ETV Bharat / international

ಭಾರತೀಯ ಸಿನಿಮಾಗಳ ಬಿಡುಗಡೆಗೆ ಒತ್ತಾಯಿಸಿದ ಪಾಕಿಸ್ತಾನಿ ನಟ ಫೈಸಲ್ ಖುರೈಶಿ

ಪಾಕಿಸ್ತಾನದಲ್ಲಿ ಭಾರತೀಯ ಚಲನಚಿತ್ರಗಳನ್ನು ಬಿಡುಗಡೆ ಮಾಡುವಂತೆ ಅಲ್ಲಿನ ಪ್ರಮುಖ ನಟ ಫೈಸಲ್ ಖುರೈಶಿ ಆಗ್ರಹಿಸಿದ್ದಾರೆ.

Pakistan
ಪಾಕಿಸ್ತಾನ
author img

By PTI

Published : Jan 1, 2024, 10:32 AM IST

ಕರಾಚಿ: ಸ್ಥಳೀಯ ಸಿನಿಮಾ ಪ್ರದರ್ಶನ ವಲಯವನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನದ ಟಾಪ್ ನಟ ಮತ್ತು ನಿರ್ಮಾಪಕರಲ್ಲಿ ಒಬ್ಬರಾದ ಫೈಸಲ್ ಖುರೈಶಿ ಅವರು ದೇಶದಲ್ಲಿ ಭಾರತೀಯ ಚಲನಚಿತ್ರಗಳನ್ನು ಬಿಡುಗಡೆ ಮಾಡಬೇಕೆಂದು ಹೇಳಿದರು.

ಸ್ಥಳೀಯ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಲವಾರು ಹಿಟ್ ಧಾರಾವಾಹಿಗಳಲ್ಲಿ ನಟಿಸಿರುವ ಮತ್ತು ಅನೇಕ ಬ್ಲಾಕ್‌ಬಸ್ಟರ್ ಸರಣಿಗಳನ್ನು ನಿರ್ಮಿಸಿರುವ ಖುರೈಶಿ, "ಪಾಕಿಸ್ತಾನವು ಬದುಕಲು ಮತ್ತು ಬೆಳೆಯಲು ಭಾರತೀಯ ಚಲನಚಿತ್ರಗಳ ಪ್ರದರ್ಶನದ ಮೇಲಿನ ನಿಷೇಧವನ್ನು ತೆಗೆದುಹಾಕುವ ಅಗತ್ಯವಿದೆ. ನಾನು ಪಾಕಿಸ್ತಾನದವನಾಗಿದ್ದೇನೆ, ಜೊತೆಗೆ ದೇಶಭಕ್ತ ಕೂಡ. ಆದರೆ, ಪಾಕಿಸ್ತಾನಿ ಚಿತ್ರಮಂದಿರಗಳನ್ನು ನಡೆಸಬೇಕಾದರೆ ನೀವು ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸುವುದು ಮುಖ್ಯ. ಪಾಕಿಸ್ತಾನದ ಪ್ರೇಕ್ಷಕರು ಭಾರತೀಯ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ನಾವು ಸಂಬಂಧಗಳನ್ನು ಸುಧಾರಿಸುವ ಕೆಲಸ ಮಾಡೋಣ" ಎಂದು ಹೇಳಿದರು.

2019ರ ಅಂತ್ಯದಿಂದ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಸಿನಿ ರಸಿಕರು ಚಲನಚಿತ್ರಗಳನ್ನು ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಂತಹ ವಿಭಿನ್ನ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ವೀಕ್ಷಿಸಬಹುದು.

"ಪಾಕಿಸ್ತಾನದಲ್ಲಿ ಭಾರತೀಯ ಚಲನಚಿತ್ರಗಳ ಮೇಲೆ ಯಾವುದೇ ನಿಷೇಧವಿಲ್ಲದಿದ್ದರೆ, ಪಾಕಿಸ್ತಾನದ ಚಲನಚಿತ್ರ ನಾಟಕ ಉದ್ಯಮವು ಭಾರತೀಯ ಸ್ಟ್ರೀಮಿಂಗ್ ಪೋರ್ಟಲ್‌ಗಳು ಮತ್ತು ಕೆಲವು ಚಾನೆಲ್‌ಗಳಲ್ಲಿ ಪಾಕಿಸ್ತಾನಿ ವಿಷಯವನ್ನು ಪ್ರದರ್ಶಿಸುವುದು ಸೇರಿದಂತೆ ಮನರಂಜನಾ ವ್ಯವಹಾರದಿಂದ ವಾರ್ಷಿಕವಾಗಿ 6,000 ರಿಂದ 7,000 ಮಿಲಿಯನ್ ರೂ. ಗಳಿಸುತ್ತಿತ್ತು" ಎಂದು ಖುರೈಶಿ ಅಭಿಪ್ರಾಯ ವ್ಯಕ್ತಪಡಿಸಿದರು.

"ನಮ್ಮ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ಅವರ ಆನ್‌ಲೈನ್ ಪೋರ್ಟಲ್‌ಗಳಲ್ಲಿ ತೋರಿಸಲಾಗುತ್ತಿದೆ. ನಮ್ಮ ಜನರು ಭಾರತೀಯ ಚಲನಚಿತ್ರಗಳನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಹೋಗುತ್ತಿದ್ದರು, ಇದು ನಮ್ಮ ಉದ್ಯಮಕ್ಕೆ ಅಮೂಲ್ಯವಾದ ಆದಾಯವನ್ನು ತಂದಿತ್ತು. ಆದ್ರೆ, ಈಗ ನಮ್ಮ ಆದಾಯದ ಮಾರ್ಗಗಳನ್ನು ಸ್ಥಗಿತಗೊಳಿಸಿರುವುದು ತಮಾಷೆಯಾಗಿದೆ. ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿಸುವವರೆಗೂ ಸಿನಿಮಾ ಉದ್ಯಮವು ಬೆಳೆಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.