ETV Bharat / international

ಜುಕರ್‌ಬರ್ಗ್‌ - ಎಲೋನ್ ಮಸ್ಕ್ ಕೇಜ್ ಫೈಟ್ ಎಕ್ಸ್‌ನಲ್ಲಿ ಪ್ರಸಾರ!

cage fight: ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರೊಂದಿಗಿನ ಕೇಜ್ ಫೈಟ್ ಎಕ್ಸ್‌ನಲ್ಲಿ ಲೈವ್‌ಸ್ಟ್ರೀಮ್ ಆಗಲಿದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ.

Elon Musk, Mark Zuckerberg
ಎಲೋನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್
author img

By

Published : Aug 7, 2023, 7:26 AM IST

ನ್ಯೂಯಾರ್ಕ್‌: ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಮತ್ತು ತಮ್ಮ ನಡುವೆ ನಡೆಯಲಿರುವ ಕೇಜ್ ಫೈಟ್ (ಪಂಜರದೊಳಗಿನ ಕಾದಾಟ)ನ್ನು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ (ಟ್ವಿಟರ್‌) ನೇರ ಪ್ರಸಾರ ಮಾಡಲಾಗುವುದು ಎಂದು ಎಲೋನ್ ಮಸ್ಕ್ ಹೇಳಿದ್ದಾರೆ. ಇದನ್ನು('ಎಕ್ಸ್‌') ಮೊದಲು ಟ್ವಿಟರ್ ಎಂದು ಕರೆಯಲಾಗುತ್ತಿತ್ತು.

  • Zuck v Musk fight will be live-streamed on 𝕏.

    All proceeds will go to charity for veterans.

    — Elon Musk (@elonmusk) August 6, 2023 " class="align-text-top noRightClick twitterSection" data=" ">

ಕೇಜ್‌ ಫೈಟ್​‌ನಲ್ಲಿ ಪರಸ್ಪರ ಮುಖಾಮುಖಿಯಾಗಲು ಈ ಇಬ್ಬರು ಟೆಕ್‌ ಬಿಲಿಯನೇರ್‌ಗಳು ಜೂನ್‌ ತಿಂಗಳಲ್ಲಿ ಒಪ್ಪಿಗೆ ಸೂಚಿಸಿದ್ದರು. ಫೇಸ್‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ್‌ ಅವರು ಸಮರ ಕಲೆಯನ್ನು ಕಲಿತಿದ್ದು, ತಾವು ಮೊದಲ ಜಿಯು ಜಿಟ್ಸು ಟೂರ್ನಿ ಪೂರ್ಣಗೊಳಿಸಿರುವ ಬಗ್ಗೆ ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಭಾರ ಎತ್ತುವ ಮೂಲಕ ಕಾದಾಟಕ್ಕೆ ತರಬೇತಿ ಪಡೆಯುತ್ತಿದ್ದೇನೆ ಎಂದು ಮಸ್ಕ್‌ ಇತ್ತೀಚೆಗೆ ಹೇಳಿದ್ದರು. ಮಸ್ಕ್ ಮತ್ತು ಜುಕರ್‌ಬರ್ಗ್‌ ಅವರು ನಿಜವಾಗಿಯೂ ಕೇಜ್‌ ಫೈಟ್​‌ನಲ್ಲಿ ಸೆಣಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ವಿಶೇಷವಾಗಿ ಮಸ್ಕ್ ಆಗಾಗ್ಗೆ ಟ್ವೀಟ್ ಮಾಡುತ್ತಾರೆ. ಆದರೆ ಈ ಇಬ್ಬರ ಕೇಜ್‌ ಫೈಟ್​ ಒಪ್ಪಂದ ಮತ್ತು ಪೋಸ್ಟ್‌ಗಳು ತಮಾಷೆಯಾಗಿ ಗಮನ ಸೆಳೆದಿವೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Twitter logo: 'ಹಾರಿ ಹೋದ ನೀಲಿಹಕ್ಕಿ' ಜಾಗದಲ್ಲಿ ಬಂತು X, ಬದಲಾಯ್ತು ಜನಪ್ರಿಯ ಟ್ವಿಟರ್​ ಲೋಗೊ

ಮಸ್ಕ್ ಮತ್ತು ಜುಕರ್ ಬರ್ಗ್​​ ಮಧ್ಯೆ ಲಾಸ್ ವೇಗಾಸ್​ನಲ್ಲಿ ಕೇಜ್ ಫೈಟ್​ ನಡೆಯಲಿದೆ ಎನ್ನಲಾಗಿದೆ. ಮಾರ್ಕ್ ಜುಕರ್ ಬರ್ಗ್ ಅವರೊಂದಿಗೆ ನಡೆಯಲಿರುವ ಕೇಜ್ ಫೈಟ್​ನ್ನು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್​ನಲ್ಲಿ ನೇರಪ್ರಸಾರ ಮಾಡುವುದಾಗಿ ಮಸ್ಕ್ ಭಾನುವಾರ ಹೇಳಿದ್ದಾರೆ. ಅಲ್ಲದೇ ಈ ಫೈಟ್​ನ ನೇರಪ್ರಸಾರದಿಂದ ಬರುವ ಎಲ್ಲ ಆದಾಯವನ್ನು ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರಿಗೆ ಕೊಡುಗೆಯಾಗಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಜಗತ್ತಿನ ಎರಡು ದೈತ್ಯ ಕಂಪನಿಗಳ ಮುಖ್ಯಸ್ಥರಾಗಿರುವ ಜುಕರ್​ ಬರ್ಗ್ ಮತ್ತು ಎಲೋನ್ ಮಸ್ಕ್ ಇಬ್ಬರೂ ಕೇಜ್ ಮ್ಯಾಚ್​ ಆಡುವುದಾಗಿ ಎಂದು ಕಳೆದ ಜೂನ್​ನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿದ್ದರು. ​ಬರ್ಗ್ ಅವರೊಂದಿಗೆ ಕೇಜ್ ಫೈಟ್ ಆಡಲು ತಾವು ಸಿದ್ಧವಿರುವುದಾಗಿ ಎಲೋನ್​ ಮಸ್ಕ್​ ಜೂನ್​ನಲ್ಲಿ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜುಕರ್​ ಬರ್ಗ್, ಮಸ್ಕ್​ ಅವರ ಪೋಸ್ಟ್​ನ ಸ್ಕ್ರೀನ್ ಶಾಟ್​ ಶೇರ್​ ಮಾಡಿ, ಫೈಟ್​ ಎಲ್ಲಿ ಮಾಡೋಣ ಲೊಕೇಶನ್ ಕಳುಹಿಸಿ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಮಸ್ಕ್ ವೇಗಾಸ್ ಆಕ್ಟಾಗಾನ್ ಎಂದು ಉತ್ತರಿಸಿದ್ದರು.

ಇಬ್ಬರ ಫೈಟ್​​ನ ಉದ್ದೇಶವಾದರೂ ಏನು ಎಂದು ಎಕ್ಸ್​ ಬಳಕೆದಾರರೊಬ್ಬರು ಮಸ್ಕ್​ಗೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್​, ಇದೊಂದು ಯುದ್ಧದ ಸುಸಂಸ್ಕೃತ ರೂಪ. ಪುರುಷರು ಯುದ್ಧವನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಟೀಕೆಗಳ ಬಳಿಕ ಟ್ವಿಟರ್​ ಕಂಪನಿ ಮೇಲಿನ X ಚಿಹ್ನೆ ತೆಗೆಸಿದ ಎಲಾನ್​ ಮಸ್ಕ್​​, ಮತ್ತೆ ಗೂಡು ಸೇರುತ್ತಾ 'ನೀಲಿಹಕ್ಕಿ'?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.