ಅರ್ಲೆ(ಯುಎಸ್): ಜೈಲೆನ್ ಸ್ಮಿತ್ ಎನ್ನುವ ಹುಡುಗ ತನ್ನ 18ನೇ ವಯಸ್ಸಿನಲ್ಲೇ ಚುನಾವಣೆಯಲ್ಲಿ ಗೆದ್ದು ಪೂರ್ವದ ಅರ್ಕಾನ್ಸಾಸ್ ನಗರದ ಸಣ್ಣ ಪಟ್ಟಣದಲ್ಲಿ ಮೇಯರ್ ಆಗಿದ್ದಾರೆ. ಯುಎಸ್ ಇತಿಹಾಸದಲ್ಲೇ ಇವರು ಅತ್ಯಂತ ಕಿರಿಯ ಮೇಯರ್ ಆಗಿ ಹೊರಹೊಮ್ಮಿದ್ದಾರೆ.
ಜೈಲೆನ್ ಸ್ಮಿತ್ ಅವರು ಮಂಗಳವಾರ ನಡೆದ ಎರಡನೇ ಚುನಾವಣೆಯಲ್ಲಿ ನೆಮಿ ಮ್ಯಾಥ್ಯೂಸ್ ಎಂಬವರ ವಿರುದ್ಧ 183 ಮತ್ತು 235 ಮತಗಳನ್ನು ಪಡೆದು ಅರ್ಲೆಯ ಮೇಯರ್ ಆದರು. ಇವರು ಆಫ್ರಿಕನ್ ಅಮೆರಿಕನ್ ಮೇಯರ್‌ಗಳ ಸಂಘದ ಕಿರಿಯ ಸದಸ್ಯನೂ ಹೌದು.
ಅಸೋಸಿಯೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫಿಲ್ಲಿಸ್ ಡಿಕರ್ಸನ್ ಈ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿ, 20 ವರ್ಷ ತುಂಬುವ ಮೊದಲು ಚುನಾಯಿತರಾದ ಬೆರಳೆಣಿಕೆಯ ಜನರ ಪೈಕಿ ಸ್ಮಿತ್ ಕೂಡ ಸೇರಿದ್ದಾರೆ. ಇವರ ತರಹವೇ 35 ವರ್ಷದ ಕ್ಲೀವ್‌ಲ್ಯಾಂಡ್ ಮೇಯರ್ ಜಸ್ಟಿನ್ ಬಿಬ್ರವರು ಅರ್ಕಾನ್ಸಾಸ್ ಡೆಮೋಕ್ರಾಟ್-ಗೆಜೆಟ್ ಸಂಘದ ಪ್ರಸ್ತುತ ಕಿರಿಯ ಸದಸ್ಯರು.
2005 ರಲ್ಲಿ ಮೈಕೆಲ್ ಸೆಷನ್ಸ್ ಎನ್ನುವವರು 18 ವರ್ಷದವರಾಗಿದ್ದಾಗ ಮಿಚಿಗನ್‌ನ ಹಿಲ್ಸ್‌ಡೇಲ್‌ನ ಮೇಯರ್ ಆಗಿ ಆಯ್ಕೆಯಾಗಿದ್ದರು. ಜೊತೆಗೆ, 2008 ರಲ್ಲಿ ಜಾನ್ ಟೈಲರ್ ಹ್ಯಾಮನ್ಸ್ರವರು 19 ವರ್ಷದವರಾಗಿದ್ದಾಗ ಮಸ್ಕೋಗೀಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದರು. ಅರ್ಕಾನ್ಸಾಸ್‌ನ ವೆಸ್ಟ್ ಮೆಂಫಿಸ್‌ನಲ್ಲಿರುವ ಅರ್ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ ಮಿಡ್-ಸೌತ್‌ನಲ್ಲಿ ವಿದ್ಯಾರ್ಥಿಯಾಗಿರುವ ಸ್ಮಿತ್, ಮೇ ತಿಂಗಳಲ್ಲಿ ಅರ್ಲೆ ಹೈಸ್ಕೂಲ್‌ನಿಂದ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ವೀಸಾ ನೇಮಕಾತಿ ವಿಳಂಬ ಸಮಸ್ಯೆಗೆ ಶೀಘ್ರ ಪರಿಹಾರ: ಅಮೆರಿಕ ಭರವಸೆ