ಸ್ಯಾನ್ಫ್ರಾನ್ಸಿಸ್ಕೋ (ಅಮೆರಿಕ): ಟೆಸ್ಲಾ ನಿಧಿ ಭದ್ರತಾ ಪ್ರಕರಣದಲ್ಲಿ ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಎಲೋನ್ ಮಸ್ಕ್ ಅವರನ್ನು ಅಮೆರಿಕದ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ. ಟೆಸ್ಲಾ ಸಿಇಒ ಕೂಡ ಆಗಿರುವ ಎಲೋನ್ ಮಸ್ಕ್ 2018ರಲ್ಲಿ ಕಂಪನಿಯನ್ನು ಖಾಸಗಿಯಾಗಿ ತೆಗೆದುಕೊಳ್ಳಲು ಯೋಚಿಸುತ್ತಿರುವುದಾಗಿ ಮಾಡಿದ್ದ ಟ್ವೀಟ್ ಕಾನೂನು ಸಮರಕ್ಕೆ ಕಾರಣವಾಗಿತ್ತು. ಇದೀಗ ಹೂಡಿಕೆದಾರರಿಂದ ಉಂಟಾದ ನಷ್ಟಕ್ಕೆ ಎಲೋನ್ ಮಸ್ಕ್ ಜವಾಬ್ದಾರರಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
-
Thank goodness, the wisdom of the people has prevailed!
— Elon Musk (@elonmusk) February 3, 2023 " class="align-text-top noRightClick twitterSection" data="
I am deeply appreciative of the jury’s unanimous finding of innocence in the Tesla 420 take-private case.
">Thank goodness, the wisdom of the people has prevailed!
— Elon Musk (@elonmusk) February 3, 2023
I am deeply appreciative of the jury’s unanimous finding of innocence in the Tesla 420 take-private case.Thank goodness, the wisdom of the people has prevailed!
— Elon Musk (@elonmusk) February 3, 2023
I am deeply appreciative of the jury’s unanimous finding of innocence in the Tesla 420 take-private case.
ಟೆಸ್ಲಾ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತಂದಿದ್ದ ಟ್ವೀಟ್: 2018ರ ಆಗಸ್ಟ್ನಲ್ಲಿ ಎಲೋನ್ ಮಸ್ಕ್ ಟ್ವೀಟ್ವೊಂದು ಮಾಡಿ, ಟೆಸ್ಲಾವನ್ನು ಖಾಸಗಿಯಾಗಿ 420 ಡಾಲರ್ಗೆ ತೆಗೆದುಕೊಳ್ಳಲು ಪರಿಗಣಿಸುತ್ತಿದ್ದೇನೆ. ಹಣ ಸುರಕ್ಷಿತವಾಗಿದೆ. ಷೇರುದಾರರು 420 ಡಾಲರ್ಗೆ ಮಾರಾಟ ಮಾಡಬಹುದು ಅಥವಾ ಷೇರುಗಳನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ಖಾಸಗಿಯಾಗಬಹುದು ಎಂದು ಹೇಳಿದ್ದರು. ಈ ಟ್ವೀಟ್ನಿಂದಾಗಿ ಎಲೋನ್ ಮಸ್ಕ್ ತಮ್ಮ ಟೆಸ್ಲಾ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದರು.
ಮತ್ತೊಂದೆಡೆ, ಈ ಟ್ವೀಟ್‌ನ ನಂತರ ಹೂಡಿಕೆದಾರರು ಮಸ್ಕ್, ಟೆಸ್ಲಾ ಮತ್ತು ಕಂಪನಿಯ ಮಂಡಳಿಯ ಮೇಲೆ ಮೊಕದ್ದಮೆ ಹೂಡಿದ್ದರು. ಎಲೆಕ್ಟ್ರಿಕ್ ಕಾರು ಕಂಪನಿಯನ್ನು ಖಾಸಗಿಯಾಗಿ ತೆಗೆದುಕೊಳ್ಳುವ ಯೋಜನೆಗೆ ಸಂಬಂಧಿಸಿದಂತೆ ಹೇಳಿಕೆಯು ತಮ್ಮ ಕೆಟ್ಟ ಆರ್ಥಿಕ ಪರಿಣಾಮಗಳನ್ನು ಉಂಟುಮಾಡಿದೆ ಎಂದು ಹೂಡಿಕೆದಾರರು ಹೇಳಿದ್ದರು. ಇದೇ ವೇಳೆ, ಟ್ವೀಟ್ನಿಂದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಕೂಡ ಸಿವಿಲ್ ಮೊಕದ್ದಮೆ ಹೂಡುವಂತೆ ಮಾಡಿದ್ದರು.
ಸಿಇಒ ಹುದ್ದೆ ಉಳಿಸಿಕೊಂಡಿದ್ದ ಎಲೋನ್ ಮಸ್ಕ್: ಇನ್ನೊಂದೆಡೆ ಎಲೋನ್ ಮಸ್ಕ್, ಟೆಸ್ಲಾ ಸುರಕ್ಷಿತ ನಿಧಿಯ ಕುರಿತು ಟ್ವೀಟ್ ಮಾಡುವಾಗ ತಮ್ಮ ಸಲಹೆಗಾರರು ಮತ್ತು ಹೂಡಿಕೆದಾರರನ್ನು ನಿರ್ಲಕ್ಷಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು. ಜೊತೆಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಅಂತಿಮವಾಗಿ ಮಸ್ಕ್‌ನೊಂದಿಗೆ ಒಪ್ಪಂದಕ್ಕೆ ಬಂದಿತ್ತು. ಇದರ ಪ್ರಕಾರ ಎಲೋನ್ ಮಸ್ಕ್ ಮತ್ತು ಟೆಸ್ಲಾ ತಲಾ 20 ಡಾಲರ್ ಮಿಲಿಯನ್ ದಂಡವನ್ನು ಪಾವತಿಸಲು ಒಪ್ಪಿಕೊಳ್ಳಲಾಗಿತ್ತು. ಇಷ್ಟೇ ಅಲ್ಲ, ಕಂಪನಿಯ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ಸಮ್ಮತಿಸಿದ್ದ ಎಲೋನ್ ಮಸ್ಕ್, ಸಿಇಒ ಹುದ್ದೆಯನ್ನು ಉಳಿಸಿಕೊಂಡಿದ್ದರು.
ಇದೀಗ ನಾಲ್ಕು ವರ್ಷಗಳ ನ್ಯಾಯಾಲಯದ ವಿಚಾರಣೆಯಲ್ಲಿ ಎಲೋನ್ ಮಸ್ಕ್ ಹೇಳಿಕೆಗಳು ಹೂಡಿಕೆದಾರರ ನಷ್ಟಕ್ಕೆ ಕಾರಣವಾಗಲಿಲ್ಲ ಎಂದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದು, ನ್ಯಾಯಾಧೀಶರ ಸರ್ವಾನುಮತದ ತೀರ್ಪುನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಈ ತೀರ್ಪಿನ ಬಗ್ಗೆ ಎಲೋನ್ ಮಸ್ಕ್ ಮತ್ತು ಟೆಸ್ಲಾ ಪರ ವಕೀಲ ಅಲೆಕ್ಸ್ ಸ್ಪಿರೊ ಪ್ರತಿಕ್ರಿಯಿಸಿ, ನ್ಯಾಯಾಲಯದ ತೀರ್ಪು ಸರಿಯಾಗಿದ್ದು, ಎಲೋನ್ ಮಸ್ಕ್ ಹೇಳಿಕೆಗಳಿಂದ ಯಾವುದೇ ನಷ್ಟವಾಗಿಲ್ಲ ಎಂದು ಸ್ಪಷ್ಟವಾಗಿದೆ. ಇತ್ತ, ಟೆಸ್ಲಾ ಷೇರುದಾರರನ್ನು ಪ್ರತಿನಿಧಿಸುವ ಸಂಸ್ಥೆಯಾದ ಲೆವಿ ಮತ್ತು ಕೊರ್ಸಿಸ್ಕಿಯ ಪಾಲುದಾರ ನಿಕೋಲಸ್ ಪೊರಿಟ್, ಈ ತೀರ್ಪು ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟೆಸ್ಲಾ ಕಂಪನಿ ಕಾರ್ಗಳ ಮಾರಾಟ ಶೇ. 51ರಷ್ಟು ವೃದ್ಧಿ: ಹಣ ಗಳಿಕೆಯಲ್ಲಿ ಹೊಸ ದಾಖಲೆ