ETV Bharat / international

ಸಂಪುಟ ಸದಸ್ಯರಿದ್ದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟ: 25 ಮಂದಿ ಬಲಿ!

ನೂತನವಾಗಿ ರಚನೆಯಾದ ಯೆಮೆನ್ ಸರ್ಕಾರದ ಸಂಪುಟದ ಸದಸ್ಯರಿದ್ದ ವಿಮಾನ ಲ್ಯಾಂಡ್​ ಆಗುತ್ತಿದ್ದಂತೆಯೇ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟಗೊಂಡಿರುವ ಘಟನೆ ಸನಾದಲ್ಲಿ ನಡೆದಿದೆ.

author img

By

Published : Dec 31, 2020, 8:38 AM IST

Blast at Aden airport kills 25, wounds 110
ಯೆಮೆನ್​ನಲ್ಲಿ ಬಾಂಬ್​ ಸ್ಫೋಟ

ಸನಾ (ಯೆಮೆನ್): ಇಲ್ಲಿನ ಅಡೆನ್‌ ವಿಮಾನ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಗೊಂಡಿದ್ದು, 25 ಜನರು ಮೃತಪಟ್ಟಿದ್ದರೆ. ಈ ಸ್ಫೋಟದಲ್ಲಿ 110 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೂತನವಾಗಿ ರಚನೆಯಾದ ಸರ್ಕಾರದ ಸಂಪುಟದ ಸದಸ್ಯರಿದ್ದ ವಿಮಾನವು ಲ್ಯಾಂಡ್​ ಆಗುತ್ತಿದ್ದಂತೆಯೇ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟಗೊಂಡಿದೆ. ಸರ್ಕಾರಿ ವಿಮಾನದಲ್ಲಿದ್ದ ಸಚಿವರು ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಇನ್ನು ಈ ಸ್ಫೋಟದಲ್ಲಿ 110 ಜನರು ಗಾಯಗೊಂಡಿದ್ದಾರೆ. ರಕ್ಷಣ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈ ಸಿಲಿಂಡರ್ ಸ್ಫೋಟ ಪ್ರಕರಣ: 10ಕ್ಕೆ ತಲುಪಿದ ಮೃತರ ಸಂಖ್ಯೆ

ಅಲ್ಲದೇ ಸಚಿವರನ್ನು ಸ್ಥಳದಿಂದ ಶಿಫ್ಟ್​ ಮಾಡುತ್ತಿದ್ದಂತೆಯೇ ನಗರದಲ್ಲಿದ್ದ ಅರಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಸೇನಾ ಹಾಗೂ ಭದ್ರತಾ ಪಡೆ ಅರಮನೆ ಪ್ರದೇಶವನ್ನು ಸೀಲ್​ಡೌನ್​ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಘಟನೆಯನ್ನು ಖಂಡಿಸಿರುವ ಯೆಮೆನ್ ಪ್ರಧಾನಿ ಮಾಯೀನ್ ಅಬ್ದುಲ್ಮಾಲಿಕ್ ಸಯೀದ್, ಇದೊಂದು ಹೇಡಿತನದ ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.