ETV Bharat / international

ಜಪಾನ್​ ಭೂಕಂಪನ: 57ಕ್ಕೇರಿದ ಸಾವಿನ ಸಂಖ್ಯೆ, 200ಕ್ಕೂ ಹೆಚ್ಚು ಮನೆಗಳಿಗೆ ಹಾನಿ - ಜಪಾನ್​ ಅನಾಹುತ

ಜಪಾನ್​ನಲ್ಲಿ ಉಂಟಾದ ಪ್ರಬಲ ಭೂಕಂಪನದಲ್ಲಿ ಸಾವಿನ ಸಂಖ್ಯೆ ಏರಿಯಾಗುತ್ತಲೇ ಇದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

earthquake-in-japan
ಜಪಾನ್​ ಭೂಕಂಪನ
author img

By ANI

Published : Jan 3, 2024, 7:27 AM IST

ಟೋಕಿಯೊ(ಜಪಾನ್) : ಹೊಸ ವರ್ಷದ ಮೊದಲ ದಿನವೇ ಜಪಾನ್​ನಲ್ಲಿ ತಲ್ಲಣ ಸೃಷ್ಟಿಸಿದ್ದ ಪ್ರಬಲ ಭೂಕಂಪನದಲ್ಲಿ ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ನೂರಾರು ಕಟ್ಟಡಗಳು ನೆಲಸಮವಾಗಿವೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಸಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನ ಇಶಿಕಾವಾ ಪ್ರದೇಶದಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿತ್ತು. ಇದರಿಂದ ಪ್ರಾಂತ್ಯದ ನೋಟೊ ಪೆನಿನ್ಸುಲಾ ತೀವ್ರ ಹಾನಿಗೀಡಾಗಿದೆ. ಬಳಿಕ ದೊಡ್ಡ ಸುನಾಮಿ ಏಳುವ ಭೀತಿ ಉಂಟಾಗಿತ್ತು. ಬಳಿಕ ಸಣ್ಣ ಪ್ರಮಾಣದಲ್ಲಿ ಸುನಾಮಿ ಉಂಟಾಗಿ, ಕೆಲವೆಡೆ ಅನಾಹುತ ಸೃಷ್ಟಿಸಿದೆ. ಇದೇ ವೇಳೆ ಪೂರ್ವ ರಷ್ಯಾ ಭಾಗದಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಹಾನಿಗೀಡಾದ ನೋಟೊ ಪೆನಿನ್ಸುಲಾದ ಉತ್ತರ ಭಾಗವು ಭೂಕಂಪದ ನಂತರ 24 ಗಂಟೆಗಳಿಗೂ ಹೆಚ್ಚು ಕಾಲ ಸಂಪರ್ಕ ಕಡಿತಗೊಂಡಿತ್ತು. ರಸ್ತೆಗಳು ಹಾನಿಯಾಗಿದ್ದು, ಕಟ್ಟಡಗಳು ಧರಾಶಾಹಿಯಾಗಿವೆ. ತೀವ್ರ ಆತಂಕ ಸೃಷ್ಟಿಸಿದ್ದ ಸುನಾಮಿಯು ಪಥ ಬದಲಿಸಿದ ಕಾರಣ ಜಪಾನ್‌ನ ಹವಾಮಾನ ಸಂಸ್ಥೆ ದೇಶದ ಪಶ್ಚಿಮ ಕರಾವಳಿಯ ಭಾಗಗಳಲ್ಲಿ ನೀಡಿದ್ದ ಎಚ್ಚರಿಕೆಯನ್ನು ಮಂಗಳವಾರ ವಾಪಸ್​ ಪಡೆದಿತ್ತು.

ವೈಮಾನಿಕ, ಜಲಮಾರ್ಗದ ಮೂಲಕ ನೆರವು: ಪ್ರಕೃತಿ ವಿಕೋಪದ ಬಳಿಕ ಸರ್ಕಾರ ವಿಪತ್ತು ತುರ್ತು ಸಭೆ ನಡೆಸಿತು. ಹಾನಿಗೀಡಾದ ಪ್ರದೇಶಕ್ಕೆ ತುರ್ತು ನೆರವು ನೀಡಲು ಸೂಚಿಸಿತು. ಬಳಿಕ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರು ಅಲ್ಲಿನ ರಸ್ತೆಗಳು ತೀವ್ರ ಹಾನಿಗೀಡಾಗಿದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ. ವಾಯುಮಾರ್ಗದ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

ಕೃಷಿ ಮತ್ತು ಕಡಲ ಸೌಂದರ್ಯಕ್ಕೆ ಹೆಸರುವಾಸಿಯಾದ ನೋಟೊ ಪೆನಿನ್ಸುಲಾದ ಹಾನಿಯನ್ನು ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ ವೀಕ್ಷಿಸಿದರು. ಭೂಕುಸಿತಗಳು ಮತ್ತು ಹಾನಿಗೊಳಗಾದ ರಸ್ತೆಗಳು ಕಂಡುಬಂದವು. ಸಂಪರ್ಕಕ್ಕೆ ಮಾರ್ಗಗಳನ್ನು ದುರಸ್ತಿ ಮಾಡಲಾಗುತ್ತಿದೆ. ವೈಮಾನಿಕ ಮತ್ತು ಜಲಮಾರ್ಗದ ಮೂಲಕ ನೆರವು ನೀಡಲಾಗುತ್ತಿದೆ. ಅಗತ್ಯ ಸರಕುಗಳು, ಸಿಬ್ಬಂದಿಯನ್ನು ಅಲ್ಲಿಗೆ ವರ್ಗಾಯಿಸುವ ಪ್ರಯತ್ನ ನಡೆಸಲಾಗಿದೆ ಎಂದು ಪ್ರಧಾನಿ ಕಿಶಿದಾ ಹೇಳಿದರು.

200 ಕಟ್ಟಡಗಳಿಗೆ ಹಾನಿ: ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ವಾಜಿಮಾ ನಗರದಲ್ಲಿ ಮನೆಗಳು ಸೇರಿದಂತೆ 25 ಕಟ್ಟಡಗಳು ಕುಸಿದಿವೆ. ಕವಾಯಿ ಟೌನ್‌ನಲ್ಲಿ ಬೆಂಕಿ ಅವಘಡ ಕೂಡ ಸಂಭವಿಸಿದೆ. ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಜನಪ್ರಿಯ ಪ್ರವಾಸಿ ತಾಣವಾದ ಅಸೈಚಿ ಸ್ಟ್ರೀಟ್‌ನ ಸುತ್ತಲೂ ಅಂಗಡಿಗಳು ಮತ್ತು ಮನೆಗಳು ಸೇರಿದಂತೆ ಒಟ್ಟು 200 ಕಟ್ಟಡಗಳು ಹಾನಿಗೀಡಾಗಿವೆ ಎಂದು ತಿಳಿಸಿದ್ದಾರೆ.

ಇಶಿಕಾವಾ ಪ್ರಾಂತ್ಯದಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಪ್ರಬಲ ಭೂಕಂಪಗಳು ಮತ್ತೆ ಸಂಭವಿಸಬಹುದು ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಜಪಾನ್​ ಭೂಕಂಪ: ಸಾವಿನ ಸಂಖ್ಯೆ 24ಕ್ಕೆ ಏರಿಕೆ, ಸುನಾಮಿ ಆತಂಕ ದೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.