ETV Bharat / international

ಪೋಲೆಂಡ್‌: ನಾಜಿಗಳಿಂದ ಕೊಲ್ಲಲ್ಪಟ್ಟ 8,000 ಮಂದಿಯ ಸಾಮೂಹಿಕ ಸಮಾಧಿ ಪತ್ತೆ

author img

By

Published : Jul 15, 2022, 7:25 AM IST

ಪೋಲೆಂಡ್‌ನ ಹಿಂದಿನ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ನ ಬಳಿ 8,000 ಜನರನ್ನು ಸಾಮೂಹಿಕ ಸಮಾಧಿ ಮಾಡಲಾಗಿದ್ದು, ಸುಮಾರು 17.5 ಟನ್ ಚಿತಾಭಸ್ಮ ಪತ್ತೆಯಾಗಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ರಿಮೆಂಬರೆನ್ಸ್ ಬುಧವಾರ ತಿಳಿಸಿದೆ.

Poland mass graves
ಪೋಲೆಂಡ್‌ ಸಾಮೂಹಿಕ ಸಮಾಧಿ

ವಾರ್ಸಾ(ಪೋಲೆಂಡ್‌): ನಾಜಿಗಳಿಂದ ನಿರ್ದಯವಾಗಿ ಕೊಲ್ಲಲ್ಪಟ್ಟ ಕನಿಷ್ಠ 8,000ಕ್ಕೂ ಹೆಚ್ಚು ಮಂದಿಯ ಎರಡು ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ ಎಂದು ಪೋಲೆಂಡ್‌ನ ವಿಶೇಷ ತನಿಖಾಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಐತಿಹಾಸಿಕ ಸಂಸ್ಥೆಯ ತನಿಖಾಧಿಕಾರಿಗಳು ವಾರ್ಸಾದಿಂದ ಉತ್ತರಕ್ಕೆ 160 ಕಿಲೋಮೀಟರ್ ದೂರದಲ್ಲಿರುವ ಬಿಯಾಲುಟಿ ಕಾಡಿನ ಡಿಜಿಯಾಲ್ಡೋವೊ ಎಂದು ಕರೆಯಲ್ಪಡುವ ಸೋಲ್ಡೌ ಕಾನ್ಸಂಟ್ರೇಶನ್ ಕ್ಯಾಂಪ್ ಬಳಿ ವಾರದಿಂದ ಶೋಧ ನಡೆಸಿ ಈ ಸ್ಥಳ ಪತ್ತೆ ಹಚ್ಚಿದ್ದಾರೆ.

ಪೋಲೆಂಡ್‌ನಲ್ಲಿ ಜರ್ಮನಿಯ ನಾಜಿಗಳ ಭೀಕರ ಆಕ್ರಮಣ ಮತ್ತು ಕಮ್ಯುನಿಸ್ಟ್ ಯುಗದಲ್ಲಿ ಮಾಡಿದ ಅಪರಾಧಗಳನ್ನು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ರಿಮೆಂಬರೆನ್ಸ್ ತನಿಖೆ ಮಾಡುತ್ತಿದೆ. 2ನೇ ವಿಶ್ವ ಯುದ್ಧದ ಸಮಯದಲ್ಲಿ ನಾಜಿಗಳು ಪೋಲೆಂಡ್ ಅನ್ನು ವಶಪಡಿಸಿಕೊಂಡಾಗ ಇಲ್ಲಿ ನಾಜಿ ಜರ್ಮನಿ ಶಿಬಿರಗಳನ್ನು ನಿರ್ಮಿಸಲಾಗಿತ್ತು. ಈ ಶಿಬಿರದಲ್ಲಿ ಯಹೂದಿಗಳು, ರಾಜಕೀಯ ವಿರೋಧಿಗಳು, ಮಿಲಿಟರಿ ಮತ್ತು ಪೋಲಿಷ್ ರಾಜಕೀಯ ಗಣ್ಯರು ಸೇರಿ ಅಂದಾಜು 30,000 ಜನ ಕೈದಿಗಳಾಗಿದ್ದರು. ಆದ್ರೆ ಅವರನ್ನು ಎಲ್ಲಿ ಸಮಾಧಿ ಮಾಡಲಾಗಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

  • The recent discovery is evidence of how well the Germans obliterated the traces of WW2 genocide in Eastern Europe. In his speech, the IPN head spoke about the so-called "Aktion 1005" which was aimed at getting rid of the responsibility for the crimes the Germans had committed. pic.twitter.com/rdTE9FQusl

    — Institute of National Remembrance (@ipngovpl_eng) July 13, 2022 " class="align-text-top noRightClick twitterSection" data=" ">

ಸೋಲ್ಡೌ ಕಾನ್ಸಂಟ್ರೇಶನ್ ಕ್ಯಾಂಪ್ ಬಳಿ ಸುಮಾರು 17.5 ಟನ್ ಮಾನವ ಚಿತಾಭಸ್ಮ ಪತ್ತೆಯಾಗಿದ್ದು, ಅವಶೇಷಗಳ ತೂಕವನ್ನು ಆಧರಿಸಿ ಕನಿಷ್ಠ 8,000 ಜನರು ಸತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರೆಲ್ಲಾ 1939 ರ ಸುಮಾರಿನಲ್ಲಿ ಹತ್ಯೆಗೀಡಾದವರು ಮತ್ತು ಹೆಚ್ಚಾಗಿ ಪೋಲಿಷ್ ಗಣ್ಯರಾಗಿದ್ದಾರೆ ಎಂದು ತನಿಖಾಧಿಕಾರಿ ಟೊಮಾಸ್ ಜಾಂಕೋವ್ಸ್ಕಿ ಹೇಳಿದ್ದಾರೆ.

ಪೋಲೆಂಡ್‌ ಆಕ್ರಮಿತ ನಾಜಿಗಳು ಮಾರ್ಚ್ 1944 ರಿಂದ ಕಾಡಿನಲ್ಲಿ ರಹಸ್ಯವಾಗಿ ಕೆಲವರನ್ನು ಸಮಾಧಿ ಮಾಡಿದ್ದಾರೆ. ತಾವು ಮಾಡಿದ ಅಪರಾಧ ಕೃತ್ಯಗಳು ಯಾರಿಗೂ ತಿಳಿಯದಂತೆ ತಡೆಯಲು ಅರಣ್ಯದಲ್ಲಿ ಕೆಲ ಶವಗಳನ್ನು ಸಾಮೂಹಿಕವಾಗಿ ಸುಟ್ಟುಹಾಕಿದ್ದಾರೆ ಎಂದು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ರಿಮೆಂಬರೆನ್ಸ್ ಮುಖ್ಯಸ್ಥ ಕರೋಲ್ ನೌರೋಕಿ ತಿಳಿಸಿದ್ದಾರೆ.

ಇದನ್ನೂ ಓದಿ: ತನಗೆ ಗಂಡು ಮಗು ಆಗಲಿ ಎಂದು ದೇವಿ ಬಳಿ ಹರಕೆ: ಮೇಕೆ ಮೇಯಿಸುತ್ತಿದ್ದ ಯುವಕನ ಬಲಿ ಕೊಟ್ಟ ಕಟುಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.