ETV Bharat / international

ತೈಲ ಬೆಲೆ ನಿಯಂತ್ರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೊಸ ಪ್ಲಾನ್‌..! - ತೈಲ ಬೆಲೆ ಏರಿಕೆ ನಿಯಂತ್ರಿಸಲು ಅಮೆರಿಕ ಅಧ್ಯಕ್ಷ ಬೈಡನ್‌ ಸಿದ್ಧತೆ

ತೈಲ ಕಂಪನಿಗಳು ಹೆಚ್ಚು ಉತ್ಪಾದನೆಯನ್ನು ಹೆಚ್ಚಿಸಿಲ್ಲ, ಇದು ಬೈಡನ್‌ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಅಮೆರಿಕದಲ್ಲಿ ಫೆಬ್ರವರಿಯಲ್ಲಿ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು, ಪೆಟ್ರೋಲಿಯಂ, ಗ್ಯಾಸೋಲಿನ್ ಬೆಲೆ ಏರಿಕೆ ಬೈಡನ್‌ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ. ಇದರಿಂದ ಹೊರ ಬರಲು ಜೋ ಬೈಡನ್‌ ಹೊಸ ಪ್ಲಾನ್‌ ರೂಪಿಸಿದ್ದಾರೆ.

Biden planning to tap oil reserve to control gas prices
ತೈಲ ಬೆಲೆ ನಿಯಂತ್ರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೊಸ ಪ್ಲಾನ್‌..!
author img

By

Published : Mar 31, 2022, 9:13 AM IST

ವಾಷಿಂಗ್ಟನ್​: ಅಮೆರಿಕದಲ್ಲಿ ಏರಿಕೆಯಾಗಿರುವ ಇಂಧನ ಬೆಲೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಧ್ಯಕ್ಷ ಜೋ ಬೈಡನ್‌ ತಮ್ಮ ದೇಶದ ಪೆಟ್ರೋಲಿಯಂ ಮೀಸಲು ಪ್ರದೇಶದಿಂದ ದಿನಕ್ಕೆ 1 ಮಿಲಿಯನ್‌ ಬ್ಯಾರೆಲ್‌ ತೈಲ ಬಿಡುಗಡೆಯ ಆದೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಗುರುವಾರದೊಳಗೆ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿಯಿಂದಾಗಿ ಪುಟಿನ್‌ ಸರ್ಕಾರದಿಂದ ತೈಲ ಹಾಗೂ ಅನಿಲ ಆಮದಿಗೆ ಅಮೆರಿಕ, ಮಿತ್ರ ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸಿವೆ. ಇದು ತೈಲ ಬೆಲೆ ಏರಿಕೆಗೆ ಕಾರಣವಾಗಿತ್ತು. ಏರುತ್ತಿರುವ ಅನಿಲ ಬೆಲೆಗಳು, ತಮ್ಮ ಆಡಳಿತದ ಯೋಜನೆಗಳ ಕುರಿತು ಕೇಳಬರುತ್ತಿರುವ ಟೀಕೆಗಳಿಂದಾಗಿ ಬೈಡನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ತೈಲ ಬಿಡುಗಡೆಯ ಅವಧಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ ಹಲವಾರು ತಿಂಗಳುಗಳವರೆಗೆ ಇರಲಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಹುತೇಕ ತೈಲ ಕಂಪನಿಗಳು ಹೆಚ್ಚು ಉತ್ಪಾದನೆಯನ್ನು ಹೆಚ್ಚಿಸಿಲ್ಲ, ಇದು ಬೈಡನ್‌ಗೆ ಸವಾಲನ್ನು ಸೃಷ್ಟಿಸಿದೆ. ಫೆಬ್ರವರಿಯಲ್ಲಿ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಮತ್ತು ರಷ್ಯಾ ಉಕ್ರೇನ್ ಮೇಲೆ ದಾಳಿ ನಂತರ ಪೆಟ್ರೋಲಿಯಂ, ಗ್ಯಾಸೋಲಿನ್ ಬೆಲೆ ಏರಿಕೆ ಬೈಡನ್‌ ಅವರ ಜನಪ್ರಿಯತೆಯನ್ನು ಕುಗ್ಗಿಸಿದೆ.

ಕಚ್ಚಾ ತೈಲವು ಬುಧವಾರ ಬ್ಯಾರೆಲ್‌ಗೆ ಸುಮಾರು105 ಡಾಲರ್‌ನಲ್ಲಿ ವಹಿವಾಟು ನಡೆಸಿದೆ. ಒಂದು ವರ್ಷದ ಹಿಂದೆ ಅಮೆರಿಕದಲ್ಲಿ 60 ಡಾಲರ್‌ ಇತ್ತು. ಡಲ್ಲಾಸ್ ಫೆಡರಲ್ ರಿಸರ್ವ್ ಕಳೆದ ವಾರ ಬಿಡುಗಡೆ ಮಾಡಿದ ಸಮೀಕ್ಷೆಯ ಪ್ರಕಾರ, ತೈಲ ಉತ್ಪಾದಕರು ಹೂಡಿಕೆದಾರರ ಅಗತ್ಯಗಳನ್ನು ಪೂರೈಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು 59ರಷ್ಟು ಕಾರ್ಯನಿರ್ವಾಹಕರ ಪ್ರಕಾರ ಹೆಚ್ಚಿನ ಬೆಲೆಗಳ ನಡುವೆ 'ಬಂಡವಾಳ ಶಿಸ್ತು' ಸಂರಕ್ಷಿಸಲು ಹೂಡಿಕೆದಾರರ ಮೇಲಿನ ಒತ್ತಡವು ಹೆಚ್ಚಾಗಿದೆ ಎಂದಿದ್ದಾರೆ. ಆದರೆ ಶೇ.10 ಕ್ಕಿಂತ ಕಡಿಮೆ ಮಂದಿ ಸರ್ಕಾರದ ನಿಯಂತ್ರಣವನ್ನು ದೂಷಿಸಿದ್ದಾರೆ.

ಇದನ್ನೂ ಓದಿ: ಯುದ್ಧದ ಕುರಿತು ರಷ್ಯಾ ಮಿಲಿಟರಿ ಸಲಹೆಗಾರರಿಂದ ಪುಟಿನ್​ಗೆ ತಪ್ಪು ಮಾಹಿತಿ: ಶ್ವೇತಭವನ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.