ಜೆಡ್ಡಾ (ಸೌದಿ ಅರೇಬಿಯಾ): ಸೇನಾ ಸಂಘರ್ಷ ಪೀಡಿತ ಸುಡಾನ್‌ನಿಂದ ಭಾರತೀಯರ ಸ್ಥಳಾಂತರ ಮಾಡುವ ಕಾರ್ಯ ಮುಂದುವರೆದಿದೆ. 362 ಜನ ಭಾರತೀಯರನ್ನು ಹೊತ್ತ ವಿಮಾನ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಸೌದಿ ಅರೇಬಿಯಾದ ಜೆಡ್ಡಾದಿಂದ ವಿಮಾನ ಹಾರಾಟ ಆರಂಭಿಸಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿ ಪಿಕ್ಕಿ ಬುಡಕಟ್ಟಿನವರು ಇದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಕೇಂದ್ರ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.
-
Bon voyage!
— V. Muraleedharan (@MOS_MEA) April 28, 2023 " class="align-text-top noRightClick twitterSection" data="
Delighted to see off 362 Indians evacuated from Sudan on a flight bound for Bengaluru from Jeddah. Good number of these are from Hakki Pikki tribe.#OperationKaveri pic.twitter.com/z3DEj4Vnjd
">Bon voyage!
— V. Muraleedharan (@MOS_MEA) April 28, 2023
Delighted to see off 362 Indians evacuated from Sudan on a flight bound for Bengaluru from Jeddah. Good number of these are from Hakki Pikki tribe.#OperationKaveri pic.twitter.com/z3DEj4VnjdBon voyage!
— V. Muraleedharan (@MOS_MEA) April 28, 2023
Delighted to see off 362 Indians evacuated from Sudan on a flight bound for Bengaluru from Jeddah. Good number of these are from Hakki Pikki tribe.#OperationKaveri pic.twitter.com/z3DEj4Vnjd
ಸೇನೆ ಮತ್ತು ಅರೆ ಸೇನೆ ಪಡೆಗಳ ನಡುವಿನ ಬಿಕ್ಕಟ್ಟಿನಿಂದ ಸುಡಾನ್ನಲ್ಲಿ ಹಿಂಸಾಚಾರ ನಡೆಯುತ್ತಿದೆ. ಅಪಾರ ಸಾವು-ನೋವು ಉಂಟಾಗುತ್ತಿದೆ. ಈ ಸಂಘರ್ಷ ಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಸೋಮವಾರದಿಂದ 'ಆಪರೇಷನ್ ಕಾವೇರಿ' ಹೆಸರಲ್ಲಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಕೈಗೊಂಡಿದೆ. ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ವಿಮಾನವು ಜೆಡ್ಡಾದಿಂದ ಬೆಂಗಳೂರಿಗೆ ಹೊತ್ತು ತರುತ್ತಿದೆ. ಈ ವಿಮಾನದಲ್ಲಿ 362 ಭಾರತೀಯರನ್ನು ನೋಡಿ ಸಂತೋಷವಾಯಿತು. ಇವರಲ್ಲಿ ಉತ್ತಮ ಸಂಖ್ಯೆಯಲ್ಲಿ ಹಕ್ಕಿ ಪಿಕ್ಕಿ ಬುಡಕಟ್ಟಿನವರು ಸೇರಿದ್ದಾರೆ ಎಂದು ಕೇಂದ್ರ ಸಚಿವ ಮುರಳೀಧರನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಾವೇರಿ ಅಡಿ ಜೆಡ್ಡಾಗೆ ತಲುಪಿದ 8ನೇ ಬ್ಯಾಚ್, ಸುಡಾನ್ನಲ್ಲಿ ಮತ್ತೆ ಕದನ ವಿರಾಮ ಘೋಷಣೆ
ಇದುವರೆಗೆ ಹತ್ತನೇ ಬ್ಯಾಚ್‌ಗಳ ಸ್ಥಳಾಂತರ: ಮತ್ತೊಂದೆಡೆ, ಇದುವರೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಭಾರತೀಯರ ಎಂಟನೇ, ಒಂಬತ್ತನೇ ಮತ್ತು ಹತ್ತನೇ ಬ್ಯಾಚ್‌ಗಳು ಸುಡಾನ್‌ನಿಂದ ಜೆಡ್ಡಾಕ್ಕೆ ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ತಿಳಿಸಿದ್ದಾರೆ. ಆಪರೇಷನ್ ಕಾವೇರಿ ಮತ್ತಷ್ಟು ಮುಂದುವರೆದಿದೆ. ಭಾರತೀಯ ವಾಯು ಪಡೆಯ ಸಿ-130ಜಿ ವಿಮಾನದಲ್ಲಿ 135 ಪ್ರಯಾಣಿಕರೊಂದಿಗೆ 10ನೇ ಬ್ಯಾಚ್ ಸುಡಾನ್‌ನಿಂದ ಜೆಡ್ಡಾಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸುಡಾನ್ನಲ್ಲಿ ಕಳೆದ 14 ದಿನಗಳಿಂದ ಸೇನೆ ಮತ್ತು ಅರೆ ಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಸಂಘರ್ಷ ಏರ್ಪಟ್ಟಿದೆ. ಇದರಲ್ಲಿ ಇದುವರೆಗೆ ಸುಮಾರು 400ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮಾತುಕತೆ ಮೂಲಕ ಕದನ ವಿರಾಮ ಘೋಷಿಸಲಾಗಿದೆ.
ಇದರಿಂದ ಭಾರತವು ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ವೇಗ ಪಡೆದಿದೆ. ಸುಡಾನ್ ಅಧಿಕಾರಿಗಳ ಹೊರತಾಗಿ ವಿದೇಶಾಂಗ ಮತ್ತು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯುಎನ್, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಯುಎಸ್ ರಾಷ್ಟ್ರಗಳೊಂದಿಗೆ ಭಾರತೀಯ ಅಧಿಕಾರಿಗಳು ನಿಯಮಿತವಾಗಿ ಸಂಪರ್ಕದಲ್ಲಿದ್ದು, ಭಾರತೀಯ ಸ್ಥಳಾಂತರ ಕಾರ್ಯವನ್ನು ಮಾಡಲಾಗುತ್ತಿದೆ.
ಇತ್ತ, ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರು ದೇಶಕ್ಕೆ ಬಂದ ನಂತರ ತಮ್ಮ ರಾಜ್ಯಗಳಿಗೆ ಕರೆ ತರಲು ಹಲವಾರು ರಾಜ್ಯಗಳು ಹೆಲ್ಪ್ ಡೆಸ್ಕ್‌ಗಳನ್ನು ತೆರೆದಿವೆ. ಜೊತೆಗೆ ಉಚಿತ ಪ್ರಯಾಣ ಮತ್ತು ವಸತಿಯಂತಹ ಸಹಾಯದ ಬಗ್ಗೆ ಘೋಷಣೆ ಮಾಡಿವೆ. ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಇತರ ರಾಜ್ಯಗಳು ತಮ್ಮ ರಾಜ್ಯದ ಜನರಿಗಾಗಿ ನೆರವು ಪ್ರಕಟಿಸಿವೆ.
ಇದನ್ನೂ ಓದಿ: ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಜನರಿಗೆ ನೆರವು ಘೋಷಿಸಿದ ರಾಜ್ಯ ಸರ್ಕಾರಗಳು