ಕೇಪ್ಟೌನ್( ದಕ್ಷಿಣ ಆಫ್ರಿಕಾ) : ಶುಕ್ರವಾರ ಕೇಪ್ಟೌನ್ನಲ್ಲಿ ನಡೆದ 'ಫ್ರೆಂಡ್ಸ್ ಆಫ್ ಬ್ರಿಕ್ಸ್' ಸಭೆಯಲ್ಲಿ ಭಯೋತ್ಪಾದನೆ ಹತ್ತಿಕ್ಕಲು ಬ್ರಿಕ್ಸ್ ರಾಷ್ಟ್ರಗಳು ಪ್ರತಿಜ್ಞೆ ಮಾಡಿದವು. ಇದಕ್ಕೂ ಮುನ್ನ ಸಭೆಯಲ್ಲಿ ಭಾಗಿಯಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕೂಟದಲ್ಲಿ ಬ್ರೆಜಿಲ್, ಇರಾನ್ ಮತ್ತು ಯುಎಇಯ ಸದಸ್ಯರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು.
-
Great to meet FM Mauro Vieira of Brazil on sidelines of the BRICS meeting.
— Dr. S. Jaishankar (@DrSJaishankar) June 2, 2023 " class="align-text-top noRightClick twitterSection" data="
Discussed advancing our cooperation in the BRICS, IBSA, G20 and UN frameworks.
Look forward to working together on deepening our strategic partnership. pic.twitter.com/DtNR3tHrWl
">Great to meet FM Mauro Vieira of Brazil on sidelines of the BRICS meeting.
— Dr. S. Jaishankar (@DrSJaishankar) June 2, 2023
Discussed advancing our cooperation in the BRICS, IBSA, G20 and UN frameworks.
Look forward to working together on deepening our strategic partnership. pic.twitter.com/DtNR3tHrWlGreat to meet FM Mauro Vieira of Brazil on sidelines of the BRICS meeting.
— Dr. S. Jaishankar (@DrSJaishankar) June 2, 2023
Discussed advancing our cooperation in the BRICS, IBSA, G20 and UN frameworks.
Look forward to working together on deepening our strategic partnership. pic.twitter.com/DtNR3tHrWl
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬ್ರಿಕ್ಸ್ ಸಭೆಯಲ್ಲಿ ಬ್ರೆಜಿಲ್‌ನ ಎಫ್‌ಎಂ ಮೌರೊ ವಿಯೆರಾ ಅವರನ್ನು ಭೇಟಿಯಾಗಿ ಅವರೊಂದಿಗೆ ಬ್ರಿಕ್ಸ್, ಐಬಿಎಸ್‌ಎ, ಜಿ 20 ಮತ್ತು ಯುಎನ್ ಚೌಕಟ್ಟಿನಲ್ಲಿ ನಮ್ಮ ಸಹಕಾರವನ್ನು ಮುಂದುವರಿಸುವ ಕುರಿತು ಚರ್ಚಿಸಲಾಗಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಸಲು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಬಳಿಕ ಇರಾನ್‌ನ ವಿದೇಶಾಂಗ ಸಚಿವ ಅಮಿರಾಬ್ದೋಲಾಹಿಯಾನ್ ಅವರನ್ನು ಭೇಟಿ ಮಾಡಿದ ಅವರು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಬ್ರಿಕ್ಸ್ ಬಣ ಮತ್ತು ಶಾಂಘೈ ಸಹಕಾರ ಸಂಘಟನೆಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಫ್ರೆಂಡ್ಸ್ ಆಫ್ ಬ್ರಿಕ್ಸ್ ಕೂಟದ ಹಿನ್ನೆಲೆಯಲ್ಲಿ ಇರಾನ್‌ನ ಅಮಿರಾಬ್ದೋಲಾಹಿಯಾನ್ ಅವರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಬಗ್ಗೆ ಪರಿಶೀಲಿಸಲಾಯಿತು. ಚಾಬಹಾರ್ ಬಂದರಿಗೆ ನಿರ್ದಿಷ್ಟವಾಗಿ ಒತ್ತು ನೀಡುವ ಮೂಲಕ ಅವುಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತೂ ಚರ್ಚೆ ನಡೆಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಜೈಶಂಕರ್ ಅವರು ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದರು. "ನಮ್ಮ ನಡುವಿನ ನಿಯಮಿತ ಸಭೆಗಳು ಮತ್ತು ನಿರಂತರ ಸಂಭಾಷಣೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯಕವಾಗಿವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ, ಜನರಿಗೆ ಬೆದರಿಕೆ: ಅಮೆರಿಕದಲ್ಲಿ ರಾಹುಲ್ ಗಾಂಧಿ
ಸಭೆಯಲ್ಲಿ ಉಗ್ರವಾದ ವಿರುದ್ಧ ಹೋರಾಟ: ಭಯೋತ್ಪಾದನೆ ಹತ್ತಿಕ್ಕಲು ಬ್ರಿಕ್ಸ್ ರಾಷ್ಟ್ರಗಳು ಸಿದ್ಧವಾಗಿವೆ. ನಿನ್ನೆಯ ಸಭೆಯಲ್ಲಿ ಐದು ರಾಷ್ಟ್ರಗಳ ಬ್ರಿಕ್ಸ್ ಗುಂಪು, ಭಯೋತ್ಪಾದನೆಯನ್ನು ಎದುರಿಸಲು ಪ್ರತಿಜ್ಞೆ ಮಾಡಿವೆ. 'ದಿ ಕೇಪ್ ಆಫ್ ಗುಡ್ ಹೋಪ್' ಎಂಬ ಶೀರ್ಷಿಕೆಯ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಲಾಗಿದೆ. ಸಭೆಯಲ್ಲಿ, ಐದು ದೇಶಗಳು ವಿಶ್ವಸಂಸ್ಥೆ ಅಡಿ ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಭಯೋತ್ಪಾದನೆ ವಿರುದ್ಧ ಹೋರಾಡಲು ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಜೈಶಂಕರ್ ಬ್ರಿಕ್ಸ್ ಒಕ್ಕೂಟ ಜಾಗತಿಕ ಭೂದೃಶ್ಯದ ವೈಶಿಷ್ಟ್ಯವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಬ್ರಿಕ್ಸ್ ಪ್ರಪಂಚದ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ, ಇದು ಜಾಗತಿಕ ಜನಸಂಖ್ಯೆಯ 41 ಪ್ರತಿಶತ, ಜಾಗತಿಕ GDP ಯ 24 ಪ್ರತಿಶತ ಮತ್ತು ಜಾಗತಿಕ ವ್ಯಾಪಾರದ 16 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ: ಅಮೆರಿಕ ಕಾಂಗ್ರೆಸ್ ಜಂಟಿ ಸಭೆ ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿಗೆ ಆಹ್ವಾನ!