ETV Bharat / international

ಈ ಬಾರಿ ಸೌದಿ ಅರೇಬಿಯಾ ನಿವಾಸಿಗಳಿಗೆ ಮಾತ್ರ ಹಜ್‌ ಯಾತ್ರೆಗೆ ಅವಕಾಶ - ಸೌದಿ ಅರೇಬಿಯಾದ ಹಜ್ ಯಾತ್ರೆ

ಕೋವಿಡ್ ಸಾಂಕ್ರಾಮಿಕ ವಿಶ್ವದೆಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಎಲ್ಲಾ ರಾಷ್ಟ್ರಗಳು ಕೊರೊನಾ ಸಾಂಕ್ರಾಮಿಕದಿಂದ ನಲುಗಿಹೋಗಿವೆ. ವಿವಿಧ ಧರ್ಮೀಯರ ಧಾರ್ಮಿಕ ಆಚರಣೆಗಳ ಮೇಲೆಯೂ ಮಾರಕ ರೋಗ ದುಷ್ಪರಿಣಾಮ ಬೀರಿದೆ.

Saudi to limit upcoming Hajj season to domestic pilgrims
ಸ್ವದೇಶಿಯರಿಗೆ ಮಾತ್ರ ಹಜ್ ಯಾತ್ರೆ: ಮತ್ತೊಂದಿಷ್ಟು ಷರತ್ತುಗಳು...
author img

By

Published : Jun 13, 2021, 12:05 PM IST

ರಿಯಾದ್(ಸೌದಿ ಅರೇಬಿಯಾ): ಕೋವಿಡ್‌-19 ಕಾರಣದಿಂದಾಗಿ ಕೇವಲ ತನ್ನ ದೇಶದ ಜನರಿಗೆ ಹಜ್ ಯಾತ್ರೆಗೆ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ. ಈ ಬಾರಿ ಗರಿಷ್ಠ 60 ಸಾವಿರ ಮಂದಿಗೆ ಮಾತ್ರ ಧಾರ್ಮಿಕ ಯಾತ್ರೆಯನ್ನು ಸೀಮಿತಗೊಳಿಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಹಜ್ ಯಾತ್ರೆ ಮಾಡಲು ಉದ್ದೇಶಿಸುವ ದೇಶದೊಳಗಿನ ನಾಗರಿಕರು ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕೊರೊನಾ ವೈರಸ್ ಮತ್ತು ರೂಪಾಂತರಿ ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ.

ಹಜ್‌ ಯಾತ್ರೆಗೆ ಸೌದಿ ಸರ್ಕಾರದ ನಿಯಮಗಳು:

1. ಈ ವರ್ಷ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾದಿಂದ ಚೇತರಿಸಿಕೊಂಡ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರದ 18ರಿಂದ 65 ವರ್ಷದೊಳಗಿನ ವ್ಯಕ್ತಿಗಳಿಗೆ ಮಾತ್ರ ನೋಂದಣಿಗೆ ಅವಕಾಶ.

2. ಅಕ್ಕಪಕ್ಕದ ಮತ್ತು ಸಾಗರೋತ್ತರ ದೇಶಗಳ ಯಾತ್ರಿಗಳಿಗೂ ಹಜ್ ಯಾತ್ರೆಗೆ ಅವಕಾಶವಿಲ್ಲ.

3. ಬೇರೆ ಇಸ್ಲಾಮಿಕ್ ರಾಷ್ಟ್ರಗಳ ಬೆಂಬಲದೊಂದಿಗೆ ಯಾತ್ರಿಕರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಈ ನಿರ್ಧಾರ.

ಇದನ್ನೂ ಓದಿ: Viral Video: ಪ್ರಸಾದದೊಳಗೆ ಉಗಿದು ಭಕ್ತರಿಗೆ ಹಂಚುತ್ತಿರುವ ಬಾಬಾ

ಕಳೆದ 10 ವರ್ಷಗಳಲ್ಲಿ 150 ದಶಲಕ್ಷಕ್ಕೂ ಹೆಚ್ಚು ಮಂದಿ ಹಜ್ ಯಾತ್ರೆ ಕೈಗೊಂಡಿರುವ ಮಾಹಿತಿಯಿದ್ದು, ಈ ವರ್ಷ ಕೇವಲ 60 ಸಾವಿರ ಮಂದಿಗೆ ಸೀಮಿತಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.