ETV Bharat / international

ಅಹ್ಮದಿ ಸಮುದಾಯದ ಮೇಲೆ ಪಾಕಿಸ್ತಾನ ಪೊಲೀಸರ ದೌರ್ಜನ್ಯ

author img

By

Published : Dec 12, 2022, 8:11 PM IST

ಪಾಕಿಸ್ತಾನದ ಕಾನೂನಿನ ಅಡಿಯಲ್ಲಿ ಅಹ್ಮದಿ ಸಮುದಾಯವು ಮಿನಾರ್‌ಗಳನ್ನು ನಿರ್ಮಿಸುವಂತಿಲ್ಲ ಮತ್ತು ಅವರ ಪೂಜಾ ಸ್ಥಳವನ್ನು ಮಸೀದಿ ಎಂದು ಕರೆಯುವಂತಿಲ್ಲ. ಜೊತೆಗೆ ತಮ್ಮನ್ನು ಪಾಕಿಸ್ತಾನದಲ್ಲಿ ಮುಸ್ಲಿಮರು ಎಂದು ಕರೆದುಕೊಳ್ಳಲು ಯಾವುದೇ ಅನುಮತಿಯೂ ಅವರಿಗಿಲ್ಲ.

Atrocities by Pak Police on Ahmadi Community
ಅಹ್ಮದಿ ಸಮುದಾಯದ ಮೇಲೆ ಪಾಕ್ ಪೊಲೀಸರ ದೌರ್ಜನ್ಯ

ಲಾಹೋರ್: ಕೆಲವು ಧರ್ಮಗುರುಗಳ ಒತ್ತಾಯದ ಮೇರೆಗೆ ಪಾಕಿಸ್ತಾನ ಪೊಲೀಸರು ಪಂಜಾಬ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಅಹ್ಮದಿ ಸಮುದಾಯದ ಪೂಜಾ ಸ್ಥಳದ ಎರಡು ಮಿನಾರ್‌ಗಳನ್ನು ಕೆಡವಿದ್ದಾರೆ. ಅಹ್ಮದಿ ಸಮುದಾಯದ ಪ್ರತಿನಿಧಿಗಳ ಪ್ರಕಾರ, ಲಾಹೋರ್‌ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಗುಜ್ರಾನ್‌ವಾಲಾದ ಬಾಗ್‌ಬಾನ್‌ಪುರ ಪ್ರದೇಶವನ್ನು ಡಿಸೆಂಬರ್ 8 ರಂದು ಸುತ್ತುವರಿದ ಪೊಲೀಸರು, ಅಹ್ಮದೀಯ ಪೂಜಾ ಸ್ಥಳದ ಮಿನಾರ್‌ಗಳನ್ನು ಕೆಡವಿದ್ದಾರೆ.

'ಮಿನಾರ್‌ಗಳನ್ನು ತಾವಾಗಿಯೇ ಕೆಡವದಿದ್ದಲ್ಲಿ ಅಹ್ಮದಿ ಪೂಜಾ ಸ್ಥಳದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಸ್ಥಳೀಯ ಧರ್ಮಗುರುಗಳ ಆದೇಶದಂತೆ ಪೊಲೀಸರು ವರ್ತಿಸಿದ್ದಾರೆ' ಎಂದು ಜಮಾತ್ ಅಹ್ಮದೀಯ ಪಂಜಾಬ್ ಸದಸ್ಯ ಅಮೀರ್ ಮಹಮೂದ್ ಸೋಮವಾರ ತಿಳಿಸಿದ್ದಾರೆ. ಅವರು ಹೇಳುವಂತೆ, ಪಾಕಿಸ್ತಾನದ ಕಾನೂನಿನ ಅಡಿಯಲ್ಲಿ ಅಹ್ಮದಿ ಸಮುದಾಯವು ಮಿನಾರ್‌ಗಳನ್ನು ನಿರ್ಮಿಸುವಂತಿಲ್ಲ ಮತ್ತು ಅವರ ಪೂಜಾ ಸ್ಥಳವನ್ನು ಮಸೀದಿ ಎಂದು ಕರೆಯುವಂತಿಲ್ಲ. ಇದರಿಂದಾಗಿ ಈ ಹಿಂದೆ, ಧಾರ್ಮಿಕ ಉಗ್ರಗಾಮಿಗಳ ಕೋಪವನ್ನು ತಪ್ಪಿಸಲು ಅಹ್ಮದಿಗಳು ಸಾರ್ವಜನಿಕರಿಂದ ಮಿನಾರ್‌ಗಳನ್ನು ಮರೆಮಾಚಲು ಅವುಗಳ ಸುತ್ತಲೂ ಸ್ಟೀಲ್ ಶೀಟ್‌ಗಳನ್ನು ಹಾಕಿದ್ದರು. ಆದರೂ ಕೆಲವು ಸ್ಥಳೀಯ ಧರ್ಮಗುರುಗಳು, ವಿಶೇಷವಾಗಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (TLP)ಗೆ ಸೇರಿದವರು ಮಿನಾರ್‌ಗಳನ್ನು ತೆಗೆದುಹಾಕಲು ಒತ್ತಾಯಿಸಿದ ನಂತರ ಆಡಳಿತವು ಕಾರ್ಯರೂಪಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಕೆಲವು ವಾರಗಳ ಹಿಂದೆ, ಲಾಹೋರ್‌ನಿಂದ ಸುಮಾರು 100 ಕಿಮೀ ದೂರದಲ್ಲಿರುವ ಹಫೀಜಾಬಾದ್ ಜಿಲ್ಲೆಯಲ್ಲಿ ಅಹ್ಮದಿ ಸಮುದಾಯದ ಹಲವಾರು ಸಮಾಧಿಗಳನ್ನು ಅಪರಿಚಿತ ಧಾರ್ಮಿಕ ಉಗ್ರಗಾಮಿಗಳು ಅಪವಿತ್ರಗೊಳಿಸಿದ್ದರು. ಅಲ್ಲದೇ ಈ ಹಿಂದೆಯೂ ಇಂತಹ ಘಟನೆಗಳು ಪಂಜಾಬ್‌ನ ಇತರ ಅಹ್ಮದಿ ಸ್ಮಶಾನಗಳಲ್ಲಿ ನಡೆದಿವೆ. ಆದರೆ ಒಬ್ಬ ಅಪರಾಧಿಯನ್ನು ಕೂಡ ಬಂಧಿಸಲಾಗಿಲ್ಲ, ವಿಚಾರಣೆಗೂ ಒಳಪಡಿಸಲಾಗಿಲ್ಲ. ಅಲ್ಪಸಂಖ್ಯಾತರು, ವಿಶೇಷವಾಗಿ ಅಹ್ಮದಿಯರು ಪಾಕಿಸ್ತಾನದಲ್ಲಿ ಬಹಳ ದುರ್ಬಲರಾಗಿರುವುದರ ಜೊತೆಗೆ ಅವರು ಆಗಾಗ ಧಾರ್ಮಿಕ ಉಗ್ರಗಾಮಿಗಳಿ ಉಪಟಳಕ್ಕೆ ಗುರಿಯಾಗುತ್ತಾರೆ.

ಪಾಕಿಸ್ತಾನಿ ಸರ್ಕಾರವು ಅಹ್ಮದೀಯರನ್ನು ಮುಸ್ಲಿಮರು ಎಂದು ಪರಿಗಣಿಸುವುದಿಲ್ಲ. ಯಾಕೆಂದರೆ 1974 ರಲ್ಲಿ ಅಂಗೀಕರಿಸಿದ ಕಾನೂನಿನ ಪ್ರಕಾರ ಅಹ್ಮದೀಯರು ತಮ್ಮನ್ನು ಪಾಕಿಸ್ತಾನದಲ್ಲಿ ಮುಸ್ಲಿಮರು ಎಂದು ಕರೆದುಕೊಳ್ಳಲು ಯಾವುದೇ ಅನುಮತಿಯೂ ಅವರಿಗಿಲ್ಲ ಎಂದ ಜಮಾತ್ ಪೊಲೀಸರ ಕಾನೂನುಬಾಹಿರ ಕ್ರಮಗಳನ್ನು ಅಹ್ಮದಿ ಸಮುದಾಯ ಖಂಡಿಸುತ್ತದೆ. ಅಹ್ಮದೀಯ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವ ಪೊಲೀಸ್ ಅಧಿಕಾರಿಗಳ ಇಂತಹ ಬರ್ಬರ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಶೆಲ್​ ದಾಳಿ: ಪಾಕಿಸ್ತಾನದ 7 ಜನ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.