ETV Bharat / international

ತೈವಾನ್ ಸುತ್ತ ತೀವ್ರಗೊಂಡ ಚೀನಾ ಮಿಲಿಟರಿ ಕಾರ್ಯಾಚರಣೆ - Taiwan

ಅಮೆರಿಕ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್​ಗೆ ಭೇಟಿ ನೀಡಿದ್ದರಿಂದ ಕೆರಳಿರುವ ಚೀನಾ, ತೈವಾನ್ ಸುತ್ತಲೂ ತನ್ನ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ. ಅಲ್ಲದೇ, ಶಸ್ತ್ರಸಜ್ಜಿತ ಯೋಧರಿಂದ ಮಿಲಿಟರಿ ಡ್ರಿಲ್​ಗಳನ್ನು ಚೀನಾ ನಡೆಸುತ್ತಿದೆ.

ತೈವಾನ್ ಸುತ್ತ ತೀವ್ರಗೊಂಡ ಚೀನಾ ಮಿಲಿಟರಿ ಡ್ರಿಲ್
Chinese military drills intensify around Taiwan
author img

By

Published : Aug 4, 2022, 1:32 PM IST

ಬೀಜಿಂಗ್: ತೈವಾನ್ ಸುತ್ತಲೂ ಆರು ವಲಯಗಳಲ್ಲಿ ತನ್ನ ನೌಕಾಪಡೆ, ವಾಯುಪಡೆ ಮತ್ತು ಇತರ ಮಿಲಿಟರಿ ಪಡೆಗಳು ಮಿಲಿಟರಿ ಡ್ರಿಲ್ ಮುಂದುವರೆಸಿವೆ ಎಂದು ಚೀನಾ ಹೇಳಿದೆ. ಇದೇ ವಾರ ಅಮೆರಿಕ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ದ್ವೀಪರಾಷ್ಟ್ರ ತೈವಾನ್​ಗೆ ಭೇಟಿ ನೀಡಿದ್ದರಿಂದ ಆಕ್ರೋಶಗೊಂಡ ಚೀನಾ ಮಿಲಿಟರಿ ಡ್ರಿಲ್‌ ಆರಂಭಿಸಿದೆ.

ಸ್ವಯಂ-ಆಡಳಿತ ಹೊಂದಿರುವ ದ್ವೀಪ ಗಣರಾಜ್ಯ ತೈವಾನ್ ಮೇಲೆ ತಾನು ದಾಳಿ ಮಾಡುವ ಸಾಧ್ಯತೆಗಳಿವೆ ಎಂಬ ಸಂದೇಶವನ್ನು ಜಗತ್ತಿಗೆ ಪ್ರಚಾರ ಮಾಡಲು ಚೀನಾ ಈ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದೆ. ನಿರ್ಬಂಧ ವಿಧಿಸುವುದು, ಸಮುದ್ರದಲ್ಲಿನ ಗುರಿಗಳನ್ನು ಹೊಡೆದುರುಳಿಸುವುದು, ಭೂಪ್ರದೇಶದ ಮೇಲೆ ದಾಳಿ ಮಾಡುವುದು ಮತ್ತು ವಾಯು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶಗಳಿಗಾಗಿ ಚೀನಾ ಮಿಲಿಟರಿ ಜಂಟಿ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಕ್ಸಿನುವಾ ವರದಿ ಮಾಡಿದೆ.

ಈ ಮಧ್ಯೆ, ತೈವಾನ್ ಮಿಲಿಟರಿ ಅಲರ್ಟ್​ ಆಗಿ ಇರಿಸಿದ್ದು, ನಾಗರಿಕ ರಕ್ಷಣಾ ಕಸರತ್ತುಗಳನ್ನು ನಡೆಸಿದೆ. ಈ ಪ್ರದೇಶದಲ್ಲಿ ಅಮೆರಿಕ ಮಿಲಿಟರಿಯು ಹಲವಾರು ನೌಕಾ ಆಸ್ತಿಗಳನ್ನು ಹೊಂದಿರುವುದು ಗಮನಾರ್ಹ. ಡ್ರಿಲ್‌ಗಳು ಗುರುವಾರದಿಂದ ಭಾನುವಾರದವರೆಗೆ ನಡೆಯಲಿದ್ದು, ದ್ವೀಪದ ಉತ್ತರ ಮತ್ತು ದಕ್ಷಿಣದ ಸಮುದ್ರಗಳಲ್ಲಿನ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸುವುದನ್ನು ಒಳಗೊಂಡಿವೆ.

1995 ಮತ್ತು 1996 ರಲ್ಲಿ ಇದೇ ರೀತಿಯಲ್ಲಿ ಚೀನಾ ತೈವಾನ್‌ ನಾಯಕರು ಮತ್ತು ಮತದಾರರನ್ನು ಬೆದರಿಸಿತ್ತು. ಈಗ ಮತ್ತೆ ಅಂಥದೇ ಸನ್ನಿವೇಶ ಸೃಷ್ಟಿಸುವ ಉದ್ದೇಶವನ್ನು ಚೀನಾ ಹೊಂದಿದೆ. ಈಸ್ಟರ್ನ್ ಥಿಯೇಟರ್ ಕಮಾಂಡ್ ಅಡಿಯಲ್ಲಿ ನೌಕಾಪಡೆ, ವಾಯುಪಡೆ, ರಾಕೆಟ್ ಫೋರ್ಸ್, ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್ ಮತ್ತು ಲಾಜಿಸ್ಟಿಕ್ ಸಪೋರ್ಟ್ ಫೋರ್ಸ್‌ನ ಪಡೆಗಳು ಈ ಡ್ರಿಲ್​ನಲ್ಲಿ ಭಾಗವಹಿಸಿವೆ.

ಇದನ್ನು ಓದಿ:ತೈವಾನ್ ವಾಯು ರಕ್ಷಣಾ ವಲಯದ ಮೇಲೆ ಚೀನಾದ 27 ಯುದ್ಧ ವಿಮಾನಗಳ ಹಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.