆದ್ದ ಭಾರತೀಯ ವನಿತೆಯರ ತಂಡ