ETV Bharat / international

ಪಾಕಿಸ್ತಾನದಲ್ಲಿ ಉಚಿತ ಗೋಧಿ ಹಿಟ್ಟು ಪಡೆಯಲು ನೂಕುನುಗ್ಗಲು; ಕಾಲ್ತುಳಿತಕ್ಕೆ 11 ಜನ ಸಾವು

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜಿಲ್ಲೆಗಳಲ್ಲಿ ಇತ್ತೀಚೆಗೆ ಉಚಿತ ಗೋಧಿ ಹಿಟ್ಟು ವಿತರಿಸುವ ಕೇಂದ್ರಗಳಲ್ಲಿ ಕಾಲ್ತುಳಿತ ಉಂಟಾಗಿ ಹಲವರು ಅಸುನೀಗಿದ್ದಾರೆ.

author img

By

Published : Mar 30, 2023, 8:56 AM IST

Updated : Mar 30, 2023, 9:48 AM IST

11 people died  people died while collecting free flour  free flour in Pakistan  ಉಚಿತ ಗೋಧಿ ಹಿಟ್ಟು  ಉಚಿತ ಗೋಧಿ ಹಿಟ್ಟು ಪಡೆಯುವ ವೇಳೆ ನೂಕುನುಗ್ಗಲು  ಕಾಲ್ತುಳಿತದಲ್ಲಿ 11 ಜನ ಸಾವು  ಉಚಿತ ಗೋಧಿ ಹಿಟ್ಟು ವಿತರಿಸುವ ಕೇಂದ್ರಗಳಲ್ಲಿ ಕಾಲ್ತುಳಿತ  ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು  ಜನರು ಹಸಿವಿನಿಂದ ಬಳಲಿ ಸಾಯುವ ಸ್ಥಿತಿ  ಪ್ರತಿ ನಿತ್ಯದ ವಸ್ತುಗಳ ಬೆಲೆಯೂ ಗಗನ  ಸರ್ಕಾರಿ ವಿತರಣಾ ಕೇಂದ್ರಗಳಿಂದ ಉಚಿತ ಹಿಟ್ಟು
ಉಚಿತ ಗೋಧಿ ಹಿಟ್ಟು ಪಡೆಯುವ ವೇಳೆ ನೂಕುನುಗ್ಗಲು

ಪಂಜಾಬ್ (ಪಾಕಿಸ್ತಾನ)​: ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರು ಹಸಿವಿನಿಂದ ಬಳಲಿ ಪ್ರಾಣ ಕಳೆದುಕೊಳ್ಳುವ ದುಸ್ಥಿತಿ ಉಂಟಾಗಿದೆ. ದೇಶದಲ್ಲಿ ಗೋಧಿ ಹಿಟ್ಟು ಮಾತ್ರವಲ್ಲ, ದಿನನಿತ್ಯದ ವಸ್ತುಗಳ ಬೆಲೆಯೂ ಗಗನಮುಖಿಯಾಗಿದೆ. ಇದನ್ನು ತಪ್ಪಿಸಲು ಸರ್ಕಾರಿ ವಿತರಣಾ ಕೇಂದ್ರಗಳಲ್ಲಿ ಉಚಿತ ಹಿಟ್ಟು ನೀಡುವ ಯೋಜನೆಯನ್ನು ಸರ್ಕಾರ ಆರಂಭಿಸಿದೆ.

ಕಾಲ್ತುಳಿತದಲ್ಲಿ ಹಲವರು ಸಾವು: ಪಂಜಾಬ್ ಪ್ರಾಂತ್ಯದ ಸರ್ಕಾರಿ ವಿತರಣಾ ಕೇಂದ್ರಗಳಿಂದ ಉಚಿತ ಹಿಟ್ಟು ಪಡೆಯಲು ಪ್ರಯತ್ನಿಸುತ್ತಿರುವಾಗ ನೂಕಾಟ ತಳ್ಳಾಟ ನಡೆದಿದ್ದು, ಮಹಿಳೆಯರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ದಕ್ಷಿಣ ಪಂಜಾಬ್‌ನ ಸಾಹಿವಾಲ್, ಬಹವಾಲ್‌ಪುರ್, ಮುಜಾಫರ್‌ಗಢ, ಒಕಾರಾ, ಫಸಿಲಾಬಾದ್, ಜೆಹಾನಿಯನ್ ಮತ್ತು ಮುಲ್ತಾನ್ ಜಿಲ್ಲೆಗಳ ಕೇಂದ್ರಗಳಲ್ಲಿ ಇತ್ತೀಚೆಗೆ ಇಂಥದ್ದೇ ಘಟನೆಗಳು ನಡೆದಿವೆ.

ಹಣದುಬ್ಬರ ನಿಯಂತ್ರಿಸಲು ಪಾಕ್​ ಯೋಜನೆ: ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ, ಗಗನಕ್ಕೇರುತ್ತಿರುವ ಹಣದುಬ್ಬರ ಮಟ್ಟಕ್ಕೆ ಕಡಿವಾಣ ಹಾಕಲು ವಿಶೇಷವಾಗಿ ಪಂಜಾಬ್ ಪ್ರಾಂತ್ಯದ ಬಡವರಿಗೆ ಉಚಿತ ಗೋಧಿ ಹಿಟ್ಟು ವಿತರಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಅಪಾರ ಜನಸಂದಣಿಯಿಂದಾಗಿ ಕಳೆದ ಕೆಲವು ದಿನಗಳಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಪೊಲೀಸರಿಂದ ಲಾಠಿ ಚಾರ್ಜ್: ಉಚಿತ ಹಿಟ್ಟು ವಿತರಣೆಗಾಗಿ ಸ್ಥಾಪಿಸಲಾಗಿರುವ ಕೇಂದ್ರಗಳಲ್ಲಿ ಜನರ ನೂಕುನುಗ್ಗಲು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಕಾಲ್ತುಳಿತದಂಥ ಘಟನೆಗಳು ಸಂಭವಿಸಿವೆ. ಅಲ್ಲದೇ ಮುಜಾಫರ್‌ಘರ್ ಮತ್ತು ರಹೀಮ್ ಯಾರ್ ಖಾನ್ ನಗರಗಳಲ್ಲಿ ಜನರು ಹಿಟ್ಟು ಸಾಗಿಸುತ್ತಿದ್ದ ಟ್ರಕ್‌ಗಳನ್ನು ಜನರು ದರೋಡೆ ಮಾಡಲು ಪ್ರಯತ್ನಿಸಿದ್ದಾರೆ. ಇದಾದ ನಂತರ ಭದ್ರತಾ ಪಡೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಉಚಿತ ಹಿಟ್ಟು ಪಡೆಯಲು ಉದ್ದನೆಯ ಸರತಿಯಲ್ಲಿ ಕಾಯುತ್ತಿರುವ ನಾಗರಿಕರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಜನರು ದೂರಿದ್ದಾರೆ.

ಹಂಗಾಮಿ ಮುಖ್ಯಮಂತ್ರಿ ಘೋಷಣೆ: ಪಂಜಾಬ್‌ನ ಉಸ್ತುವಾರಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಬುಧವಾರ ನಾಗರಿಕರ ಅನುಕೂಲತೆಗಾಗಿ ಪ್ರಾಂತ್ಯದಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಉಚಿತ ಹಿಟ್ಟಿನ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಂತೀಯ ಸಚಿವರು ಹಾಗೂ ಕಾರ್ಯದರ್ಶಿಗಳು ಮುಂದಿನ ಮೂರು ದಿನಗಳ ಕಾಲ ನಿಯೋಜಿತ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆಯೂ ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ಅವರು ಹಿಟ್ಟಿನ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಹಿಟ್ಟು ವಿತರಣಾ ಕೇಂದ್ರಗಳಿಗೆ ಪ್ರಧಾನಿ ಭೇಟಿ: ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರು ಉಚಿತ ಹಿಟ್ಟು ವಿತರಣಾ ಕೇಂದ್ರಗಳಲ್ಲಿನ ಅಸಮರ್ಪಕ ನಿರ್ವಹಣೆಯ ಬಗ್ಗೆ ಗಮನ ಹರಿಸಿದ್ದಾರೆ. ಹೀಗಾಗಿ, ಈ ಕೇಂದ್ರಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಇಲ್ಲಿ ವಿತರಿಸಲಾಗುತ್ತಿರುವ ಹಿಟ್ಟಿನ ಚೀಲಗಳ ಗುಣಮಟ್ಟ ಹಾಗೂ ತೂಕ ಪರಿಶೀಲಿಸುವ ಜತೆಗೆ ಅವರ ಸಮಸ್ಯೆಗಳ ಬಗ್ಗೆ ಅವರು ಜನರಿಂದ ವಿವರ ಪಡೆದುಕೊಳ್ಳುತ್ತಿದ್ದಾರೆ.

ಇಮ್ರಾನ್ ಖಾನ್ ಪಕ್ಷದ ಟೀಕೆ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ಜನರ ಸಾವು ಮತ್ತು ಸರ್ಕಾರದ ಯೋಜನೆಯನ್ನು ಖಂಡಿಸಿದೆ. ಅಮಾಯಕರ ಸಾವಿಗೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಂಜಾಬ್ ಉಸ್ತುವಾರಿ ಮುಖ್ಯಮಂತ್ರಿ ನಖ್ವಿ ಹೊಣೆಗಾರರಾಗಿದ್ದಾರೆ. ಇದೊಂದು ‘ಕಳ್ಳರ ಸರ್ಕಾರ’. ಜನಜೀವನವನ್ನು ದುಸ್ತರಗೊಳಿಸಿದೆ. ಮೂಟೆ ಹಿಟ್ಟು ಸಂಗ್ರಹಿಸಲು ಜನರು ಪರದಾಡುವಂತಾಗಿದೆ ಎಂದು ಪಕ್ಷ ಆರೋಪಿಸಿದೆ.

ಇದನ್ನೂ ಓದಿ: ಭಯೋತ್ಪಾದನೆಯಿಂದ ಅಂತಾರಾಷ್ಟ್ರೀಯ ಭದ್ರತೆಗೆ ಅಪಾಯ: ಅಜಿತ್ ದೋವಲ್

Last Updated : Mar 30, 2023, 9:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.