ETV Bharat / international

ಎರಡು ವರ್ಷಗಳ ನಿಷೇಧದ ನಂತರ ಫೇಸ್​ಬುಕ್​​ - ಯೂಟ್ಯೂಬ್​​ಗೆ ಮರಳಿದ ಟ್ರಂಪ್​​ - ಸಾಮಾಜಿಕ ತಾಣವಾದ ಫೇಸ್‌ಬುಕ್

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಜೆ ಟ್ರಂಪ್​ ಫೇಸ್ಬುಕ್​ ಖಾತೆ ಮತ್ತು ಯೂಟ್ಯೂಬ್​ ಖಾತೆಯನ್ನು ಮರುಸ್ಥಾಪಿಸಲಾಗಿದೆ.

donald-j-trump-returned-to-facebook-and-youtube-after-a-two-years-ban
ಎರಡು ವರ್ಷಗಳ ನಿಷೇಧದ ನಂತರ ಫೇಸ್​ಬುಕ್​​ ಮತ್ತು ಯೂಟ್ಯೂಬ್​​ಗೆ ಮರಳಿದ ಟ್ರಂಪ್​​
author img

By

Published : Mar 18, 2023, 9:59 AM IST

ನ್ಯೂಯಾರ್ಕ್ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ವರ್ಷಗಳ ನಿಷೇಧದ ನಂತರ ಮತ್ತೆ ಫೇಸ್‌ಬುಕ್‌ಗೆ ಮರಳಿದ್ದಾರೆ. ಈ ಕುರಿತು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್, '​​ನಾನು ಮರಳಿದ್ದೇನೆ, ನಿಮ್ಮನ್ನು ಕಾಯಿಸಿರುವುದಕ್ಕೆ ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಹಳೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಡೊನಾಲ್ಡ್​​ ಟ್ರಂಪ್​ ಅವರ ನಿರ್ಬಂಧವನ್ನು ತೆರವುಗೊಳಿಸಿರುವ ಬಗ್ಗೆ ಶುಕ್ರವಾರ ಟ್ವೀಟ್​ ಮಾಡಿರುವ ಯೂಟ್ಯೂಬ್​," ಡೊನಾಲ್ಡ್ ಟ್ರಂಪ್ ಅವರ ಚಾನೆಲ್​ನ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಇನ್ನು ಅವರು ಹೊಸ ವಿಷಯವನ್ನು ಅಪ್‌ಲೋಡ್ ಮಾಡಬಹುದು" ಎಂದು ಹೇಳಿದೆ.

ಕಳೆದ 2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಸೋತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಟ್ರಂಪ್​ ಬೆಂಬಲಿಗರು ಯುಎಸ್​​ ಕ್ಯಾಪಿಟಲ್​ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆ ಟ್ರಂಪ್​ ಅವರ ಫೇಸ್​​ಬುಕ್​ ಮತ್ತು ಯೂಟ್ಯೂಬ್​ ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಎರಡು ವರ್ಷಗಳ ನಿಷೇಧದ ನಂತರ ಕಳೆದ ಜನವರಿ ತಿಂಗಳಲ್ಲಿ ಮೇಟಾ ಸಂಸ್ಥೆ ಟ್ರಂಪ್​ ಅವರ ಖಾತೆ ಮರಳಿ ನೀಡುವುದಾಗಿ ಘೋಷಣೆ ಮಾಡಿತ್ತು.

ಫೆಬ್ರವರಿ 9ರಂದು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌, ಟ್ರಂಪ್​ ಅವರ ಖಾತೆಯನ್ನು ಮರುಸ್ಥಾಪಿಸಲಾಗಿದೆ ಎಂದು ದೃಢಪಡಿಸಿತ್ತು. ಈ ಬಗ್ಗೆ ಮೆಟಾದ ಜಾಗತಿಕ ವ್ಯವಹಾರಗಳ ಉಪಾಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದು, ಇನ್ನು ಸಾರ್ವಜನಿಕರು ತಮ್ಮ ರಾಜಕಾರಣಿಗಳು ಏನೇನು ಹೇಳುತ್ತಾರೆ ಎಂದು ಕೇಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಾರ್ವಜನಿಕರು ಮತಪೆಟ್ಟಿಗೆಯಲ್ಲಿ ತಿಳಿವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು ಎಂದು ಬರೆದಿದ್ದಾರೆ. ಇನ್ನು ತನ್ನ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮೆಟಾ ಇದೇ ವೇಳೆ ತಿಳಿಸಿದೆ.

ವಿಶ್ವದ ಅತಿ ದೊಡ್ಡ ಸಾಮಾಜಿಕ ತಾಣವಾದ ಫೇಸ್‌ಬುಕ್, ಟ್ರಂಪ್‌ ಅವರ ಹಿಂದಿನ ಎರಡೂ ಚುನಾವಣಾ ಪ್ರಚಾರಗಳಿಗೆ ಸಾರ್ವಜನಿಕ ಸಾಧನ ಮತ್ತು ನಿಧಿಸಂಗ್ರಹಣೆಯು ಆದಾಯದ ನಿರ್ಣಾಯಕ ಪಾತ್ರವಹಿಸಿತ್ತು. ಈ ಹಿಂದೆ ಎಲೋನ್ ಮಸ್ಕ್ ಅವರು ಟ್ವಿಟರ್​ ಕಂಪನಿಯನ್ನು ತೆಗೆದುಕೊಂಡ ಬಳಿಕ ಕಳೆದ ವರ್ಷ ಟ್ರಂಪ್ ಅವರ ಟ್ವಿಟರ್​ ಖಾತೆಯನ್ನು ಮರು ಸ್ಥಾಪಿಸಿತ್ತು. ಆದರೆ, ಟ್ರಂಪ್​ ಟ್ವೀಟ್​ ಮಾಡದೇ ತಮ್ಮ ಸ್ವಂತ ಸಾಮಾಜಿಕ ಜಾಲತಾಣದಲ್ಲಿ ವಿಷಯಗಳನ್ನು ಅಪ್ಲೋಡ್​ ಮಾಡುತ್ತಿದ್ದರು.

ಟೆಕ್ಸಾಸ್‌ನಲ್ಲಿ ಟ್ರಂಪ್​ ರ‍್ಯಾಲಿ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಪ್ರಚಾರ ಕಾರ್ಯ ಆರಂಭಿಸಿದ್ದು, ತಮ್ಮ ಮೊದಲ ರ‍್ಯಾಲಿಯನ್ನು ಇದೇ ತಿಂಗಳ ಕೊನೆಯಲ್ಲಿ ಟೆಕ್ಸಾಸ್‌ನ ವಾಕೊದಲ್ಲಿ ನಡೆಸಲಿದ್ದಾರೆ. ಮಾರ್ಚ್ 25ರ ಸಂಜೆ ರ‍್ಯಾಲಿ ನಡೆಯಲಿದ್ದು, ಈ ಕ್ಷೇತ್ರದಲ್ಲಿ ಟ್ರಂಪ್​ ಅವರು ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ. ಅಲ್ಲದೇ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ.

ಟ್ರಂಪ್ ಅವರು ಸಾಮಾನ್ಯವಾಗಿ ಫ್ಲೋರಿಡಾದ ಮಾರ್-ಎ-ಲಾಗೊ ಕ್ಲಬ್‌ಗೆ ಮೊದಲ ಪ್ರಚಾರವನ್ನು ಸೀಮಿತಗೊಳಿಸುತ್ತಿದ್ದರು. ಆದರೆ, ಕಳೆದ ಸೋಮವಾರ, ಅಯೋವಾಕ್ಕೆ ತಮ್ಮ ಮೊದಲ ಪ್ರವಾಸ ಕೈಗೊಂಡು ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ.

ಇನ್ನು, ಟ್ರಂಪ್​ ಅವರು ಸರಣಿ ಪ್ರಕರಣಗಳ ತನಿಖೆ ಎದುರಿಸುತ್ತಿದ್ದು, ಬುಧವಾರ ಪೋರ್ನ್ ಸ್ಟಾರ್​​ ಸ್ಟಾರ್ಮಿ ಡೇನಿಯಲ್ಸ್ ಮ್ಯಾನ್‌ಹ್ಯಾಟನ್ ಪ್ರಾಸಿಕ್ಯೂಟರ್‌ಗಳನ್ನು ಭೇಟಿಯಾಗಿದ್ದಾರೆ. ಈ ಪ್ರಕರಣದಲ್ಲಿ ಟ್ರಂಪ್ ಪರವಾಗಿ ಸ್ಟಾರ್ಮಿ ಹಣ ಪಡೆದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯನ್ನು ರಾಜಕೀಯ ಪ್ರೇರಿತ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ : ಅಧ್ಯಕ್ಷ ಪುಟಿನ್​ ಬಂಧನಕ್ಕೆ ಅಂತಾರಾಷ್ಟ್ರೀಯ ಕೋರ್ಟ್​ ವಾರಂಟ್​..ರಷ್ಯಾದ ಪ್ರತಿಕ್ರಿಯೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.