ETV Bharat / international

ವಯಸ್ಸು 14, ಶೂ ಸೈಜ್ 23! ತಾಯಿಗೆ ಪಜೀತಿ ತಂದಿಟ್ಟ ಮಗನ ವಿಶೇಷ ಕಾಲ್ಗುಣ - ಮಗನಿಗೆ ಶೂ ಖರೀದಿ

6 ಅಡಿ 10 ಇಂಚು ಎತ್ತರವಿರುವ 14 ವರ್ಷದ ಬಾಲಕ ಎರಿಕ್ ಕಿಲ್ಬರ್ನ್ ಜೂನಿಯರ್‌ಗೆ ಕೊನೆಗೂ ಸಂತಸದ ಸುದ್ದಿ ಸಿಕ್ಕಿದೆ.

Football Player Who Wears Size 23 Shoes  Football Player Gets Great News  Michigan mom Rebecca Kilburn  ಮಗನ 23 ಸೈಜಿನ ಶೂಗಾಗಿ ಪ್ರಪಂಚವೇ ಸುತ್ತಾಡಿದ ತಾಯಿ  ಕಷ್ಟಕ್ಕೆ ಮುಂದಾದ ಬೂಟ್ ತಯಾರಿ​ ಕಂಪನಿಗಳು  ಫುಟ್ಬಾಲ್ ಆಟಗಾರ ಎರಿಕ್ ಕಿಲ್ಬರ್ನ್ ಜೂನಿಯರ್  ಮಗನಿಗೆ ಶೂ ಖರೀದಿ  ಪೂಮಾ ಮತ್ತು ಅಂಡರ್​ ಆರ್ಮರ್​ ಕಂಪನಿ
ಮಗನ 23 ಸೈಜಿನ ಶೂಗಾಗಿ ಪ್ರಪಂಚವೇ ಸುತ್ತಾಡಿದ ತಾಯಿ
author img

By

Published : Mar 28, 2023, 9:26 AM IST

ಮಿಚಿಗನ್​ (ಯುಎಸ್‌ಎ): ಮಹಿಳೆಯೊಬ್ಬರು ತನ್ನ 14 ವರ್ಷದ ಮಗನಿಗೆ ಶೂ ಖರೀದಿಸಲು ವಿಶ್ವಾದ್ಯಂತ ಹುಡುಕಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಆತನಿಗೆ ಬೇಕಿರುವ ಶೂ ಸೈಜ್​ ಸಂಖ್ಯೆ 23!. ಕೆಲವು ಶೂ ತಯಾರಿಕಾ ಕಂಪನಿಗಳನ್ನು ಅವರು ಸಂಪರ್ಕಿಸಿದ್ದು, ಇಷ್ಟು ದೊಡ್ಡ ಗಾತ್ರದಲ್ಲಿ ತಯಾರಿಸಲು ಸಾಧ್ಯವಿಲ್ಲ ಎನ್ನುವುದು ಅವರ ಮಾತಾಗಿತ್ತು.

ಇದು ಅಮೆರಿಕದ ಮಿಚಿಗನ್ ನಿವಾಸಿ ಎರಿಕ್ ಜೂನಿಯರ್ ಎಂಬ ಬಾಲಕನ ಪರಿಸ್ಥಿತಿ. 14ನೇ ವಯಸ್ಸಿನಲ್ಲಿ ಎರಿಕ್ ಆರು ಅಡಿ ಹತ್ತು ಇಂಚು ಎತ್ತರಕ್ಕೆ ಬೆಳೆದಿದ್ದಾನೆ. ಹುಟ್ಟಿದಾಗಲೇ ಆತನ ಪಾದಗಳು ಸ್ವಲ್ಪ ದೊಡ್ಡದಾಗಿದ್ದವು ಎನ್ನುತ್ತಾರೆ ತಾಯಿ ರೆಬೆಕ್ಕಾ. ನನ್ನ ಮಗ ಅಸಾಧಾರಣ ರೀತಿಯಲ್ಲಿ ಬೆಳೆಯುತ್ತಿದ್ದಾನೆ. ಏಳನೇ ತರಗತಿಗೆ ಬರುವಷ್ಟರಲ್ಲಿ ಆತನ ಶೂ ಗಾತ್ರ 17ಕ್ಕೆ ತಲುಪಿದೆ. ಅಂದಿನಿಂದ, ನಾನು ಮಗನ ಪಾದಗಳಿಗೆ ಸರಿಹೊಂದುವ ಬೂಟುಗಳನ್ನು ಹುಡುಕುವಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಹೀಗಾಗಿ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸಿದ್ದರಿಂದ ಎರಿಕ್‌ನ ಪಾದಗಳಲ್ಲಿ ಸಮಸ್ಯೆಗಳು ಉಲ್ಬಣಿಸುತ್ತಿವೆ. ಆತ ಇತರೆ ಮಕ್ಕಳಂತೆ ಆಟವಾಡಲು ಸಾಧ್ಯವಾಗುತ್ತಿಲ್ಲ. ಎರಿಕ್ ಪಾದಗಳಿಗೆ ಸರಿಯಾದ ಗಾತ್ರದ ಶೂಗಳನ್ನು ಹುಡುಕಲು ನಾನು ಎಷ್ಟೇ ಅಂಗಡಿಗಳಿಗೆ ಹೋದರೂ ಫಲ ನೀಡಿಲ್ಲ ಎಂದು ತಿಳಿಸಿದ್ದಾರೆ.

ಒಂದು ದಿನ ನೈಕಿ ಶೂ ಶಾಪ್​ಗೆ ಭೇಟಿ ನೀಡಿದ್ದೆ. ಅಲ್ಲಿ ನಮ್ಮ ಕುಟುಂಬದ ಸ್ನೇಹಿತರೊಬ್ಬರು ನಮ್ಮನ್ನು ಗುರುತಿಸಿದರು. ಕಂಪನಿಯು 18 ಸೈಜಿನವರೆಗೆ ಶೂಗಳನ್ನು ತಯಾರಿಸುತ್ತದೆ. 22 ಗಾತ್ರದ ಶೂಗಳನ್ನು ಕ್ರೀಡಾಪಟುವಿಗಾಗಿ ವಿಶೇಷವಾಗಿ ತಯಾರಿಸುತ್ತದೆ ಎಂದು ಹೇಳಿದೆ. ಆದ್ರೆ ಎರಿಕ್‌ನ ತಾಯಿ ಧರಿಸುವ 23 ಗಾತ್ರದ ಬೂಟುಗಳೂ ಸಹ ನನ್ನ ಮಗನಿಗೆ ಹೊಂದಿಕೆಯಾಗುತ್ತಿಲ್ಲ. ಏಕೆಂದರೆ ಅವನ ಪಾದಗಳು ಇನ್ನೂ ಬೆಳೆಯುತ್ತಿವೆ ಎನ್ನುವುದು ರೆಬೆಕ್ಕಾ ಚಿಂತೆ. ಒಂದು ದಿನ ಆತನ ಪರಿಸ್ಥಿತಿಯ ಕುರಿತು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ ಲೇಖನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಪೂಮಾ ಮತ್ತು ಅಂಡರ್ ಆರ್ಮರ್ ಕಂಪನಿಗಳು ಎರಿಕ್‌ಗೆ ಸೂಕ್ತವಾದ ವಿಶೇಷ ಶೂಗಳನ್ನು ತಯಾರಿಸಲು ಮುಂದಾಗಿವೆ.

ಎರಿಕ್​ ಒಬ್ಬ ಫುಟ್ಬಾಲ್​ ಆಟಗಾರ. ಗುಡ್ರಿಚ್ ಹೈಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಫುಟ್ಬಾಲ್​ ಪಂದ್ಯದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಸರಿಯಾದ ಶೂ ಧರಿಸದ ಕಾರಣ ಪಾದಗಳಲ್ಲಿ ಸಮಸ್ಯೆಗಳು ಉಂಟಾಗಿದ್ದವು. ಅಂದಿನಿಂದ ಫುಟ್ಬಾಲ್​ ಆಟವಾಡಲು ಆತ ಹಿಂದೇಟು ಹಾಕುತ್ತಿದ್ದಾನೆ. ಈತನ ಸಮಸ್ಯೆ ಬಗೆಹರಿಸಲು ಪೂಮಾ ಮತ್ತು ಅಂಡರ್​ ಆರ್ಮರ್​ ಕಂಪನಿಗಳು ಮುಂದಾಗಿದ್ದು ವಿಶೇಷ ಶೂಗಳನ್ನು ತಯಾರಿಸಿ ನೀಡುತ್ತಿವೆ. ಇದನ್ನು ಧರಿಸಿ ಫುಟ್ಬಾಲ್​ ಆಡುತ್ತಿದ್ದಾನೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಬಾಸ್ಕೆಟ್​ ಬಾಲ್​ ಆಡಲು ಪೂಮಾ ಕಂಪನಿಯೊಂದಿಗೆ ಶೂ ಕಿಟ್​ಗಳನ್ನು ಖರೀದಿಸುತ್ತಿದ್ದಾನೆ.

ಇದನ್ನೂ ಓದಿ: ದೇವಸ್ಥಾನ ಪ್ರವೇಶಿಸಲು ಮಹಿಳೆಯರಂತೆ ವೇಷ ಧರಿಸುವ ಪುರುಷರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.