ETV Bharat / international

ಪ್ರತ್ಯೇಕ ರೇಪ್ ಕೇಸ್: ಲಂಡನ್​ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ 6 ವರ್ಷ ಜೈಲು, 50 ವರ್ಷದ ವ್ಯಕ್ತಿಗೆ 18 ವರ್ಷ ಸೆರೆವಾಸ - ಮಸಾಜ್ ಪಾರ್ಲರ್‌

ಲಂಡನ್​ನಲ್ಲಿ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳಲ್ಲಿ ಭಾರತದ ಮೂಲದ ಇಬ್ಬರು ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಆರು ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ, 50 ವರ್ಷದ ವ್ಯಕ್ತಿ 18 ವರ್ಷ ಜೈಲು ವಾಸಕ್ಕೆ ಒಳಗಾಗಿದ್ದಾನೆ.

crime indian-student-charged-for-raping-drunk-woman-sentenced-in-uk
ರೇಪ್ ಕೇಸ್: ಲಂಡನ್​ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ 6 ವರ್ಷ ಜೈಲು
author img

By

Published : Jun 18, 2023, 6:55 PM IST

ಲಂಡನ್: ಕಳೆದ ವರ್ಷ ವೇಲ್ಸ್‌ನಲ್ಲಿ ಸ್ನೇಹಿತರೊಂದಿಗೆ ರಾತ್ರಿ ವಿಹಾರಕ್ಕೆ ಹೋಗುತ್ತಿದ್ದಾಗ ನಶೆಯಲ್ಲಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರೀತ್ ವಿಕಲ್ ಎಂಬಾತನೇ ಜೈಲು ಶಿಕ್ಷೆಗೆ ಗುರಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ.

ಇಲ್ಲಿನ ಕಾರ್ಡಿಫ್ ಸಿಟಿ ಸೆಂಟರ್​ನಲ್ಲಿ ಪ್ರೀತ್ ವಿಕಲ್ ನಶೆಯಲ್ಲಿದ್ದ ಮಹಿಳೆಯನ್ನು ತನ್ನ ತೋಳುಗಳಲ್ಲಿ ಮತ್ತು ತನ್ನ ಭುಜದ ಮೇಲೆ ಹೊತ್ತೊಯ್ಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದನ್ನು ಪ್ರೀತ್​ ಒಪ್ಪಿಕೊಂಡಿದ್ದಾನೆ. ಹೀಗಾಗಿ ಆರು ವರ್ಷ ಒಂಬತ್ತು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಸೌತ್ ವೇಲ್ಸ್ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವಿಕಲ್ ಕಾರ್ಡಿಫ್ ಸಿಟಿ ಸೆಂಟರ್‌ನಲ್ಲಿ ಸ್ನೇಹಿತರೊಂದಿಗೆ ರಾತ್ರಿ ವಿಹಾರಕ್ಕೆ ಹೋಗುತ್ತಿದ್ದಾಗ ಯುವತಿಯನ್ನು ನೋಡಿದ್ದ. ನಂತರ ಈ ಯುವತಿ ತನ್ನ ಸ್ನೇಹಿತರ ಗುಂಪಿನಿಂದ ಬೇರ್ಪಟ್ಟಿದ್ದಳು. ಮತ್ತೊಂದೆಡೆ, ಪ್ರೀತ್ ವಿಕಲ್ ಸಹ ತನ್ನ ಸ್ನೇಹಿತರ ಗುಂಪಿನಿಂದ ಬೇರ್ಪಟ್ಟಿದ್ದ. ಇದೇ ವೇಳೆ, ಅಮಲಿನಲ್ಲಿದ್ದ ಯುವತಿಯ ಲಾಭ ಪಡೆದು, ಆಕೆಯನ್ನು ಟ್ಯಾಲಿಬಾಂಟ್‌ನಲ್ಲಿರುವ ತನ್ನ ಕೋಣೆಗೆ ಎತ್ತಿಕೊಂಡು ಹೋಗಿದ್ದ. ನಂತರ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಅದೇ ದಿನ ಪ್ರೀತ್​ನನ್ನು ಪೊಲೀಸರು ಬಂಧಿಸಿದ್ದರು ಎಂದು ವರದಿಯಾಗಿದೆ.

ಭಾರತೀಯ ಮೂಲದ ವ್ಯಕ್ತಿಗೆ 18 ವರ್ಷಗಳ ಜೈಲು: ಮತ್ತೊಂದೆಡೆ, ಲಂಡನ್​ನ ಸ್ಕಾಟ್ಲೆಂಡ್ ಯಾರ್ಡ್‌ನಲ್ಲಿ ತನ್ನ ಮಸಾಜ್ ಪಾರ್ಲರ್‌ನಲ್ಲಿ ಉದ್ಯೋಗದ ಆಮಿಷವೊಡ್ಡಿ ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹೊತ್ತಿದ್ದ 50 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರಘು ಸಿಂಗಮನೇನಿ ಎಂಬಾತನೇ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ.

ಉತ್ತರ ಲಂಡನ್‌ನ ಇಸ್ಲಿಂಗ್ಟನ್​ನ ಹಾಲೋವೇ ರೋಡ್ ಮತ್ತು ವುಡ್ ಗ್ರೀನ್‌ನ ಹೈ ರೋಡ್​ನಲ್ಲಿ ಸಿಂಗಮನೇನಿ ಎರಡು ಮಸಾಜ್ ಪಾರ್ಲರ್‌ಗಳನ್ನು ನಡೆಸುತ್ತಿದ್ದ. ಪಾರ್ಲರ್‌ನಲ್ಲಿ ಮಹಿಳೆಯರಿಗೆ ಉದ್ಯೋಗದ ಜಾಹೀರಾತು ನೀಡುತ್ತಿದ್ದ. ನಂತರ ಮಹಿಳೆಯರಿಗೆ ಭೇಟಿಯಾಗಲು ಅಪಾಯಿಂಟ್‌ಮೆಂಟ್ ನೀಡುತ್ತಿದ್ದ. ನಂತರ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.

ಈ ಮಹಿಳೆಯರಲ್ಲಿ ಹೆಚ್ಚಿನವರು ಉದ್ಯೋಗದ ಭರವಸೆಯಿಂದ ಆಮಿಷಕ್ಕೆ ಒಳಗಾಗಿದ್ದರು. ಆದರೆ, ನಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಅಲ್ಲದೇ, ಈ ಮಹಿಳೆಯರು ಎಂದಿಗೂ ತನ್ನ ವಿರುದ್ಧ ಮಾತನಾಡುವುದಿಲ್ಲ ಎಂದು ಸಿಂಗಮನೇನಿ ಭಾವಿಸಿದ್ದ. ಆದರೆ, 17, 19, 23 ವರ್ಷದ ಯುವತಿಯರು ಸೇರಿ ನಾಲ್ವರು ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತ ವಿಚಾರಣೆ ನಡೆಸಿದ ವುಡ್ ಗ್ರೀನ್ ಕ್ರೌನ್ ನ್ಯಾಯಾಲಯ ನಾಲ್ವರ ನ್ಯಾಯಾಧೀಶರು ಆರೋಪಿ ರಘು ಸಿಂಗಮನೇನಿಯನ್ನು ಸರ್ವಾನುಮತದಿಂದ ದೋಷಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ​​: ನಕಲಿ ಪುರಾತನ ವಸ್ತುಗಳ ವ್ಯಾಪಾರಿ ಮಾನ್ಸನ್ ಮಾವುಂಕಲ್ ದೋಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.