ETV Bharat / international

ಸುದೀರ್ಘ ಅವಧಿಗೆ ಬ್ರಿಟನ್ ಆಳಿದ​ ರಾಣಿ ಎಲಿಜಬೆತ್​ II ನಿಧನ

ಬ್ರಿಟಿಷ್​ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದ ಹಿರಿಮೆ ಹೊಂದಿರುವ 2ನೇ ಎಲಿಜಬೆತ್​​ ಗುರುವಾರ ರಾತ್ರಿ ನಿಧನರಾದರು.

Britain Queen Elizabeth II Death
Britain Queen Elizabeth II Death
author img

By

Published : Sep 9, 2022, 6:24 AM IST

Updated : Sep 9, 2022, 7:07 AM IST

ಲಂಡನ್​​: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್ರಿ ಸ್ಕಾಟ್ಲೆಂಡ್‌ನ ಅರಮನೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಬಲ್‌ಮೋರಾಲ್‌ನಲ್ಲಿ ಅವರು ತೀವ್ರ ವೈದ್ಯಕೀಯ ನಿಗಾದಲ್ಲಿದ್ದರು. ರಾಣಿಯ ಪಾರ್ಥಿವ ಶರೀರವನ್ನು ಇದೀಗ ಬಾಲ್​​ಮೊರಲ್​ ಎಸ್ಟೇಟ್​​ನಲ್ಲಿ ಇಡಲಾಗಿದೆ. ಇಂದು ಲಂಡನ್​​ಗೆ ರವಾನಿಸಲಾಗುತ್ತದೆ. ಹಿರಿಯ ಮಗ ಚಾರ್ಲ್ಸ್​​​ ತಕ್ಷಣದಿಂದಲೇ ರಾಜನಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Britain Queen Elizabeth II Death
ಬ್ರಿಟಿಷ್​ ಇತಿಹಾಸದಲ್ಲೇ ಸುದೀರ್ಘಾವಧಿಗೆ ರಾಣಿಯಾಗಿದ್ದ ಹಿರಿಮೆ

1. 10 ದಿನ ಶೋಕಾಚರಣೆ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ ರಾಣಿ ಈ ವಾರದ ಆರಂಭದಲ್ಲಿ ದೇಶದ ಹೊಸ ಪ್ರಧಾನಿ ಲಿಜ್ ಟ್ರಸ್ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದು ಬ್ರಿಟನ್‌ನಲ್ಲಿ ಮುಂದಿನ 10 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.

1953 ರಿಂದಲೂ ಬ್ರಿಟನ್ ರಾಣಿಯಾಗಿದ್ದು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆ ಕಿಂಗ್ ಜಾರ್ಜ್​​ VI ನಿಧನದ ನಂತರ ರಾಣಿ ಪಟ್ಟ ಅಲಂಕರಿಸಿದ್ದ ಇವರು,​ 1952ರಲ್ಲಿ ಬ್ರಿಟನ್ ಗದ್ದುಗೆ ಏರಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದಾರೆ. 8 ಮೊಮ್ಮಕ್ಕಳು ಮತ್ತು 12 ಮರಿ ಮಕ್ಕಳಿದ್ದಾರೆ.

Britain Queen Elizabeth II Death
1953 ರಿಂದಲೂ ಬ್ರಿಟನ್ ರಾಣಿಯಾಗಿ ಸೇವೆ

2. ಜಾಗತಿಕ ಮಟ್ಟದ ಪ್ರಭಾವಿ: ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂದೇ ರಾಣಿ ಮನ್ನಣೆ ಗಳಿಸಿದ್ದರು. 2ನೇ ವಿಶ್ವಯುದ್ಧ, ಶೀತಲ ಸಮರ, ಕಮ್ಯುನಿಸಂ ಆಡಳಿತ ಪತನ ಮತ್ತು ಅಂತರ್ಜಾಲ ಯುಗಾರಂಭದ ಗುರುತರ ಜಾಗತಿಕ ಬದಲಾವಣೆಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ರಾಣಿ ಎಲಿಜಬೆತ್ II 1947ರಲ್ಲಿ ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್ ಅವರನ್ನು ವಿವಾಹವಾಗಿದ್ದರು. ಬ್ರಿಟನ್ ರಾಣಿಯಾಗುವ ಐದು ವರ್ಷಗಳ ಮೊದಲು ಪ್ರಿನ್ಸ್ ಫಿಲಿಪ್ ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

Britain Queen Elizabeth II Death
ಏಳು ದಶಕಗಳ ಕಾಲ ಸೇವೆ

3. ರಾಣಿಯ ಬಳಿಕ ರಾಜನಾಗಿ ಪುತ್ರ ಚಾರ್ಲ್ಸ್‌: ಕ್ವೀನ್ ಎಲಿಜಬೆತ್ II ರ ನಂತರ ಅವರ ಮೊದಲ ಮಗ ಚಾರ್ಲ್ಸ್ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಮನೆತನದ ಮಾಹಿತಿಯಂತೆ, ಉತ್ತರಾಧಿಕಾರವು ವಂಶಸ್ಥರ ಮೂಲಕ ಮಾತ್ರವಲ್ಲದೇ ಸರ್ಕಾರದ ಸಂಸದೀಯ ಶಾಸನದಿಂದಲೂ ನಿಯಂತ್ರಿಸಲ್ಪಡುತ್ತದೆ.

4. ದಾಖಲೆಯ ಆಳ್ವಿಕೆ ನಡೆಸಿದ್ದ ರಾಣಿ: ಎಲಿಜಬೆತ್ II ಅವರು 1927 ಮತ್ತು 2016 ರ ನಡುವೆ 70 ವರ್ಷ ಮತ್ತು 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್‌ನ ಕಿಂಗ್ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದರು.

  • I had memorable meetings with Her Majesty Queen Elizabeth II during my UK visits in 2015 and 2018. I will never forget her warmth and kindness. During one of the meetings she showed me the handkerchief Mahatma Gandhi gifted her on her wedding. I will always cherish that gesture. pic.twitter.com/3aACbxhLgC

    — Narendra Modi (@narendramodi) September 8, 2022 " class="align-text-top noRightClick twitterSection" data=" ">

5. ಘನತೆ ಮತ್ತು ಸಭ್ಯತೆಯ ಪ್ರತಿರೂಪ- ಪ್ರಧಾನಿ ಮೋದಿ ಸಂತಾಪ: ರಾಣಿ ಎಲಿಜಬೆತ್​ II ನಮ್ಮ ಕಾಲದ ಧೀಮಂತೆ ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ. ತಮ್ಮ ರಾಷ್ಟ್ರ ಮತ್ತು ಜನರಿಗೆ ಸ್ಪೂರ್ತಿದಾಯಕ ನಾಯಕತ್ವ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯನ್ನು ಪ್ರದರ್ಶಿಸಿದವರು. ರಾಣಿಯ ನಿಧನದಿಂದ ನೋವಾಗಿದೆ. ದುಃಖದ ಸಮಯದಲ್ಲಿ ಅವರ ಕುಟುಂಬ ಹಾಗೂ ಯುಕೆ ಜನರ ನೋವಿನಲ್ಲಿ ತಾವೂ ಸಹ ಭಾಗಿ ಎಂದು ಟ್ವೀಟ್ ಮಾಡಿದ್ದಾರೆ.

Britain Queen Elizabeth II Death
2ನೇ ಎಲಿಜಬೆತ್​​ ಗುರುವಾರ ರಾತ್ರಿ ನಿಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Last Updated : Sep 9, 2022, 7:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.