ETV Bharat / international

ಸಿಂಗಾಪುರದ ಅಧ್ಯಕ್ಷರಾದ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ... - ಸಿಂಗಾಪುರದ ಒಂಬತ್ತನೇ ಅಧ್ಯಕ್ಷ

ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ (66) ಶುಕ್ರವಾರ ನಡೆದ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

Singapore president
ಸಿಂಗಾಪುರ ಅಧ್ಯಕ್ಷರಾದ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ
author img

By ETV Bharat Karnataka Team

Published : Sep 2, 2023, 9:00 AM IST

Updated : Sep 2, 2023, 12:20 PM IST

ಸಿಂಗಾಪುರ: ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿ ಚುನಾಯಿತರಾದ ಥರ್ಮನ್ ಷಣ್ಮುಗರತ್ನಂ ಅವರು ಒಬ್ಬ ಖ್ಯಾತ ಅರ್ಥಶಾಸ್ತ್ರಜ್ಞ. ಮುಂದಿನ ಆರು ವರ್ಷಗಳ ಕಾಲ ಸಿಂಗಾಪುರದ ಅಧ್ಯಕ್ಷರಾಗಿ ಆಯ್ಕೆಯಾದ ಮೂರನೇ ಭಾರತೀಯ ಮೂಲದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ (66) ಅವರು ಸಿಂಗಾಪುರ ಅಧ್ಯಕ್ಷೀಯ ಚುನಾವಣಾ ಫಲಿತಾಂಶದಲ್ಲಿ ಜಯಗಳಿಸಿದ್ದಾರೆ. ಶುಕ್ರವಾರ ಬಹಿರಂಗಗೊಂಡ ಚುನಾವಣಾ ಫಲಿತಾಂಶದಲ್ಲಿ ಅವರು ಶೇ.70ಕ್ಕೂ ಹೆಚ್ಚು ಮತಗಳನ್ನು ಪಡೆದಿರುವುದು ಗಮನಾರ್ಹ. ಚಲಾವಣೆಯಾದ 20,48,000 ಮತಗಳ ಪೈಕಿ, ಶೇ.70.4 (17,46,427) ಮತಗಳು ಮಾಜಿ ಸಚಿವ ಷಣ್ಮುಗರತ್ನಂ ಅವರಿಗೆ ಬಿದ್ದಿವೆ.

ಚುನಾವಣಾ ವಿಭಾಗದ ಪ್ರಕಾರ, ಅವರ ಎದುರಾಳಿಗಳಾದ ಚೈನಾ ಮೂಲದ ಅಭ್ಯರ್ಥಿಗಳಾದ ಎನ್‌ಜಿ ಕಾಕ್ ಸಾಂಗ್ ಮತ್ತು ತಾನ್ ಕಿನ್ ಲಿಯಾನ್ ಅವರು ಕ್ರಮವಾಗಿ ಶೇ.15.72 ಮತ್ತು ಶೇ.13.88 ಮತಗಳನ್ನು ಪಡೆದರು. ಚುನಾವಣಾಧಿಕಾರಿ ಪ್ರಕಟಿಸಿದ ಈ ಫಲಿತಾಂಶಗಳೊಂದಿಗೆ, ಸಿಂಗಾಪುರದ ಭಾರತೀಯ ಮೂಲದ ಮೂರನೇ ಅಧ್ಯಕ್ಷರಾಗಿ ಷಣ್ಮುಗರತ್ನಂ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು. ಪ್ರಧಾನಿ ಲೀ ಸೀನ್ ಲೂಂಗ್ ನೇತೃತ್ವದ ಪೀಪಲ್ಸ್ ಆ್ಯಕ್ಷನ್ ಪಾರ್ಟಿ (ಪಿಎಪಿ) ಈ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರ ಪರವಾಗಿ ನಿಂತಿತು. ಈ ಹಿಂದೆ ಭಾರತೀಯ ಮೂಲದ ಎಸ್.ರಾಮನಾಥನ್ ಮತ್ತು ದೇವನ್ ನಾಯರ್ ಸಿಂಗಾಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

  • Hearty congratulations @Tharman_s on your election as the President of Singapore. I look forward to working closely with you to further strengthen the India-Singapore Strategic Partnership.

    — Narendra Modi (@narendramodi) September 2, 2023 " class="align-text-top noRightClick twitterSection" data=" ">

ಷಣ್ಮುಗರತ್ನಂಗೆ ಪ್ರಧಾನಿ ಲೀ ಸೀನ್ ಲೂಂಗ್ ಅಭಿನಂದನೆ: ''ಸಿಂಗಪುರಿಯನ್ನರು ಥರ್ಮನ್ ಷಣ್ಮುಗರತ್ನಂ ಅವರನ್ನು ನಮ್ಮ ಮುಂದಿನ ಅಧ್ಯಕ್ಷರಾಗಿ ನಿರ್ಣಾಯಕ ಅಂತರದಿಂದ ಆಯ್ಕೆ ಮಾಡಿದ್ದಾರೆ. ರಾಷ್ಟ್ರದ ಮುಖ್ಯಸ್ಥರಾಗಿ, ಅವರು ದೇಶ ಮತ್ತು ವಿದೇಶದಲ್ಲಿ ನಮ್ಮನ್ನು ಪ್ರತಿನಿಧಿಸುತ್ತಾರೆ'' ಎಂದು ಪ್ರಧಾನಿ ಲೀ ಸೀನ್ ಲೂಂಗ್ ಹೇಳಿದರು.

ಥರ್ಮನ್ ಷಣ್ಮುಗರತ್ನಂ ಮಾತು: ತಮನ್ ಜುರಾಂಗ್ ಫುಡ್ ಸೆಂಟರ್‌ನಲ್ಲಿ ಅವರ ಬೆಂಬಲಿಗರ ಮಧ್ಯೆ, ಷಣ್ಮುಗರತ್ನಂ ಅವರು, ''ಸಿಂಗಾಪುರದ ಜನರಿಂದ ತಮಗೆ ದೊರೆತ ಬಲವಾದ ಬೆಂಬಲಕ್ಕೆ ನಿಜವಾಗಿಯೂ ಕೃತಜ್ಞರಾಗಿರುತ್ತೇನೆ'' ಎಂದು ಹೇಳಿದರು. ''ಈ ಮತ ನನಗೆ ಮಾತ್ರವಲ್ಲ, ಇದು ಸಿಂಗಾಪುರದ ಭವಿಷ್ಯ, ಆಶಾವಾದ ಮತ್ತು ಒಗ್ಗಟ್ಟಿನ ಭವಿಷ್ಯಕ್ಕಾಗಿ ಮತವಾಗಿದೆ. ನನ್ನ ಅಭಿಯಾನವು ಆಶಾವಾದ ಮತ್ತು ಒಗ್ಗಟ್ಟಿನ ಮೇಲೆ ಕೇಂದ್ರೀಕೃತವಾಗಿತ್ತು. ಮತ್ತು ಸಿಂಗಾಪುರದವರಿಗೆ ಬೇಕಾಗಿರುವುದು ಇದನ್ನೇ ಎಂದು ನಾನು ನಂಬುತ್ತೇನೆ. ಸಿಂಗಾಪುರದವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ನನಗೆ ಮತ ಹಾಕದವರನ್ನು ಒಳಗೊಂಡಂತೆ ಎಲ್ಲಾ ಸಿಂಗಾಪುರದವರನ್ನು ಸಹ ಗೌರವಿಸುತ್ತೇನೆ'' ಎಂದು ಷಣ್ಮುಗರತ್ನಂ ಹೇಳಿದ್ದಾರೆ

"ದಶಕಗಳಿಂದ ಈ ನೆಲದ ಮೇಲೆ ಕೆಲಸ ಮಾಡುವುದರ ಜೊತೆಗೆ ನ್ಯಾಯಯುತ ಮತ್ತು ಹೆಚ್ಚು ಅಂತರ್ಗತ ಸಮಾಜಕ್ಕಾಗಿ ರಾಷ್ಟ್ರೀಯ ನೀತಿಗಳನ್ನು ರೂಪಿಸಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರದ ಧ್ವಜವನ್ನು ಎತ್ತರಕ್ಕೆ ಹಾರಿಸಲು ಹಲವು ವಿಧಗಳಲ್ಲಿ ನಿಮಗೆ ಸೇವೆ ಸಲ್ಲಿಸಲು ನಾನು ಆಳವಾಗಿ ಸವಲತ್ತು ಪಡೆದಿದ್ದೇನೆ" ಎಂದು ಸಿಂಗಾಪುರದ ನೂತನ ಅಧ್ಯಕ್ಷ 66 ವರ್ಷದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಹೇಳಿದರು.

ಅರ್ಥಶಾಸ್ತ್ರಜ್ಞರಿಂದ ಅಧ್ಯಕ್ಷ ಸ್ಥಾನದವರೆಗೆ: ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾದ ಥರ್ಮನ್ ಷಣ್ಮುಗರತ್ನಂ ಅವರು 2011ರಿಂದ 2019ರವರೆಗೆ ಸಿಂಗಾಪುರದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 2019 ಮತ್ತು 2023 ರ ನಡುವೆ ಅವರು ಸಂಪುಟದಲ್ಲಿ ಹಿರಿಯ ಸಚಿವರಾಗಿ ಸೇವೆ ಸಲ್ಲಿಸಿದರು. ಷಣ್ಮುಗರತ್ನಂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಹೆಸರುವಾಸಿಯಾಗಿದ್ದಾರೆ. ಅವರು 1957ರಲ್ಲಿ ಸಿಂಗಾಪುರದಲ್ಲಿ ನೆಲೆಸಿರುವ ತಮಿಳು ಕುಟುಂಬದಲ್ಲಿ ಜನಿಸಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದರು.

ನಂತರ, ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾರ್ಥಿ ದಿನಗಳಲ್ಲಿ ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು. ಥರ್ಮನ್ ಷಣ್ಮುಗರತ್ನಂ ಅವರು, "ಸಿಂಗಾಪೂರ್‌ನಲ್ಲಿ ರೋಗಶಾಸ್ತ್ರದ ಪಿತಾಮಹ" ಎಂದು ಕರೆಯಲ್ಪಡುವ ವೈದ್ಯಕೀಯ ವಿಜ್ಞಾನಿ ಪ್ರೊಫೆಸರ್ ಕೆ.ಷಣ್ಮುಗರತ್ನಂ ಅವರ ಪುತ್ರ. ಥರ್ಮನ್ ಅವರು ಸ್ಥಳೀಯ ವಕೀಲರಾದ ಜೇನ್ ಯುಮಿಕೊ ಇಟ್ಟೋಗಿ ಅವರನ್ನು ವಿವಾಹವಾದರು.

ಇದನ್ನೂ ಓದಿ: G20 Summit: ಜಿ20 ಶೃಂಗಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳಲಿದ್ದಾರೆ: ಜೋ ಬೈಡನ್ ವಿಶ್ವಾಸ

Last Updated : Sep 2, 2023, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.