ಕತಾರ್: ಎಜುಕೇಶನ್ ಸಿಟಿಯಲ್ಲಿರುವ ಫಿಫಾ ವಿಶ್ವಕಪ್ ಕತಾರ್ 2022™ ಕ್ರೀಡಾಂಗಣವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಕತಾರ್ ಫೌಂಡೇಶನ್ ಸುಪ್ರೀಂ ಸಮಿತಿ ಪ್ರಕಟಿಸಿದೆ.
2017ರಲ್ಲಿ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣ ಯಶಸ್ವಿಯಾಗಿ ಪುನರಾಭಿವೃದ್ಧಿಗೊಂಡಿತ್ತು. 2019ರಲ್ಲಿ ಅಲ್ ಜನೌಬ್ ಕ್ರೀಡಾಂಗಣವೂ ಉದ್ಘಾಟನೆಗೊಂಡಿತ್ತು.
ಇದೀಗ ಕತಾರ್ 2022 ಕ್ರೀಡಾಂಗಣ ಪೂರ್ಣಗೊಳ್ಳುವ ಮೂಲಕ ಮೂರನೇ ಕ್ರೀಡಾಂಗಣ ಸಿದ್ಧವಾಗಿದೆ.
ಕೊರೊನಾ ವೈರಸ್ ನಡುವೆಯೂ ಕಾರ್ಮಿಕರ ಕೊಡುಗೆಯಿಂದ ಜೂ. 15ರಂದು ಕ್ರೀಡಾಂಗಣದ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.