ETV Bharat / international

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸ್ಫೋಟ: 4 ಸಾವು, 15 ಮಂದಿಗೆ ಗಾಯ - kannada top news

ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಬಾಂಬ್​ ಸ್ಫೋಟವಾಗಿದೆ.

pakistan-4-killed-at-least-15-injured-in-explosion-in-quetta
ಪಾಕಿಸ್ತಾನ: ಕ್ವೆಟ್ಟಾದಲ್ಲಿ ಸ್ಫೋಟದಲ್ಲಿ 4 ಸಾವು, 15 ಮಂದಿಗೆ ಗಾಯ
author img

By

Published : Apr 10, 2023, 10:08 PM IST

ಕ್ವೆಟ್ಟಾ (ಪಾಕಿಸ್ತಾನ): ನೈಋತ್ಯ ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ಬಾಂಬ್​ ಸ್ಫೋಟಿಸಲಾಗಿದೆ. ನಾಲ್ವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.

"ಮೃತ ದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತರಲ್ಲಿ ಬಾಲಕಿಯೂ ಸೇರಿದ್ದಾಳೆ" ಎಂದು ಸ್ಥಳೀಯ ಆಸ್ಪತ್ರೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕತಾವಾದಿ ಬಲೂಚಿಸ್ತಾನ್​ ಲಿಬರೇಶನ್​ ಆರ್ಮಿ ಕ್ವೆಟ್ಟಾ ಪೊಲೀಸರ ಮೇಲೆ ಎರಡನೇ ಬಾರಿ ದಾಳಿ ನಡೆಸಿದೆ. ಸ್ಫೋಟದಲ್ಲಿ ಓರ್ವ ಅಪ್ರಾಪ್ತೆಯೂ ಸೇರಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.

ಸ್ಫೋಟದ ಹೊಣೆ ಹೊತ್ತುಕೊಂಡಿರುವ ಪ್ರತ್ಯೇಕತಾವಾದಿ ಬಲೂಚಿಸ್ತಾನ್​ ಲಿಬರೇಶನ್​ ಆರ್ಮಿ, "ಬಲೂಚ್​ ಲಿಬರೇಶನ್​ ಆರ್ಮಿ ಈ ದಾಳಿಯ ಜವಬ್ದಾರಿ ವಹಿಸುತ್ತದೆ. ಬಲೂಚ್​​ ಜನರ ಮೇಲಿನ ದೌರ್ಜನ್ಯಕ್ಕಿದು ಪ್ರತೀಕಾರ. ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ" ಎಂದು ಬಿಎಲ್​ಎ ವಕ್ತಾರ ಜುನೈದ್​ ಬಲೂಚ್​ ಹೇಳಿದ್ದಾರೆ.

"ಕಂದಹಾರಿ ಬಜಾರ್​ನಲ್ಲಿ ನಿಲ್ಲಿಸಿದ್ದ ಪೊಲೀಸ್​ ಅಧೀಕ್ಷಕರ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ನಾಲ್ಕರಿಂದ ಐದು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಬಳಸಲಾಗಿದೆ. ಪೊಲೀಸ್​​ ವಾಹನದ ಹಿಂದೆ ನಿಲ್ಲಿಸಿದ ಮೋಟರ್​ಸೈಕಲ್​​ನಲ್ಲಿ ಬಾಂಬ್​ ಅಳವಡಿಸಿ ರಿಮೋಟ್​ನಿಂದ ಸ್ಫೋಟಿಸಲಾಗಿದೆ" ಎಂದು ಪೊಲೀಸ್​​ ಅಧಿಕಾರಿ ಶಫ್ಕತ್​ ಚೀಮಾ ತಿಳಿಸಿದರು.

ಇದನ್ನೂ ಓದಿ: ಪಾಕಿಸ್ತಾನ ಕೂಡ ಭಾರತದಂತೆ ರಷ್ಯಾದಿಂದ ಕಚ್ಚಾತೈಲ ಖರೀದಿಸಲು ಬಯಸಿತ್ತು: ಇಮ್ರಾನ್ ಖಾನ್

ಉಗ್ರರ ದಾಳಿ- 44 ಜನ ಸಾವು: ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಉತ್ತರ ಬುರ್ಕಿನಾ ಫಾಸೊದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಗಳಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿ ಸರ್ಕಾರ ಶನಿವಾರ ತಿಳಿಸಿದೆ. ಸೆನೋ ಪ್ರಾಂತ್ಯದ ಕೌರಕೌ ಮತ್ತು ತೊಂಡೋಬಿ ಮೇಲೆ ಜಿಹಾದಿಗಳು ದಾಳಿ ನಡೆಸಿದೆ. ಇಸ್ಲಾಮಿಕ್ ಉಗ್ರರ ನಿರಂತರ ದಾಳಿಯಿಂದಾಗಿ ಅಲ್ಲಿನ ಜನರು ತೀವ್ರ ತೊಂದರೆಗೀಡಾಗಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಗುವಿಗಾಗಿ 138 ವರ್ಷಗಳ ಕಾಲ ಕಾದಿತ್ತು ಆ ವಂಶ.. ಬೇಬಿ ಜನನದಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ

ಇದನ್ನೂ ಓದಿ: ಜಮ್ಮು ಕಾಶ್ಮೀರದ ನರ್ವಾಲದಲ್ಲಿ ಅವಳಿ ಬಾಂಬ್​ ಸ್ಫೋಟ, 6 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.