ಪಪುವಾ ನ್ಯೂಗಿನಿ: ಪೂರ್ವ ಪಪುವಾ ನ್ಯೂಗಿನಿ ಪ್ರದೇಶದಲ್ಲಿ ಇಂದು ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಸಾವು-ನೋವು ಮತ್ತು ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಕಂಪನವು ಭೂಮೇಲ್ಮೈಯಿಂದ 80 ಕೀ.ಮೀ.(49.7 ಮೈಲುಗಳು) ಆಳದಲ್ಲಿ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.
ಬಿರುಕು ಬಿಟ್ಟ ರಸ್ತೆಗಳು, ಹಾನಿಗೊಳಗಾದ ಕಟ್ಟಡಗಳು ಮತ್ತು ಕಾರುಗಳು ಮತ್ತು ಸೂಪರ್ ಮಾರ್ಕೆಟ್ ಕಪಾಟಿನಿಂದ ಬೀಳುವ ವಸ್ತುಗಳ ಚಿತ್ರಗಳು ಮತ್ತು ವಿಡಿಯೊಗಳನ್ನು ಅಲ್ಲಿನ ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಭೂಕಂಪನದಿಂದ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿತ್ತು. ನಂತರ ಇದರ ಪರಿಣಾಮ ತಗ್ಗಿರುವುದಾಗಿ ಹೇಳಿದೆ. ಆಸ್ಟ್ರೇಲಿಯಾಕ್ಕೆ ಯಾವುದೇ ಸುನಾಮಿ ಮುನ್ನೆಚ್ಚರಿಕೆ ಇಲ್ಲ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ.
ಪೆಸಿಫಿಕ್ ಮಹಾಸಾಗರದ 'ರಿಂಗ್ ಆಫ್ ಫೈರ್'ನಲ್ಲಿರುವ ಪಪುವಾ ನ್ಯೂಗಿನಿಯಲ್ಲಿ ಭೂಕಂಪಗಳು ಸಾಮಾನ್ಯವಾಗಿವೆ. 2018 ರಲ್ಲಿಯೂ 7.5 ತೀವ್ರತೆಯ ಭೂಕಂಪವು ಪಿಎನ್ಜಿ ಪರ್ವತಗಳಲ್ಲಿ ಸಂಭವಿಸಿ ಸುಮಾರು 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಭಾರತದ ಕೊಹಿನೂರ್ ಸೇರಿ ಬ್ರಿಟನ್ ದೋಚಿದ ಅಮೂಲ್ಯ ವಸ್ತುಗಳ್ಯಾವುವು ಗೊತ್ತೇ?