ETV Bharat / international

ಅಂಬರ್ ಹರ್ಡ್, ರಾಬರ್ಟ್ ಪ್ಯಾಟಿನ್ಸನ್ 'ವಿಶ್ವದ ಅತ್ಯಂತ ಸುಂದರ ತಾರೆಯರು'! - ರಾಬರ್ಟ್ ಪ್ಯಾಟಿನ್ಸನ್ ವಿಶ್ವದ ಅತ್ಯಂತ ಸುಂದರ ವ್ಯಕ್ತಿ

ನಟಿ ಅಂಬರ್ ಹರ್ಡ್ 'ವಿಶ್ವದ ಅತ್ಯಂತ ಸುಂದರ ಮಹಿಳೆ' ಮತ್ತು 'ದಿ ಬ್ಯಾಟ್‌ಮ್ಯಾನ್' ನಟ ರಾಬರ್ಟ್ ಪ್ಯಾಟಿನ್ಸನ್ 'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ಎಂದು ಘೋಷಿಸಲಾಗಿದೆ.

Amber Heard, Robert Pattinson
ಅಂಬರ್ ಹರ್ಡ್, ರಾಬರ್ಟ್ ಪ್ಯಾಟಿನ್ಸನ್
author img

By

Published : Jun 22, 2022, 12:02 PM IST

ಲಂಡನ್(ಯುಕೆ): ಸಾಂಪ್ರದಾಯಿಕ ಫೇಸ್ ಮ್ಯಾಪಿಂಗ್ ವಿಧಾನವನ್ನು ಬಳಸುವ ಮೂಲಕ ಹಾಲಿವುಡ್ ನಟಿ ಅಂಬರ್ ಹರ್ಡ್ ಮತ್ತು ನಟ ರಾಬರ್ಟ್ ಪ್ಯಾಟಿನ್ಸನ್ ವಿಶ್ವದ ಅತ್ಯಂತ ಸುಂದರ ಸೆಲೆಬ್ರೆಟಿಗಳು ಎಂದು ಘೋಷಿಸಲಾಗಿದೆ.

ಮ್ಯಾಶಬಲ್ ಪ್ರಕಾರ, ಲಂಡನ್‌ನಲ್ಲಿರುವ ಸೆಂಟರ್ ಫಾರ್ ಅಡ್ವಾನ್ಸ್ಡ್ ಫೇಶಿಯಲ್ ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿಯ ಡಾ. ಜೂಲಿಯನ್ ಡಿ ಸಿಲ್ವಾ ಅವರು 2016ರಲ್ಲಿ ಅವರ ಸಂಶೋಧನೆಯ ನಂತರ ವಿಶ್ವದ ಅತ್ಯಂತ ಸುಂದರವಾದ ಮುಖವನ್ನು ಹೊಂದಿರುವವರನ್ನು ಕಂಡು ಹಿಡಿಯಲು ಪ್ರಾಚೀನ ಫೇಸ್ ಮ್ಯಾಪಿಂಗ್ ತಂತ್ರ 'PHI' ಅನ್ನು ಬಳಸಿದ್ದರು.

ನಟಿ ಅಂಬರ್ ಹರ್ಡ್ 'ವಿಶ್ವದ ಅತ್ಯಂತ ಸುಂದರ ಮಹಿಳೆ' ಮತ್ತು 'ದಿ ಬ್ಯಾಟ್‌ಮ್ಯಾನ್' ನಟ ರಾಬರ್ಟ್ ಪ್ಯಾಟಿನ್ಸನ್ 'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ಎಂದು ಹೇಳಲಾಗಿದೆ. 'ಫೈ'('PHI) ಎಂಬುದು ಗ್ರೀಕ್ ಫೇಸ್ ಮ್ಯಾಪಿಂಗ್ ತಂತ್ರವಾಗಿದೆ. ಇದನ್ನು ಸೌಂದರ್ಯ 1.618ರ ಗ್ರೀಕ್ ಗೋಲ್ಡನ್ ಅನುಪಾತ ಎಂದೂ ಕರೆಯಲಾಗುತ್ತದೆ. ಇದನ್ನು ಮುಖವು ಎಷ್ಟು ಪರಿಪೂರ್ಣವಾಗಿದೆ ಎಂಬುದನ್ನು ಲೆಕ್ಕಹಾಕಲು ಬಳಸಲಾಗುತ್ತದೆ. ಡಾ. ಸಿಲ್ವಾ ಈ ತಂತ್ರವನ್ನು ಬಳಸಿದ್ದರು.

'ಅಕ್ವಾಮನ್' ನಟಿ ಅಂಬರ್ ಹರ್ಡ್ ಅವರ ಮುಖವು ಗ್ರೀಕ್ ಗೋಲ್ಡನ್ ಅನುಪಾತಕ್ಕೆ 91.85 ಪ್ರತಿ ಶತ ನಿಖರವಾಗಿದೆ ಎಂದು ಕಂಡುಹಿಡಿದಿದೆ. ಅವರನ್ನು 'ವಿಶ್ವದ ಅತ್ಯಂತ ಸುಂದರ ಮಹಿಳೆ' ಎಂದು ಘೋಷಿಸಿದೆ. ಇದರೊಂದಿಗೆ, ಡಾ.ಸಿಲ್ವಾ ಇದೇ ವಿಧಾನವನ್ನು ಬಳಸಿ ರಾಬರ್ಟ್ ಪ್ಯಾಟಿನ್ಸನ್ 92.15 ಪ್ರತಿ ಶತ ನಿಖರತೆಯೊಂದಿಗೆ 'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ಎಂದು ಘೋಷಿಸಿದರು. ನಂತರ 'ಮ್ಯಾನ್ ಆಫ್ ಸ್ಟೀಲ್' ನಟ ಹೆನ್ರಿ ಕ್ಯಾವಿಲ್ ಶೇ.91.64 ನಿಖರತೆಯೊಂದಿಗೆ ಮತ್ತು ಬ್ರಾಡ್ಲಿ ಕೂಪರ್ ಮತ್ತು ಬ್ರಾಡ್ ಪಿಟ್ ಕ್ರಮವಾಗಿ ಶೇ 90.55 ಮತ್ತು ಶೇ. 90.51 ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಸುದ್ದಿ ಹೊರಬಿದ್ದ ತಕ್ಷಣ, ಅಭಿಮಾನಿಗಳು ಅಂಬರ್ ಮತ್ತು ರಾಬರ್ಟ್ ಅವರನ್ನು ಅಭಿನಂದಿಸಿದರು. ಅಂಬರ್ ಹರ್ಡ್ ಇತ್ತೀಚೆಗೆ ತನ್ನ ಮಾಜಿ ಪತಿ ಜಾನಿ ಡೆಪ್ ಅವರ ಮಾನನಷ್ಟ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ನ್ಯಾಯಾಧೀಶರು $10 ಮಿಲಿಯನ್ ಪಾವತಿಸಲು ನಟಿಗೆ ಆದೇಶಿಸಿದ್ದರು. ಅಂಬರ್ ಹರ್ಡ್ ಡಿಸಿ ಕಾಮಿಕ್ಸ್ 'ದಿ ಅಕ್ವಾಮನ್ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ರಾಬರ್ ಪ್ಯಾಟಿನ್ಸನ್ ಇತ್ತೀಚೆಗೆ ಡಿಸಿ ಕಾಮಿಕ್ಸ್ 'ದಿ ಬ್ಯಾಟ್‌ಮ್ಯಾನ್' ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ದೇವಸ್ಥಾನದ ನೆಲ ಗುಡಿಸಿ, ಪೂಜೆ ಸಲ್ಲಿಸಿದ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.