ETV Bharat / international

ಎರಡು ಶಾಲೆಗಳಿಗೆ ನುಗ್ಗಿ ಕಿರಾತಕನಿಂದ ಗುಂಡಿನ ದಾಳಿ.. ವಿದ್ಯಾರ್ಥಿ, ಶಿಕ್ಷಕರು ಸೇರಿ ಮೂವರು ಸಾವು

ಬ್ರೆಜಿಲ್‌ನಿಂದ ಎರಡು ಶಾಲೆಗಳಲ್ಲಿ ಗುಂಡಿನ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಆಗುಂತಕ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದು, ಹಲವು ಜನರು ಗಾಯಗೊಂಡಿದ್ದಾರೆ.

author img

By

Published : Nov 26, 2022, 10:11 AM IST

twin school shootings in Brazil  teacher and student died in twin school shooting  Brazil shooting news  ಶಾಲೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಕಿರಾತಕ  ವಿದ್ಯಾರ್ಥಿ ಶಿಕ್ಷಕರು ಸೇರಿ ಮೂವರು ಸಾವು  ಎರಡು ಶಾಲೆಗಳಲ್ಲಿ ಗುಂಡಿನ ದಾಳಿ  ಶಾಲೆಯಲ್ಲಿ ಗುಂಡಿನ ದಾಳಿಗೆ ಮೂವರು ಮೃತ  ಬುಲೆಟ್ ಪ್ರೂಫ್ ವೆಸ್ಟ್ ಧರಿಸಿದ ಶೂಟರ್  ಬ್ರೆಜಿಲ್‌ನ ಎರಡು ಶಾಲೆಗಳಿಗೆ ನುಗ್ಗಿ ಗುಂಡಿನ ದಾಳಿ  ಇಬ್ಬರು ಶಿಕ್ಷಕರು ಮತ್ತು ವಿದ್ಯಾರ್ಥಿಯೊಬ್ಬ ಮೃತ
ಎರಡು ಶಾಲೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಕಿರಾತಕ

ಎಸ್ಪಿರಿಟೊ ಸ್ಯಾಂಟೋ(ಬ್ರೆಜಿಲ್)​: ಶೂಟರ್​ವೋರ್ವ ಆಗ್ನೇಯ ಬ್ರೆಜಿಲ್‌ನ ಎರಡು ಶಾಲೆಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಇಬ್ಬರು ಶಿಕ್ಷಕರು ಮತ್ತು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ.

ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಸಣ್ಣ ಪಟ್ಟಣವಾದ ಅರಾಕ್ರೂಜ್‌ನಲ್ಲಿ ಒಂದೇ ರಸ್ತೆಯಲ್ಲಿರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಹಾಗೂ ಖಾಸಗಿ ಶಾಲೆಯೊಂದಕ್ಕೆ ನುಗ್ಗಿದ ಬಂದೂಕುಧಾರಿ ಗುಂಡಿನ ಮಳೆಗರಿದ್ದಾರೆ. ಪರಿಣಾಮ ಇಬ್ಬರು ಶಿಕ್ಷಕರು ಮತ್ತು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು ಶೋಧದ ನಂತರ ಶಂಕಿತ ಶೂಟರ್ ಅನ್ನು ಬಂಧಿಸಿದ್ದಾರೆ. ಈ ಕುರಿತು ನಾವು ತನಿಖೆಯನ್ನು ಮುಂದುವರಿಸುತ್ತೇವೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಎಂದು ರಾಜ್ಯ ಗವರ್ನರ್ ರೆನಾಟೊ ಕಾಸಾಗ್ರಾಂಡೆ ಟ್ವೀಟ್​ ಮಾಡಿದ್ದಾರೆ.

ದಾಳಿಕೋರನು ಸೆಮಿ ಆಟೊಮ್ಯಾಟಿಕ್ ಪಿಸ್ತೂಲ್ ಬಳಸಿ ದಾಳಿ ನಡೆಸುವ ದೃಶ್ಯವಾಳಿ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಎಸ್ಪಿರಿಟೊ ಸ್ಯಾಂಟೊ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ಮಾರ್ಸಿಯೊ ಸೆಲಾಂಟೆ ಹೇಳಿದರು.

ಸೆಕ್ರೆಟರಿಯೇಟ್‌ನಲ್ಲಿ ವಿಡಿಯೋವನ್ನು ಬಿಡುಗಡೆ ಮಾಡಿದ ಅವರು, ಶೂಟರ್ ಸಾರ್ವಜನಿಕ ಶಾಲೆಯ ಬೀಗವನ್ನು ಮುರಿದ ನಂತರ ಶಿಕ್ಷಕರ ಕೋಣೆಗೆ ನುಗ್ಗಿದ್ದಾನೆ. ಬಳಿಕ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಶಿಕ್ಷಕರು ಮತ್ತು ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ 11 ಜನರು ಗಾಯಗೊಂಡಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಓದಿ: ಅಂತರ್‌ಧರ್ಮೀಯ ವ್ಯಕ್ತಿಯನ್ನು ವಿವಾಹವಾಗಿದ್ದ ಮಹಿಳೆ ಮೇಲೆ ಗುಂಡಿನ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.