ETV Bharat / international

ದಿವಾಳಿಯಾದ ಚೀನೀ ರಿಯಲ್ ಎಸ್ಟೇಟ್ ದೈತ್ಯ ಎವರ್‌ಗ್ರಾಂಡೆ: ರಕ್ಷಣೆ ಕೋರಿ ಅಮೆರಿಕದಲ್ಲಿ ಅರ್ಜಿ ಸಲ್ಲಿಕೆ - ಭಾರಿ ಆಸ್ತಿ ಬಿಕ್ಕಟ್ಟು

ಚೀನಾದ ರಿಯಲ್ ಎಸ್ಟೇಟ್ ದೈತ್ಯ ಎವರ್‌ಗ್ರಾಂಡೆ ದಿವಾಳಿ ಆಗಿದ್ದು, ರಕ್ಷಣೆ ಕೋರಿ ಅಮೆರಿಕದಲ್ಲಿ ಅರ್ಜಿ ಸಲ್ಲಿಸಿದೆ.

Chinese real estate giant Evergrande
ಚೀನೀ ರಿಯಲ್ ಎಸ್ಟೇಟ್ ದೈತ್ಯ ಎವರ್‌ಗ್ರಾಂಡೆ
author img

By

Published : Aug 18, 2023, 1:09 PM IST

ನ್ಯೂಯಾರ್ಕ್ (ಅಮೆರಿಕ) : ಚೀನಾ ದೇಶದ ಎರಡನೇ ಅತಿದೊಡ್ಡ ಪ್ರಾಪರ್ಟಿ ಡೆವಲಪರ್ ಹಾಗೂ ರಿಯಲ್ ಎಸ್ಟೇಟ್ ದೈತ್ಯ "ಎವರ್‌ಗ್ರಾಂಡೆ ಗ್ರೂಪ್" ಗುರುವಾರ ನ್ಯೂಯಾರ್ಕ್‌ನಲ್ಲಿ ದಿವಾಳಿತನದ ವಿರುದ್ದ ರಕ್ಷಣೆ ಕೋರಿ ಅರ್ಜಿಯನ್ನು ಸಲ್ಲಿಸಿದೆ. ಚೀನೀ ಆರ್ಥಿಕತೆಯಲ್ಲಿ ಭಾರಿ ಆಸ್ತಿ ಬಿಕ್ಕಟ್ಟು ಮತ್ತು ಸಾಲವನ್ನು ಎದುರಿಸಿದ ಬಳಿಕ ಎವರ್‌ಗ್ರಾಂಡೆ ಗ್ರೂಪ್ ಸಂಕಷ್ಟಕ್ಕೆ ಸಿಲುಕಿದೆ. ಹಾಗೆಯೇ, 2021 ರಲ್ಲಿ ತನ್ನ ಹಣಕಾಸಿನ ಹೊಣೆಗಾರಿಕೆಗಳನ್ನು ಡೀಫಾಲ್ಟ್ ಮಾಡಿದ ನಂತರ ಸಂಸ್ಥೆಯು ಹೆಚ್ಚಿನ ತೊಂದರೆ ಅನುಭವಿಸಿದೆ.

ಅಮೆರಿಕ ದಿವಾಳಿತನ ಸಂಹಿತೆಯ ಅಧ್ಯಾಯ 15 ರ ಅಡಿಯಲ್ಲಿ ಕಂಪನಿ ರಕ್ಷಣೆ ನೀಡುವಂತೆ ಕೋರಿದೆ. ಚೀನೀ ಹೋಮ್‌ಬಿಲ್ಡರ್‌ನ ಅಧ್ಯಾಯ 15 ಅರ್ಜಿಯು ಹಾಂಕಾಂಗ್ ಮತ್ತು ಕೇಮನ್ ದ್ವೀಪಗಳಲ್ಲಿ ಪುನಾರಚನೆ ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ, ಈ ಪ್ರಕರಣವು ಇತರ ದೇಶಗಳ ನ್ಯಾಯಾಲಯಗಳ ನಡುವಿನ ಸಹಕಾರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಭಾರತದ ಆತಿಥ್ಯ ಉದ್ಯಮದಲ್ಲಿನ ಹೂಡಿಕೆಗಳು ಶತಕೋಟಿ ಮೀರುವ ಸಾಧ್ಯತೆ : CBRE

2021 ರಲ್ಲಿ ಎವರ್‌ಗ್ರಾಂಡೆ ಗ್ರೂಪ್​ ಹೆಚ್ಚಿನ ಸಾಲದ ಹೊರೆಯಿಂದ ಬಳಲುತ್ತಿದೆ ಎಂಬುದಾಗಿ ವರದಿ ಮಾಡಲಾಗಿತ್ತು. ಮೊದಲು ಬಾಂಡ್‌ಗಳ ಡೀಫಾಲ್ಟ್ ಸಂಭವಿಸಿತು. ಇದರ ಬೆನ್ನಲ್ಲೇ ಕೋವಿಡ್​ -19 ವೈರಸ್​ ಸಾಂಕ್ರಾಮಿಕ ರೋಗ ಹೊಡೆತ ನೀಡಿದ್ದು, ಇದರಿಂದ ಇತರ ಬಿಲ್ಡರ್‌ಗಳ ಡೀಫಾಲ್ಟ್ ನಷ್ಟಕ್ಕೆ ಕಾರಣವಾಯಿತು. ಪ್ರಮುಖ ಡೆವಲಪರ್‌ಗಳು ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಫಲರಾಗಿದ್ದು, ಇದರಿಂದ ಮನೆ ಖರೀದಿದಾರರು ಪ್ರತಿಭಟನೆ ನಡೆಸಿದ್ದರು. ಕಂಪನಿಯು 2021 ಮತ್ತು 2022 ರಲ್ಲಿ ಷೇರುದಾರರ ಹಣ 81 ಬಿಲಿಯನ್ ಡಾಲರ್​​ ಕಳೆದುಕೊಂಡಿದೆ ಎಂದು ಕಳೆದ ತಿಂಗಳು ಸ್ಟಾಕ್ ಮಾರ್ಕೆಟ್ ಫೈಲಿಂಗ್‌ನಲ್ಲಿ ವರದಿ ಮಾಡಿದೆ.

ಇದನ್ನೂ ಓದಿ : ದಿವಾಳಿತನ ಸಂಹಿತೆ : ವೈಯಕ್ತಿಕ ಖಾತರಿ ವಿರುದ್ಧ ಬ್ಯಾಂಕ್​ಗಳ ಕ್ರಮಕ್ಕೆ ಸುಪ್ರೀಂ ಅಸ್ತು

ಎವರ್‌ಗ್ರಾಂಡ್‌ ಕುಸಿತದ ಬಳಿಕ ಕಾಸಿಯಾ, ಫ್ಯಾಂಟಸಿಯಾ ಮತ್ತು ಶಿಮಾವೊ ಗ್ರೂಪ್ ಸೇರಿದಂತೆ ಚೀನಾದಲ್ಲಿ ಹಲವಾರು ಇತರ ಪ್ರಮುಖ ಡೆವಲಪರ್‌ಗಳು ತಮ್ಮ ಸಾಲಗಳನ್ನು ಡೀಫಾಲ್ಟ್ ಮಾಡಿದ್ದಾರೆ. ಇದು ಚೀನಾದ ಪ್ರಾಪರ್ಟಿ ಮಾರುಕಟ್ಟೆಯಲ್ಲಿ ದೊಡ್ಡ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಈ ವರ್ಷದ ಆರಂಭದಲ್ಲಿ ಎವರ್‌ಗ್ರಾಂಡೆ ತನ್ನ ಬಹುನಿರೀಕ್ಷಿತ ಸಾಲದ ಪುನರ್ರಚನೆ ಯೋಜನೆಯನ್ನು ಅನಾವರಣಗೊಳಿಸಿದೆ. ಯೋಜನೆಯ ಪ್ರಮುಖ ನಿಯಮಗಳ ಮೇಲೆ ತನ್ನ ಅಂತಾರಾಷ್ಟ್ರೀಯ ಬಾಂಡ್‌ಹೋಲ್ಡರ್‌ಗಳೊಂದಿಗೆ "ಬೈಂಡಿಂಗ್ ಒಪ್ಪಂದಗಳನ್ನು" ಮಾಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ : ಈ ಕಂಪನಿಗಳಿಗೆ ರಿಲೀಫ್​... ನೂತನ ದಿವಾಳಿತನ ಪ್ರಕ್ರಿಯೆ 6 ತಿಂಗಳು ಸ್ಥಗಿತ ಸಾಧ್ಯತೆ

ಇನ್ನು ಚೀನಾದ ಆಸ್ತಿ ಸಾಲದ ಬಿಕ್ಕಟ್ಟು ವೇಗವಾಗಿ ಹೆಚ್ಚುತ್ತಿದೆ. ಹೆಚ್ಚಾಗಿ ಡೆವಲಪರ್‌ಗಳಿಂದ ನೀಡಲಾದ ಚೈನೀಸ್ ಜಂಕ್ ಡಾಲರ್ ಬಾಂಡ್‌ಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ತಮಿಳುನಾಡಿನ ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಮೇಲೆ ಐಟಿ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.