ಲಂಡನ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾನುವಾರ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ಎಸ್ ಜೈಶಂಕರ್ ಅವರು ತಮ್ಮ ಪತ್ನಿ ಕ್ಯೋಕೋ ಜೈಶಂಕರ್ ಅವರೊಂದಿಗೆ ಯುಕೆ ಪ್ರಧಾನಿಯನ್ನು ಭೇಟಿಯಾಗಿ ಗಣೇಶನ ವಿಗ್ರಹವನ್ನು ಮತ್ತು ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಯುಕೆ ಪ್ರಧಾನಿ ಕಾರ್ಯಾಲಯವು ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದೆ.
ಯುಕೆ ಪ್ರಧಾನಮಂತ್ರಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಸಾಮಾಜಿಕ ಮಾಧ್ಯಮ ವೇದಿಕೆಯ ಅಧಿಕೃತ ಹ್ಯಾಂಡಲ್‌ನಲ್ಲಿ ಭಾರತ ಮತ್ತು ಯುಕೆ ಪ್ರಸ್ತುತ ಸಮಯದೊಂದಿಗೆ ನಮ್ಮ ಸಂಬಂಧಗಳನ್ನು ಬೆಳೆಸಲು ಮತ್ತು ಬಲಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಜಗತ್ತಿನಾದ್ಯಂತ ಇರುವ ಎಲ್ಲಾ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳು ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
-
Delighted to call on Prime Minister @RishiSunak on #Diwali Day. Conveyed the best wishes of PM @narendramodi.
— Dr. S. Jaishankar (@DrSJaishankar) November 12, 2023 " class="align-text-top noRightClick twitterSection" data="
India and UK are actively engaged in reframing the relationship for contemporary times.
Thank Mr. and Mrs. Sunak for their warm reception and gracious hospitality. pic.twitter.com/p37OLqC40N
">Delighted to call on Prime Minister @RishiSunak on #Diwali Day. Conveyed the best wishes of PM @narendramodi.
— Dr. S. Jaishankar (@DrSJaishankar) November 12, 2023
India and UK are actively engaged in reframing the relationship for contemporary times.
Thank Mr. and Mrs. Sunak for their warm reception and gracious hospitality. pic.twitter.com/p37OLqC40NDelighted to call on Prime Minister @RishiSunak on #Diwali Day. Conveyed the best wishes of PM @narendramodi.
— Dr. S. Jaishankar (@DrSJaishankar) November 12, 2023
India and UK are actively engaged in reframing the relationship for contemporary times.
Thank Mr. and Mrs. Sunak for their warm reception and gracious hospitality. pic.twitter.com/p37OLqC40N
ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಸ್ತುತ ಬ್ರಿಟನ್ ಪ್ರವಾಸದಲ್ಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳನ್ನು ಪರಿಶೀಲಿಸುವ ಮತ್ತು "ಸೌಹಾರ್ದ ಸಂಬಂಧಗಳಿಗೆ ಹೊಸ ವೇಗ" ನೀಡುವ ಉದ್ದೇಶದಿಂದ ಜೈಶಂಕರ್ ಅವರು ಐದು ದಿನಗಳ ಬ್ರಿಟನ್ ಭೇಟಿಗಾಗಿ ಲಂಡನ್‌ಗೆ ತೆರಳಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಯುಕೆ ಕೌಂಟರ್ಪಾರ್ಟ್ ಜೇಮ್ಸ್ ಕ್ಲೆವರ್ಲಿ ಅವರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಶನಿವಾರ ಬ್ರಿಟನ್ ತಲುಪಿರುವ ಅವರು ನವೆಂಬರ್ 15 ರಂದು ಹಿಂದುರುಗಲಿದ್ದಾರೆ. ಜೈಶಂಕರ್ ಅವರು ತಮ್ಮ ಭೇಟಿಯ ವೇಳೆ ಇತರ ಹಲವು ಗಣ್ಯರನ್ನು ಸಹ ಭೇಟಿಯಾಗಲಿದ್ದಾರೆ.
ಇದಕ್ಕೂ ಮೊದಲು ವಿದೇಶಾಂಗ ಸಚಿವರು, ದೀಪಾವಳಿಯ ಶುಭ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಈ ಬೆಳಕಿನ ಹಬ್ಬವು ಪ್ರತಿಯೊಬ್ಬರ ಜೀವನವನ್ನು ಬೆಳಗಲಿ ಮತ್ತು ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸುತ್ತೇನೆ ಅಂತಾ ಭಾನುವಾರ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರಿಟನ್‌ನಲ್ಲಿರುವ ಜೈಶಂಕರ್ ಅವರು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇಂದು ಅವರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಆಯೋಜಿಸಿರುವ ದೀಪಾವಳಿ ಆರತಕ್ಷತೆಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. '100 ಕೋಟಿ ಜನರು ಜಗತ್ತನ್ನು ಹೇಗೆ ನೋಡುತ್ತಾರೆ' ಎಂಬ ವಿಷಯದ ಕುರಿತು ಅವರು ಮುಂದಿನ ವಾರ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.
ಓದಿ: ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿದ ಮೋದಿ: 'ದೇಶ ನಿಮಗೆ ಋಣಿ' ಎಂದ ಪ್ರಧಾನಿ