ETV Bharat / international

ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೆಸ್‌ ಆಯ್ಕೆ; ಮೋದಿ ಅಭಿನಂದನೆ

ಆಸ್ಟ್ರೇಲಿಯಾ ಸಂಸತ್ತಿಗೆ ನಡೆದ ಚುನಾವಣೆಯ ಪ್ರಾಥಮಿಕ ಫಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಪ್ರತಿಪಕ್ಷ ಲೇಬರ್ ಪಾರ್ಟಿ ಮುನ್ನಡೆ ಸಾಧಿಸಿದ್ದು ಆ್ಯಂಟನಿ ಅಲ್ಬನೆಸ್‌ ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದು ನಿಚ್ಚಳವಾಗಿದೆ.

Australia news PM Anthony Albanese
ಆ್ಯಂಟನಿ ಅಲ್ಬನೆಸ್‌ ನೂತನ ಪ್ರಧಾನಿ
author img

By

Published : May 22, 2022, 9:10 AM IST

ನವದೆಹಲಿ: ಆಸ್ಟ್ರೇಲಿಯಾದ ಹೊಸ ಪ್ರಧಾನಿಯಾಗಿ ಲೇಬರ್‌ ಪಕ್ಷದ ಆ್ಯಂಟನಿ ಅಲ್ಬನೆಸ್‌ ಚುನಾಯಿತರಾಗಿದ್ದಾರೆ. ಹೊಸ ಪ್ರಧಾನಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ'ಫಾರೆಲ್, 'ಅಲ್ಬನೆಸ್‌ ಭಾರತಕ್ಕೆ ಹೊಸಬರೇನಲ್ಲ. ಅವರು 1991ರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಭಾರತದ ಉದ್ದಗಲ ಸಂಚರಿಸಿದ್ದರು. 2018ರಲ್ಲಿ ಸಂಸದೀಯ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಉಭಯ ದೇಶಗಳ ಆರ್ಥಿಕ, ಕಾರ್ಯತಂತ್ರ ಮತ್ತು ಜನರ ನಡುವಿನ ಸಂಪರ್ಕ ಬಲಪಡಿಸಲು ಶ್ರಮಿಸಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.

ಮೇ 24 ರಂದು ಕ್ವಾಡ್ ಶೃಂಗಸಭೆ: ಮುಂಬರುವ ಕ್ವಾಡ್ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಅಲ್ಬನೆಸ್‌ ಟೋಕಿಯೊಗೆ ಪ್ರಯಾಣಿಸಿದರೆ, ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯ ಕಳೆದ ಕೆಲವು ವರ್ಷಗಳಿಂದ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ತಿಂಗಳು, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು ಮತ್ತಷ್ಟು ವೈವಿಧ್ಯಮಯಗೊಳಿಸುವ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು.

  • Congratulations @AlboMP for the victory of the Australian Labor Party, and your election as the Prime Minister! I look forward to working towards further strengthening our Comprehensive Strategic Partnership, and for shared priorities in the Indo-Pacific region.

    — Narendra Modi (@narendramodi) May 21, 2022 " class="align-text-top noRightClick twitterSection" data=" ">

ಮೋದಿ ಅಭಿನಂದನೆ: 'ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯ ವಿಜಯಕ್ಕಾಗಿ ಅಲ್ಬನೆಸ್‌ ಅವರಿಗೆ ಅಭಿನಂದನೆಗಳು. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹಂಚಿಕೆಯ ಆದ್ಯತೆಗಳಿಗಾಗಿ ನಾನು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆಯ ಬೆದರಿಕೆ ತೊಡೆದುಹಾಕಿ ಶಾಂತಿ ಸ್ಥಾಪಿಸಲು ಪಾಕಿಸ್ತಾನ ಪ್ರತಿಜ್ಞೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.