ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ನ್ಯೂಜಿಲೆಂಡ್ನಲ್ಲಿ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಕ್ರೈಸ್ಟ್‌ಚರ್ಚ್‌ನಿಂದ 124 ಕಿ.ಮೀ ದೂರ, ಭೂಮಿಯ 11 ಕಿ.ಮೀ ಆಳದಲ್ಲಿ ಘಟನೆ ಜರುಗಿದೆ. ಹೆಚ್ಚು ಆಳದಲ್ಲಿ ನಡೆಯುವ ಕಂಪನಗಳು ಅಪಾಯಕಾರಿಯಾಗಿರುತ್ತವೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
11 ಕಿ.ಮೀ ಆಳದಲ್ಲಿ ಭೂಕಂಪನ ಉಂಟಾಗಿದ್ದರೂ ಸುನಾಮಿ ಅಪಾಯದ ಸಾಧ್ಯತೆ ಬಗ್ಗೆ ಜನರು ಗಾಬರಿಗೊಂಡಿದ್ದರು. ಆದರೆ ಸುನಾಮಿ ಸಂಭವಿಸುವ ಯಾವುದೇ ವರದಿಗಳಿಲ್ಲ ಎಂದು ನ್ಯೂಜಿಲೆಂಡ್‌ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿದೆ. ಜಿಯೋನೆಟ್ ಮಾನಿಟರಿಂಗ್ ಏಜೆನ್ಸಿ 14,000ಕ್ಕೂ ಹೆಚ್ಚಿನ ಜನರಿಗೆ ಭೂಕಂಪದ ಅನುಭವವಾಗಿದೆ ಎಂದು ವರದಿ ಮಾಡಿದೆ.
ಸುನಾಮಿ ಭಯವಿಲ್ಲ: ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಭೂಕಂಪನದಿಂದ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿ ಭಯವಿಲ್ಲ. ತುರ್ತು ಸಂದರ್ಭಗಳಿದ್ದರೆ ದೇಶದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆ ಟ್ವೀಟ್ ಮಾಡಿದೆ.
ಕೆಲದಿನಗಳ ಹಿಂದೆ ನ್ಯೂಜಿಲೆಂಡ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.2 ಎಂದು ಅಳೆಯಲಾಗಿತ್ತು. ಬಳಿಕ ಸುಮಾರು 20 ನಿಮಿಷಗಳ ಕೆರ್ಮಾಡೆಕ್ ದ್ವೀಪದಲ್ಲಿ ಕೂಡ ಭುಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.4 ಎಂದು ಅಳೆಯಲಾಗಿತ್ತು. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಬವಿಸಿದಿಲ್ಲ.
ಸೋಮವಾರ ತೈವಾನ್ನ ಈಶಾನ್ಯಭಾಗದಲ್ಲಿ 6.3 ತೀವ್ರತೆಯ ಭೂಕಂಪನ ಉಂಟಾಗಿತ್ತು. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಈ ಘಟನಾವಳಿಯನ್ನು ವರದಿ ಮಾಡಿತ್ತು. ಭೂಕಂಪನ ಕೇಂದ್ರಬಿಂದು 185 ಕಿ.ಮೀ ಆಳದಲ್ಲಿತ್ತು. ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಕೆಲವು ದಿನಗಳ ಹಿಂದೆ ಇಂಡೋನೇಷ್ಯಾದ ದ್ವೀಪ ಬಾಲಿ ಮತ್ತು ದೇಶದ ಇತರ ಭಾಗಗಳಲ್ಲಿ ಪ್ರಬಲ ಭೂಕಂಪನ ಉಂಟಾಗಿತ್ತು. 513.5 ಕಿಲೋಮೀಟರ್ ಆಳದಲ್ಲಿ 7.1 ತೀವ್ರತೆಯ ಕಂಪನವಾಗಿತ್ತು.
ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಭಾರಿ ಪ್ರಮಾಣದ ಭೂಕಂಪನ ಜರುಗಿತ್ತು. ಇಲ್ಲಿಯ ಟೆರ್ನೇಟ್ ಪ್ರದೇಶದ ಜನರಿಗೆ ಕಂಪನದ ಅನುಭವವಾಗಿತ್ತು. ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ದಾಖಲಾಗಿತ್ತು. ಸುನಾಮಿ ಅಪಾಯವಿಲ್ಲ ಎಂದು ಹೇಳಲಾಗಿತ್ತು. ಯಾವುದೇ ಹಾನಿ ಅಥವಾ ಸಾವುನೋವು ಸಂಭವಿಸಿದ ಬಗ್ಗೆ ವರದಿಯಾಗಿರಲಿಲ್ಲ. ಇಂಡೋನೇಷ್ಯಾವು 'ಪೆಸಿಫಿಕ್ ರಿಂಗ್ ಆಫ್ ಫೈರ್' ವಲಯದಲ್ಲಿದೆ. ಈ ಪ್ರದೇಶ ಹಲವಾರು ಟೆಕ್ಟೋನಿಕ್ ಪ್ಲೇಟ್‌ಗಳ ಮೇಲಿರುವ ಕಾರಣ ಇಲ್ಲಿ ಆಗಾಗ್ಗೆ ಕಂಪನಗಳು ಸಂಭವಿಸುತ್ತಿರುತ್ತವೆ. ಕಳೆದ ತಿಂಗಳು ಮಧ್ಯ ಮೆಕ್ಸಿಕೋದ ಕರಾವಳಿ ಭಾಗದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಮಧ್ಯರಾತ್ರಿ ಸಂಭವಿಸಿದ ಕಂಪನದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ತೈವಾನ್ ಈಶಾನ್ಯ ಭಾಗದಲ್ಲಿ 6.3 ತೀವ್ರತೆಯ ಭೂಕಂಪನ