ETV Bharat / international

ಫುಟ್ಬಾಲ್​ ಆಟಗಾರ ರೊನಾಲ್ಡೊರ ನವಜಾತ ಅವಳಿ ಮಕ್ಕಳಲ್ಲಿ ಗಂಡು ಮಗು ಸಾವು - ಕ್ರಿಸ್ಟಿಯಾನೋ ರೊನಾಲ್ಡೊ ಅವರ ನವಜಾತ ಅವಳಿ ಮಕ್ಕಳಲ್ಲಿ ಗಂಡು ಮಗು ಸಾವು

ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ನವಜಾತ ಅವಳಿ ಮಕ್ಕಳಲ್ಲಿ ಗಂಡು ಮಗು ಮೃತಪಟ್ಟಿರುವುದಾಗಿ ಸಾಮಾಜಿಕ ಜಾಲತಾಣ ಬಹಿರಂಗಪಡಿಸಿದ್ದಾರೆ.

cristiano-ronaldo-says-one-of-his-newborn-twins-has-died
ಕ್ರಿಸ್ಟಿಯಾನೋ ರೊನಾಲ್ಡೊ ಅವರ ನವಜಾತ ಅವಳಿ ಮಕ್ಕಳಲ್ಲಿ ಗಂಡು ಮಗು ಸಾವು
author img

By

Published : Apr 19, 2022, 7:24 AM IST

Updated : Apr 19, 2022, 11:45 AM IST

ಮ್ಯಾಂಚೆಸ್ಟರ್ (ಇಂಗ್ಲೆಂಡ್): ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿರುವುದಾಗಿ ಸಾಮಾಜಿಕ ಜಾಲತಾಣ ಬಹಿರಂಗಪಡಿಸಿದ್ದಾರೆ.

ಮಡದಿ ಜಾರ್ಜಿನಾ ರೊಡ್ರಿಗಸ್ ಮತ್ತು ತಮ್ಮ ಸಹಿ ಇರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೊನಾಲ್ಡೋ "ನಮ್ಮ ಅವಳಿ ಮಕ್ಕಳಲ್ಲಿ ಗಂಡು ಮಗು ತೀರಿಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗಿದೆ. ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು ಇದು'' ಎಂದು ಬರೆದುಕೊಂಡಿದ್ದಾರೆ.

ವರ್ಷದ ಹಿಂದೆ ರೊನಾಲ್ಡೋ ದಂಪತಿ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದರು. ಈಗ ಅವಳಿ ಮಕ್ಕಳಲ್ಲಿ ಗಂಡು ಮಗು ಮೃತಪಟ್ಟಿದ್ದು, 'ನಮ್ಮ ಹೆಣ್ಣು ಮಗುವಿನ ಜನನವು ಈ ಕ್ಷಣದಲ್ಲಿ ನಮಗೆ ಭರವಸೆ ಮತ್ತು ಸಂತೋಷದಿಂದ ಬದುಕಲು ನಮಗೆ ಶಕ್ತಿಯನ್ನು ನೀಡುತ್ತದೆ. ಈ ನಷ್ಟದಿಂದ ನಾವು ನಲುಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಖಾಸಗಿತನವನ್ನು ಬೇಡುತ್ತೇವೆ ಎಂದು ರೊನಾಲ್ಡೊ ಮನವಿ ಮಾಡಿದ್ದಾರೆ.

ಓದಿ : ಬಟ್ಲರ್ ಶತಕ, ಚಹಾಲ್ ಬೌಲಿಂಗ್​ ಅಬ್ಬರಕ್ಕೆ ಕೋಲ್ಕತ್ತಾ ತತ್ತರ: ರಾಜಸ್ಥಾನಕ್ಕೆ ಏಳು ರನ್​ಗಳ ಜಯ

Last Updated : Apr 19, 2022, 11:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.