ETV Bharat / international

ಗೂಢಾಚಾರಿಕೆ ನಡೆಸುತ್ತಿದ್ದ ಚೀನಾ ಬಲೂನ್​ ಹೊಡೆದುರುಳಿಸಿದ ಅಮೆರಿಕ ಸೇನೆ

ಸಮುದ್ರದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್​ ಅನ್ನು ಅಮೆರಿಕ ಕಮಾಂಡೋಗಳು ಹೊಡೆದುರುಳಿಸಿದ್ದಾರೆ.

chinese-surveillance-balloon
ಚೀನಾ ಬಲೂನ್
author img

By

Published : Feb 5, 2023, 7:31 AM IST

ವಾಷಿಂಗ್ಟನ್: ಅಟ್ಲಾಂಟಿಕ್​ ಮಹಾಸಾಗರದಲ್ಲಿ ಹಾರುತ್ತಾ ಬೇಹುಗಾರಿಕೆ ನಡೆಸುತ್ತಿದ್ದ ಚೀನಾದ ಬಲೂನ್​ ಅನ್ನು ಅಮೆರಿಕ ಶನಿವಾರ ಹೊಡೆದು ನೆಲಕ್ಕುರುಳಿಸಿದೆ. ಮೊಂಟಾನಾದಿಂದ ದಕ್ಷಿಣ ಕೆರೊಲಿನಾದವರೆಗೆ ಅಮೆರಿಕ ಖಂಡವನ್ನು ದಾಟಿ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಚೀನಾದ ಕಣ್ಗಾವಲು ಬಲೂನ್ ಹಾರಾಡುತ್ತಿತ್ತು. ಇದನ್ನು ಕಂಡ ಸೇನೆ, ಅಧ್ಯಕ್ಷ ಜೋ ಬೈಡನ್​ ಅವರ ಅನುಮತಿ ಪಡೆದು ಉಡಾಯಿಸಿದೆ.

ಅಮೆರಿಕ ಖಂಡದ ಆಯಕಟ್ಟಿನ ಸ್ಥಳಗಳಲ್ಲಿ ಬೇಹುಗಾರಿಕೆ ಮಾಡುವ ಸಲುವಾಗಿ ಚೀನಾ ನಿರ್ಮಿತ ಬಲೂನ್ ಇಲ್ಲಿ ಹಾರಾಡುತ್ತಿತ್ತು. ವಿಷಯ ಗಮನಕ್ಕೆ ಬಂದ ಬಳಿಕ ಕ್ಷಿಪ್ರ ನಿರ್ಧಾರ ಕೈಗೊಂಡ ಬೈಡನ್​ ಅವರು, ಜನರ ಜೀವಹಾನಿಯಾಗದಂತೆ ಬಲೂನ್​ ಹೊಡೆದು ಹಾಕಲು ಅನುಮತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆಗಿಳಿದ ಉತ್ತರ ಕಮಾಂಡೋ ದಾಳಿ ಮಾಡಿದೆ.

ಅಮೆರಿಕ ಖಂಡದಲ್ಲಿ ಕಣ್ಗಾವಲು ನಡೆಸುತ್ತಿದ್ದ ಈ ಬಲೂನ್​ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ವಿಶ್ಲೇಷಣೆಯ ಬಳಿಕ ಇದು ಜನರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಅನುಮಾನ ಮೂಡಿದ್ದು, ತಕ್ಷಣ ಅಧ್ಯಕ್ಷರಿಗೆ ಮಾಹಿತಿ ರವಾನಿಸಲಾಗಿತ್ತು. ಬಳಿಕ ದೊರೆತ ಆದೇಶದಂತೆ ಎತ್ತರದಲ್ಲಿ ಹಾರುತ್ತಿದ್ದ ಬಲೂನ್​ ಅನ್ನು ಉಡಾಯಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಗಡಿಗಳಲ್ಲಿ ಸಂಚರಿಸುತ್ತಿದ್ದ ಚೀನಾ ಬಲೂನನ್ನು ವಿಶ್ಲೇಷಿಸಿದ ಬಳಿಕವೇ ಅಮೆರಿಕ ಮಿಲಿಟರಿ ಕಮಾಂಡೋಗಳು ಈ ನಿರ್ಧಾರಕ್ಕೆ ಬಂದಿವೆ. ಇದು ಎತ್ತರದಲ್ಲಿ ಹಾರಾಡುತ್ತಾ ಜನರಿಗೆ ಅಪಾಯವನ್ನುಂಟು ಮಾಡುವ ದುರುದ್ದೇಶ ಹೊಂದಿತ್ತು. ರಕ್ಷಣಾ ಇಲಾಖೆ, ಗುಪ್ತಚರ ಸಂಗ್ರಹ ಚಟುವಟಿಕೆಗಳನ್ನು ಬಲೂನ್​ ಕಣ್ಗಾವಲಿಟ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆನಡಾ ನೆರವು: ಅಟ್ಲಾಂಟಿಕ್​ ಸಾಗರದ ಮೇಲೂ ಹಿಡಿತ ಸಾಧಿಸಲು ಹೊರಟಿದ್ದ ಚೀನಾಗೆ ಅಮೆರಿಕ ಪ್ರತಿರೋಧ ಒಡ್ಡುತ್ತಿದ್ದು, ಇದಕ್ಕೆ ಅದರ ನೆರೆರಾಷ್ಟ್ರ ಕೆನಡಾ ಕೂಡ ನೆರವು ನೀಡಿದೆ. ಬಲೂನ್​ ಉರುಳಿಸುವಾಗಲೂ ಕೆನಡಾದ ನೆರವು ಪಡೆಯಲಾಗಿದೆ. ನೊರಾಡ್​ ಮೂಲಕ ಚೀನಾ ಬಲೂನ್ ​ಉತ್ತರ ಅಮೆರಿಕಕ್ಕೆ ಸಾಗಿದಂತೆ ಅದನ್ನು ಪತ್ತೆ ಹಚ್ಚಲು ಮತ್ತು ವಿಶ್ಲೇಷಿಸಲು ಕೆನಡಾ ಹೆಚ್ಚಿನ ಕೊಡುಗೆ ನೀಡಿದೆ ಎಂದು ಅಮೆರಿಕ ಕಮಾಂಡೋ ಪಡೆ ತಿಳಿಸಿದೆ.

ಚೀನಾ ವಿರುದ್ಧದ ಈ ಕ್ರಮವು ನಮ್ಮ ದೇಶದ ಜನರ ಮತ್ತು ಪ್ರದೇಶದ ರಕ್ಷಣೆಗಾಗಿ ನಡೆಸಲಾಗಿದೆ. ದೇಶದ ಸಾರ್ವಭೌಮತ್ವವನ್ನು ಉಲ್ಲಂಘನೆ ಮಾಡಿದಂತಾಗಿದೆ. ಅಮೆರಿಕ ಕಮಾಂಡೋಗಳು ಯಾವಾಗಲೂ ಜನರ ಸುರಕ್ಷತೆ ಮತ್ತು ಭದ್ರತೆಗೆ ಮೊದಲ ಆದ್ಯತೆಯನ್ನು ನೀಡುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.

ಸಂಸತ್​ ಮೆಚ್ಚುಗೆ: ಚೀನಾ ವಿರುದ್ಧದ ಈ ಕ್ರಮವನ್ನು ಅಮೆರಿಕ ಸಂಸತ್ತು ಮೆಚ್ಚಿಕೊಂಡಿದೆ. ಡ್ರ್ಯಾಗನ್​ರಾಷ್ಟ್ರದ ಈ ಅತಿಕ್ರಮಣ ಮತ್ತೊಂದು ದೇಶದ ಸಾರ್ವಭೌಮತೆಯ ಮೇಲಿನ ದಾಳಿಯಾಗಿದೆ. ಅಮೆರಿಕನ್ನರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ. ಅಧ್ಯಕ್ಷ ಬೈಡನ್​ ಅವರ ಈ ನಿರ್ಧಾರ ಸಮಂಜಸವಾಗಿದೆ. ಇದಕ್ಕಾಗಿ ಶ್ಲಾಘಿಸಲಾಗುವುದು. ಉರುಳಿ ಬಿದ್ದ ಬಲೂನ್​ ಪರಿಶೀಲಿಸಿ, ಅದರಲ್ಲಿ ಯಾವ ತಂತ್ರಜ್ಞಾನವನ್ನು ಬಳಸುತ್ತಿದ್ದರು ಎಂಬುದನ್ನು ಪತ್ತೆ ಮಾಡಬೇಕು ಎಂದು ಸಲಹೆ ನೀಡಿದೆ.

ಇದನ್ನೂ ಓದಿ: ಲ್ಯಾಟಿನ್​ ಅಮೆರಿಕದ ಮೇಲೆ ಹಾರಾಟ ನಡೆಸಿದ ಚೀನಾ ಬೇಹುಗಾರಿಕ ಬಲೂನ್​; ಪೆಂಟಗಾನ್​ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.