ETV Bharat / international

ಆಸ್ಟ್ರೇಲಿಯಾ ಕಾಡ್ಗಿಚ್ಚು: ತನ್ನ ಬೆತ್ತಲೆ ಫೊಟೋ ಮಾರಿ ಕೋಟಿ ಕೋಟಿ ಸಂಗ್ರಹಿಸಿ ಕೊಟ್ಟ ಅಮೆರಿಕದ ಯುವತಿ!

ಅಮೆರಿಕದ ಯುವತಿಯೊಬ್ಬಳು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಬರಿ ಎರಡೇ ದಿನದಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ಮಾರಾಟ ಮಾಡಿ ಬರೋಬ್ಬರಿ 5 ಕೋಟಿ (700 ಸಾವಿರ ಡಾಲರ್​) ರೂ ಹಣ ಸಂಗ್ರಹಿಸಿದ್ದಾಳೆ!

author img

By

Published : Jan 8, 2020, 5:42 PM IST

US girl sells her nude photos to raise $700k for Australia fires
ಅಮೆರಿಕಾದ ಕೇಲೆನ್ ವಾರ್ಡ್

ಹೈದರಾಬಾದ್​: ಅಮೆರಿಕದ ಯುವತಿಯೊಬ್ಬಳು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಬರಿ ಎರಡೇ ದಿನದಲ್ಲಿ ಇನ್​​ಸ್ಟಾಗ್ರಾಂನಲ್ಲಿ ತನ್ನ ಬೆತ್ತಲೆ ಫೋಟೋ ಮಾರಾಟ ಮಾಡಿ 5 ಕೋಟಿ (700 ಸಾವಿರ ಡಾಲರ್​) ರೂ ದುಡ್ಡು ಸಂಗ್ರಹಿಸಿದ್ದಾಳೆ.

ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರುದ್ರನರ್ತನಕ್ಕೆ ಸುಮಾರು 5 ಮಿಲಿಯನ್​ ಹೆಕ್ಟೇರ್​​​ ಅರಣ್ಯ ಪ್ರದೇಶಕ್ಕೂ ಹೆಚ್ಚು ಪ್ರದೇಶ ಸುಟ್ಟು ಭಸ್ಮವಾಗಿದೆ. ಸಾವಿರಾರು ಮನೆಗಳು ಬಲಿಯಾಗಿವೆ. ಅಷ್ಟು ಮಾತ್ರವಲ್ಲ, ಕೋಟಿಗಟ್ಟಲೆ ಪ್ರಾಣಿ-ಪಕ್ಷಿಗಳು ಜೀವ ಕಳೆದುಕೊಂಡಿವೆ.

ಸದ್ಯ ಇಲ್ಲಿನ ಅರಣ್ಯ ಸಂರಕ್ಷಣೆಗಾಗಿ ಇಡೀ ವಿಶ್ವವೇ ದೇಣಿಗೆ ಸಂಗ್ರಹಿಸುತ್ತಿದೆ. ಅದರಂತೆ ಅಗ್ನಿಯ ಕೆನ್ನಾಲಿಗೆಗೆ ಬೆಂದು ಹೋಗುತ್ತಿರುವ ಆಸ್ಟ್ರೇಲಿಯಾಕ್ಕಾಗಿ ಅಮೆರಿಕದ ಕೆಲೆನ್ ವಾರ್ಡ್(20) ಎಂಬ ಯುವತಿ ತನ್ನ ನಗ್ನ ಚಿತ್ರಗಳನ್ನು ಮಾರಾಟ ಮಾಡಿ ಈ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾಳೆ.

  • An estimated $700K has been raised for the Australian Bush Fires in response to my tweet....
    is this real life?

    — THE NAKED PHILANTHROPIST (@lilearthangelk) January 6, 2020 " class="align-text-top noRightClick twitterSection" data=" ">

ಇನ್‍ಸ್ಟಾಗ್ರಾಮ್​​ ಮತ್ತು ಟ್ವಿಟರ್​​ನಲ್ಲಿ ‘ದಿ ನೆಕ್ಡ್ ಫಿಲ್ಯಾಂಥ್ರೋಪಿಸ್ಟ್’ ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಈಕೆ, ತನ್ನ ನಗ್ನ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದಳು. ನನಗೆ 10 ಡಾಲರ್​ ಕಳುಹಿಸಿ. ನಾನು ನಿಮಗೆ ನನ್ನ ನಗ್ನ ಚಿತ್ರವನ್ನು ಕಳುಹಿಸುತ್ತೇನೆ. ಈ ಹಣ ನನಗಾಗಿ ಅಲ್ಲ. ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಸಂಗ್ರಹಿಸುತ್ತಿದ್ದೇನೆ. ಜನವರಿ 4ರಂದು ಯುವತಿ ತನ್ನ ಇನ್​ಸ್ಟಾದಲ್ಲಿ ಈ ಕುರಿತು ಹಂಚಿಕೊಂಡಿದ್ದಾಳೆ. ಪೋಸ್ಟ್​ ನೋಡಿದ ಅನೇಕರು ಆಕೆಯ ಬೆತ್ತಲೆ ಚಿತ್ರಗಳನ್ನು ಖರೀದಿಸಿದ್ದಾರೆ. ಈ ಮೂಲಕ ಎರಡೇ ದಿನದಲ್ಲಿ ಈಕೆ ಬರೋಬ್ಬರಿ 5 ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದಾಳೆ.

US girl sells her nude photos to raise $700k for Australia fires
ಟ್ವಿಟರ್​ ಪೋಸ್ಟ್​​​

ಹಣ ಸಂಗ್ರಹವಾದ ಬಳಿಕ ಸ್ವತಃ ಕೆಲೆನ್ ತನ್ನ ಇನ್‍ಸ್ಟಾಗ್ರಾಮ್​​ ಮತ್ತು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಳು. ಪೋಸ್ಟ್ ನೋಡಿದ ಹಲವಾರು ಮಂದಿ ಕಾಡ್ಗಿಚ್ಚಿಗೆ ಹಣ ನೀಡಿದ್ದಾರೆ. 700 ಸಾವಿರ ಡಾಲರ್ (5 ಕೋಟಿ ರೂಪಾಯಿ) ಸಂಗ್ರಹವಾಗಿದೆ ಎಂದು ಬರೆದುಕೊಂಡಿದ್ದಾಳೆ.

  • My IG got deactivated, my family disowned me, and the guy I like won’t talk to me all because of that tweet. But fuck it, save the koalas.

    — THE NAKED PHILANTHROPIST (@lilearthangelk) January 5, 2020 " class="align-text-top noRightClick twitterSection" data=" ">

ಆದರೆ, ದೇಣಿಗೆ ಹೆಸರಿನಲ್ಲಿ ಈ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಪರಿಣಾಮ ಇನ್‍ಸ್ಟಾಗ್ರಾಮ್ ಕಂಪನಿ ಆಕೆಯ ಖಾತೆಯನ್ನು ಬ್ಲಾಕ್ ಮಾಡಿತ್ತು. ಆದರೂ ಅರಣ್ಯ ಸಂರಕ್ಷಣೆಗಾಗಿ ಕೆಲೆನ್‌ ಮತ್ತೊಂದು ಖಾತೆ ತೆರೆದಳು. ಅದನ್ನೂ ಕಂಪನಿ ಬ್ಲಾಕ್​ ಮಾಡಿದೆ.

ಜನರಿಂದ ತಾನು ಸಂಗ್ರಹಿಸಿದ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ. ಸಂಗ್ರಹವಾದ ಹಣವನ್ನು ತಮ್ಮ ಹತ್ತಿರದ ಚಾರಿಟಿ ಅಥವಾ ಎನ್‍ಜಿಓಗೆ ನೀಡಲಾಗಿದೆ. ಇದು ನಿಜ ಜೀವನ. ನನಗಾಗಿ ಹಣ ಸಂಗ್ರಹಿಸಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.