ಲಂಡನ್ : ಇಂಗ್ಲೆಂಡ್‌ನ ಆಸ್ಪತ್ರೆಯೊಂದರಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದು ವರ್ಷದಲ್ಲಿ 7 ನವಜಾತ ಶಿಶುಗಳನ್ನು ಕೊಂದು ಇತರ ಆರು ಮಕ್ಕಳನ್ನು ಕೊಲ್ಲಲು ಯತ್ನಿಸಿದ ಬ್ರಿಟಿಷ್ ನರ್ಸ್ ಒಬ್ಬಳನ್ನು ತಪ್ಪಿತಸ್ಥೆ ಎಂದು ಪರಿಗಣಿಸಲಾಗಿದ್ದು, ಸೋಮವಾರ (ಆಗಸ್ಟ್ 21) ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಕ್ರೌನ್ ಪ್ರಾಸಿಕ್ಯೂಷನ್ ಸೇವೆ (CPS) ತಿಳಿಸಿದೆ.
ತಪ್ಪಿತಸ್ಥೆ ನರ್ಸ್ ಅನ್ನು ಲೂಸಿ ಲೆಟ್ಬಿ ಎಂದು ಗುರುತಿಸಲಾಗಿದೆ. 2015 ರ ಜೂನ್ ರಿಂದ 2016 ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಕೊಲೆಗಳನ್ನು ಮಾಡಿದ್ದಾಳೆ. ಕಳೆದ ಅಕ್ಟೋಬರ್‌ನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಶುಕ್ರವಾರ ಈ ಕುರಿತು ವಿಚಾರಣೆ ನಡೆಸಿದ ಇಂಗ್ಲೆಂಡ್‌ನ ಕೋರ್ಟ್ ಶಿಶುಹತ್ಯೆಯ ಆರೋಪಿ ನರ್ಸ್‌ಗೆ ಶಿಕ್ಷೆ ಆಗುವಂತೆ ಮಾಡುವಲ್ಲಿ ಪ್ರಾಸಿಕ್ಯೂಷನ್ ಪರ ಸಹಾಯ ಮಾಡಿದವರಲ್ಲಿ ಬ್ರಿಟಿಷ್- ಭಾರತೀಯ ಮೂಲದ ಮಕ್ಕಳ ವೈದ್ಯರ ಸಲಹೆಗಾರ ಡಾ. ರವಿ ಜಯರಾಮ್ ಕೂಡ ಸೇರಿದ್ದಾರೆ. ಇವರು ಅಗತ್ಯ ಸಾಕ್ಷ್ಯಗಳನ್ನು ಹೇಳುವಲ್ಲಿ ಪ್ರಾಷಿಕ್ಯೂಷನ್ಗೆ ಸಹಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಕೊಲೆ ಮಾಡಿದ ಹೆಚ್ಚಿನ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು ಅಥವಾ ಅಕಾಲಿಕವಾಗಿ ಜನಿಸಿದವುಗಳಾಗಿವೆ ಎಂದು ಗೊತ್ತಾಗಿದೆ.
-
A neonatal nurse has been found guilty of murdering and attempting to murder newborn babies that she should have been caring for.
— Cheshire Police (@cheshirepolice) August 18, 2023 " class="align-text-top noRightClick twitterSection" data="
Lucy Letby appeared earlier today at Manchester Crown Court for the verdict and will reappear at the same court on Monday for sentencing. (1/3) pic.twitter.com/XOFCZImNqy
">A neonatal nurse has been found guilty of murdering and attempting to murder newborn babies that she should have been caring for.
— Cheshire Police (@cheshirepolice) August 18, 2023
Lucy Letby appeared earlier today at Manchester Crown Court for the verdict and will reappear at the same court on Monday for sentencing. (1/3) pic.twitter.com/XOFCZImNqyA neonatal nurse has been found guilty of murdering and attempting to murder newborn babies that she should have been caring for.
— Cheshire Police (@cheshirepolice) August 18, 2023
Lucy Letby appeared earlier today at Manchester Crown Court for the verdict and will reappear at the same court on Monday for sentencing. (1/3) pic.twitter.com/XOFCZImNqy
33 ವರ್ಷದ ಲೂಸಿ ಲೆಟ್ಬಿ ತನ್ನ ಆರೈಕೆಯಲ್ಲಿರುವ ಶಿಶುಗಳಿಗೆ ವಿಷಪೂರಿತ ಚುಚ್ಚುಮದ್ದು ನೀಡುವ ಮೂಲಕ ಹಾನಿ ಮಾಡಿದ್ದಳು. ಜೊತೆಗೆ, ದೈಹಿಕವಾಗಿ ಹಲ್ಲೆ ನಡೆಸಿದ್ದಳು ಎಂದು ಪ್ರಾಸಿಕ್ಯೂಟರ್‌ಗಳು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ಗೆ ತಿಳಿಸಿದರು. ಈ ಹಿಂದೆ ಈ ನರ್ಸ್ ನಿವಾಸದಲ್ಲಿ ತನಿಖೆ ನಡೆಸಿದಾಗ ಕೆಲ ಪತ್ರಗಳು ಪತ್ತೆಯಾಗಿದ್ದು, ಅದರಲ್ಲಿ 'ನಾನು ದೆವ್ವ', 'ಅವಳನ್ನು ನೋಡಿಕೊಳ್ಳಲು ನಾನು ಯೋಗ್ಯವಲ್ಲದ ಕಾರಣ ಉದ್ದೇಶಪೂರ್ವಕವಾಗಿ ಕೊಂದಿದ್ದೇನೆ', 'ನಾನು ಕೆಟ್ಟವಳು, ಅದಕ್ಕಾಗಿಯೇ ಹಾಗೆ ಮಾಡಿದ್ದೇನೆ' ಮತ್ತು 'ಇಂದು ನಿಮ್ಮ ಜನ್ಮದಿನ ಆದ್ರೆ ನೀವೇ ಇಲ್ಲ, ಅದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ' ಎಂದು ಬರೆದಿದ್ದ ನೋಟ್ಗಳು ಪತ್ತೆಯಾಗಿದ್ದವು.
2015 ರಲ್ಲಿ ನರ್ಸ್ ಕೃತ್ಯವು ಮೊದಲು ಬೆಳಕಿಗೆ ಬಂದಿತ್ತು. ಅದೇ ವರ್ಷ ಮೂವರು ಮಕ್ಕಳು ಸಾವನ್ನಪ್ಪಿದರು. ಕೊನೆಗೆ, ಏಪ್ರಿಲ್ 2017 ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (NHS) ಟ್ರಸ್ಟ್, ಪೊಲೀಸರು ವೈದ್ಯರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ನಂತರ ಪ್ರಕರಣದ ತನಿಖೆ ಮುಂದುವರೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2018 ಮತ್ತು ನವೆಂಬರ್ 2020 ರ ನಡುವೆ ನರ್ಸ್ ಅನ್ನು ಮೂರು ಬಾರಿ ಬಂಧಿಸಿ ಬಿಡುಗಡೆ ಗೊಳಿಸಲಾಗಿತ್ತು. ಘಟನೆ ಬೆಳಕಿಗೆ ಬಂದ ನಂತರ ಆಕೆಯನ್ನು ದೇಶದ ಅತ್ಯಂತ ಕೆಟ್ಟ ಬೇಬಿ ಸೀರಿಯಲ್ ಕಿಲ್ಲರ್ ಎಂದು ಪರಿಗಣಿಸಲಾಗಿದೆ.
ಇದನ್ನು ಓದಿ: ಪ್ರಪಂಚದಾದ್ಯಂತದ ಭಯೋತ್ಪಾದನೆ ಎದುರಿಸಲು ಅಮೆರಿಕ ಬದ್ಧ: ವಿದೇಶಾಂಗ ಇಲಾಖೆ