ETV Bharat / international

ಫಿಜಿಯಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ ಶೇ.6ರಷ್ಟು ತೀವ್ರತೆ ದಾಖಲು

ದಕ್ಷಿಣ ಪೆಸಿಫಿಕ್‌ನಲ್ಲಿರುವ ಫಿಜಿ ದ್ವೀಪ ರಾಷ್ಟ್ರದಲ್ಲಿ ಶೇ.6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಪ್ರಾಣಹಾನಿ ಇನ್ನೂ ವರದಿಯಾಗಿಲ್ಲ.

Earthquake of magnitude 6.3 strikes Fiji
ಫಿಜಿಯಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ ಶೇ.6ರಷ್ಟು ತೀವ್ರತೆ ದಾಖಲು
author img

By

Published : Apr 18, 2023, 12:55 PM IST

ಸುವಾ (ಫಿಜಿ): ಫಿಜಿಯಲ್ಲಿ ಮಂಗಳವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಫಿಜಿ ದಕ್ಷಿಣ ಪೆಸಿಫಿಕ್‌ನಲ್ಲಿರುವ ಒಂದು ದೇಶವಾಗಿದ್ದು, ಇದು 300ಕ್ಕೂ ಹೆಚ್ಚು ದ್ವೀಪಗಳ ಸಮೂಹ ರಾಷ್ಟ್ರವಾಗಿದೆ.

ಇಂದು ಬೆಳಗ್ಗೆ 10.01ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ. ಫಿಜಿಯ 569 ಕಿಲೋ ಮೀಟರ್​ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ6.3ರಷ್ಟು ತೀವ್ರತೆಯ ಕಂಪನ ಉಂಟಾಗಿದೆ. ಸುವಾದಿಂದ 485 ಕಿಲೋ ಮೀಟರ್​ ದೂರದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ಕೇಂದ್ರ ಟ್ವೀಟ್​ ಮಾಡಿದೆ. ಇದೇ ವೇಳೆ ಯಾವುದೇ ಪ್ರಾಣಹಾನಿ ಇನ್ನೂ ವರದಿಯಾಗಿಲ್ಲ. ಫಿಜಿಯಲ್ಲಿ ಒಂದು ವಾರದಲ್ಲಿ ಎರಡನೇ ಬಾರಿಗೆ ಭೂಕಂಪ ಉಂಟಾಗಿದೆ. ಇದಕ್ಕೂ ಮುನ್ನ ಕಳೆದ ಗುರುವಾರ ಫಿಜಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.

ಇದನ್ನೂ ಓದಿ: ನ್ಯೂಜಿಲೆಂಡ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ: ಸುನಾಮಿ ಭೀತಿ ಇಲ್ಲ

ಮತ್ತೊಂದೆಡೆ, ಏಪ್ರಿಲ್ 9 ಮತ್ತು 10ರಂದು​ ಅಂಡಮಾನ್​ ಮತ್ತು ನಿಕೋಬಾರ್ ದ್ವೀಪದಲ್ಲಿ ಆರು ಬಾರಿ ಭೂಮಿ ಕಂಪಿಸಿತ್ತು. ಭಾನುವಾರ ಮಧ್ಯಾಹ್ನದಿಂದ ಸೋಮವಾರ ನಸುಕಿನ ಜಾವದವರೆಗೆ ಸಂಭವಿಸಿದ ಈ ಭೂಕಂಪನದಿಂದ ನಿವಾಸಿಗಳು ಭಯಭೀತರಾಗಿದ್ದರು. ಇಲ್ಲಿನ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ನಸುಕಿನ ಜಾವ 2.26 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿತ್ತು. ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್​ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿ, 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.4.6ರಷ್ಟು ತೀವ್ರತೆಯ ಕಂಪನ ಉಂಟಾಗಿತ್ತು ಎಂದು ಭೂಕಂಪಶಾಸ್ತ್ರದ ಕೇಂದ್ರ ಹೇಳಿತ್ತು.

ಇದನ್ನೂ ಓದಿ: ಅಂಡಮಾನ್​ ಮತ್ತು ನಿಕೋಬಾರ್​ದಲ್ಲಿ ಭೂಕಂಪ.. 13 ಗಂಟೆ ಅವಧಿಯಲ್ಲಿ 6 ಬಾರಿ ಕಂಪಿಸಿದ ಭೂಮಿ!

ಇದೇ ಏಪ್ರಿಲ್​ 3ರಂದು ಆಸ್ಟ್ರೇಲಿಯಾದ ಪಪುವಾ ನ್ಯೂ ಗಿನಿಯಾದಲ್ಲೂ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಶೇ7ರಷ್ಟು ತೀವ್ರತೆಯ ಕಂಪನ ದಾಖಲಾಗಿತ್ತು. ಪರಿಣಾಮ ನಾಲ್ವರು ಸಾವನ್ನಪ್ಪಿರುವ ಮತ್ತು ಸುಮಾರು 17 ಜನರು ಗಾಯಗೊಂಡಿರುವ ವರದಿಯಾಗಿತ್ತು. ಅಲ್ಲದೇ, 300ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

ಪೆಸಿಫಿಕ್ ರಾಷ್ಟ್ರದ ಉತ್ತರ ಭಾಗದಲ್ಲಿರುವ ಚಂಬ್ರಿ ಸರೋವರದ ಸಮೀಪ ಈ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿತ್ತು. ಭೂಕಂಪದ ಕೇಂದ್ರ ಬಿಂದುವಿನ ಸುತ್ತಲಿನ 23 ಹಳ್ಳಿಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿತ್ತು. ಈ ಪ್ರದೇಶವು ಜೌಗು ಪ್ರದೇಶಗಳಿಂದ ಕೂಡಿದ್ದು, ಭೂಮಿಯಲ್ಲಿ ಆಳವಾದ ಬಿರುಕುಗಳು ಉಂಟಾಗಿದ್ದವು. ಇಲ್ಲಿನ ಜನರು ಬೇಟೆ ಮತ್ತು ಮೀನುಗಾರಿಕೆಯನ್ನು ಜೀವನಾಧಾರವಾಗಿಸಿಕೊಂಡು ಬದುಕು ಸಾಗಿಸುತ್ತಾರೆ ಎಂದು ಪೋರ್ಟ್ ಮೊರೆಸ್ಬಿ ಜಿಯೋಫಿಸಿಕಲ್ ಅಬ್ಸರ್ವೇಟರಿಯ ಕಾರ್ಯನಿರ್ವಾಹಕ ಸಹಾಯಕ ನಿರ್ದೇಶಕ ಮ್ಯಾಥ್ಯೂ ಮೊಯಿಹೊಯ್ ತಿಳಿಸಿದ್ದರು.

ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಪ್ರಬಲ ಭೂಕಂಪ.. 300ಕ್ಕೂ ಹೆಚ್ಚು ಮನೆಗಳು ನಾಶ, ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.