ETV Bharat / international

ಎರಡು ಗುಂಪುಗಳ ಮಧ್ಯೆ ಗುಂಡಿನ ದಾಳಿ, ಎಂಟು ಜನ ಬಲಿ.. ಮನೆ ತೊರೆದ ಹಲವಾರು ಕುಟುಂಬಗಳು

author img

By

Published : Apr 8, 2023, 10:02 AM IST

ಬಾಂಗ್ಲಾದೇಶದ ಬಂದರ್ಬನ್ ಜಿಲ್ಲೆಯ ಕಡಿದಾದ ಪ್ರದೇಶಗಳಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ 8 ಜನರು ಸಾವನ್ನಪ್ಪಿದ್ದಾರೆ. ಎರಡು ಸಂಘಟನೆಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಲ್ಲಿ ಇದುವರೆಗೆ ಹಲವಾರು ಜನರು ಗಾಯಗೊಂಡಿದ್ದು, ಅನೇಕ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

killed in ethnic clashes and gunfight  ethnic clashes and gunfight in Bandarban  8 killed in ethnic clashes and gunfight  ಎರಡು ಗುಂಪುಗಳ ಮಧ್ಯೆ ಗುಂಡಿನ ದಾಳಿ  ಮನೆ ತೊರೆದ ಹಲವಾರು ಕುಟುಂಬಗಳು  ಕಡಿದಾದ ಪ್ರದೇಶಗಳಲ್ಲಿ ಜನಾಂಗೀಯ ಸಂಘರ್ಷ  ಎರಡು ಸಂಘಟನೆಗಳ ನಡುವಿನ ಹಿಂಸಾತ್ಮಕ ಘರ್ಷಣೆ  ಎರಡು ಸಶಸ್ತ್ರ ಗುಂಪುಗಳ ನಡುವೆ ಶೂಟ್‌ಔಟ್  ಗುಂಡು ತಗುಲಿದ ಮೃತದೇಹ
ಮನೆ ತೊರೆದ ಹಲವಾರು ಕುಟುಂಬಗಳು

ಢಾಕಾ, ಬಾಂಗ್ಲಾದೇಶ: ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಬಂದರ್ಬನ್‌ನ ರೋವಾಂಗ್‌ಚಾರಿ ಉಪಜಿಲ್ಲಾದಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವೆ ಶೂಟ್‌ಔಟ್ ಜರಗಿದ್ದು, ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುನೈಟೆಡ್ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (ಡೆಮಾಕ್ರಟಿಕ್) ಮತ್ತು ಕುಕಿ-ಚಿನ್ ನ್ಯಾಷನಲ್ ಫ್ರಂಟ್ (ಕೆಎನ್‌ಎಫ್) ನ ಮಿಲಿಟರಿ ವಿಭಾಗವಾದ ಕುಕಿ-ಚಿನ್ ನ್ಯಾಷನಲ್ ಆರ್ಮಿ ಮಧ್ಯೆ ಗುಂಡಿನ ಚಕಮಕಿ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡು ತಗುಲಿದ ಮೃತದೇಹಗಳನ್ನು ಬಂದರ್ಬನ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶವ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ರೋವಾಂಗ್‌ಚಾರಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ (ಒಸಿ) ಅಬ್ದುಲ್ ಮನ್ನನ್ ತಿಳಿಸಿದ್ದಾರೆ.

ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ಗುಂಡಿನ ಸದ್ದು ಕೇಳಿಸಿತು. ಕೆಎನ್‌ಎಫ್ ಮತ್ತು ಯುನೈಟೆಡ್ ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಹೇಳಿದ್ದಾರೆ. ಅವರ ಬಟ್ಟೆಗಳ ಪರಿಶೀಲನೆಯ ಆಧಾರದ ಮೇಲೆ ಮೃತರು KNF ನ ಸಶಸ್ತ್ರ ವಿಭಾಗವಾದ ಕುಕಿ ಚಿನ್ ರಾಷ್ಟ್ರೀಯ ಸೇನೆಯ (KNA) ಸದಸ್ಯರು ಎಂದು ನಂಬಲಾಗಿದೆ. ಮೃತರು ಹೊತ್ತೊಯ್ಯುತ್ತಿದ್ದ ಭಾರೀ ಶಸ್ತ್ರಾಸ್ತ್ರಗಳನ್ನು ಪ್ರತಿಪಕ್ಷದ ಸಶಸ್ತ್ರ ಗುಂಪು ತೆಗೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಜುಲೈ 2020 ರ ಘಟನೆಯ ನಂತರ ಗುರುವಾರ ವರದಿಯಾದ ಸಾವುಗಳು ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಘಟನೆಯಲ್ಲಿ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ಈ ವರ್ಷ ಮಾರ್ಚ್ 12 ರಂದು, ಕೆಎನ್‌ಎ ಸದಸ್ಯರು ಗುಂಡು ಹಾರಿಸಿದಾಗ ಹಿರಿಯ ಸೇನಾ ವಾರಂಟ್ ಅಧಿಕಾರಿಯೊಬ್ಬರು ಸಾವನ್ನಪ್ಪಿದರು ಮತ್ತು ಇಬ್ಬರು ಸೈನಿಕರು ಗಾಯಗೊಂಡರು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಮಾರ್ಚ್ 15 ರಂದು, ಕೆಎನ್‌ಎಫ್ ಸದಸ್ಯರು ಸಾರ್ಜೆಂಟ್ (ನಿವೃತ್ತ) ಅನ್ವರ್ ಹೊಸೈನ್ ಸೇರಿದಂತೆ ಒಂಬತ್ತು ಜನರನ್ನು ರೂಮಾದ ಲಾಂಗ್‌ಥಾಸಿ ಜಿರಿ ಪ್ರದೇಶದಲ್ಲಿ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪಹರಿಸಿದ್ದರು. ಮಾರ್ಚ್ 18 ರಂದು ಸಂದೇಶವೊಂದರಲ್ಲಿ ಕೆಎನ್‌ಎಫ್ ಬೊಮ್ ಸಮುದಾಯದ 30 ಜನರನ್ನು ಸೆಪ್ಟೆಂಬರ್ 9 ರಿಂದ ಮಾರ್ಚ್ ವರೆಗೆ ಜಂಟಿ ಪಡೆಗಳಿಂದ ಬಂಧಿಸಲಾಗಿದೆ ಎಂದು ಹೇಳಿಕೊಂಡಿತ್ತು.

ಗುರುವಾರದ ಘಟನೆಯ ನಂತರ, ನೆರೆಹೊರೆಯ ಸುಮಾರು 175 ಕುಟುಂಬಗಳು ರೋವಾಂಗ್‌ಚಾರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಶ್ರಯ ಪಡೆದಿವೆ. ಖಮ್ಟಮ್ ನೆರೆಹೊರೆಯ ಅಂಗಡಿಯ ಮಾಣಿಕ್ ಖಿಯಾಂಗ್ ಹೇಳಿಕೆ ಪ್ರಕಾರ, ಗುರುವಾರ ಸಂಜೆ ಎರಡು ಗುಂಪುಗಳ ನಡುವೆ ಗುಂಡಿನ ದಾಳಿ ನಡೆಯಿತು. ಆ ಸಮಯದಲ್ಲಿ ಅನೇಕ ಜನರು ಭಯಭೀತರಾಗಿ ಮನೆಗಳನ್ನು ತೊರೆದರು. ಇದುವರೆಗೆ 50 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಹಲವಾರು ಕುಟುಂಬಗಳು ಹತ್ತಿರದ ಶಿಕ್ಷಣ ಸಂಸ್ಥೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ 15 ರಿಂದ 132 ಕುಟುಂಬಗಳ ಸೇರಿ ಕನಿಷ್ಠ 548 ಜನರು ತಮ್ಮ ಮನೆಗಳನ್ನು ತೊರೆದು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಜನವರಿ 28 ರಂದು, ಸುಮಾರು 140 ಮರ್ಮಾ ಮಹಿಳೆಯರು, ಪುರುಷರು ಮತ್ತು ಮಕ್ಕಳು ಮಲ್ಪಿ ಪಾರಾದಿಂದ ರೂಮಾ ಸದರ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಅವರು ಫೆಬ್ರವರಿ 5 ರಂದು ತಮ್ಮ ಮನೆಗಳಿಗೆ ಮರಳಿದರು ಎಂದು ಪೊಲೀಸ್​​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಓದಿ: ಇಸ್ರೇಲ್​ನಲ್ಲಿ ದಾಳಿಕೋರನನ್ನು ಗುಂಡಿಕ್ಕಿ ಕೊಂದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.