ಅಮ್ಮಾನ್: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಂಣಾಂತಿಕ ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕಲು ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್ನಿಂದ ಅಮ್ಮಾನ್ ದೇಶಕ್ಕೆ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಇಲ್ಲಿನ ಜೋರ್ಡಾನ್ ಆರೋಗ್ಯ ಸಚಿವ ಸಾದ್ ಜಬೇರ್ ಹೇಳಿದ್ದಾರೆ.
ಬರುವ ಸೋಮವಾರದಿಂದ ರಾಜಧಾನಿ ಜೋರ್ಡಾನ್ನಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ವೈರಸ್ ಹರಡುವಿಕೆ ತಡೆಯಲು ಪರಿಣಾಮಕಾರಿಯಾದ ಪ್ರಯತ್ನಗಳಿಗೆ ಮುಂದಾಗುತ್ತೇವೆ. ಪೂರ್ಣ ಪ್ರಮಾಣದಲ್ಲಿ ದೇಶಕ್ಕೆ ಬರುವ ಮತ್ತು ಇಲ್ಲಿಂದ ಹೋಗುವ ಪ್ರಯಾಣಿಕರಿಗೆ ನಿಷೇಧ ಹೇರುತ್ತೇವೆ ಎಂದು ಸಾದ್ ಜಬೇರ್ ತಿಳಿಸಿದ್ದಾರೆ.
ಈಗಾಗಲೇ ಜೋರ್ಡಾನ್ನಿಂದ ಇಟಲಿಗೆ ಹಿಂದಿರುಗಿದ ಪ್ರಯಾಣಿಕರೊಬ್ಬರಲ್ಲಿ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪರಿಣಾಮ ದಕ್ಷಿಣಾ ಕೊರಿಯಾ, ಇರಾನ್, ಇಟಲಿ ಪ್ರಯಾಣಿಕರಿಗೂ ನಿರ್ಬಂಧ ಹೇರಲಾಗಿದೆ ಎಂದರು.
ವೈರಸ್ನಿಂದಾಗಿ ಕೆಲವು ದೇಶಗಳು ನಿಷೇಧದ ವ್ಯಾಪ್ತಿಗೆ ಒಳಪಟ್ಟಿವೆ. ಹೀಗಾಗಿ ಅಂತಹ ದೇಶಗಳಿಗೆ ಜೋರ್ಡಾನಿಯರ (ಅಮ್ಮಾನ್ ದೇಶದವರು) ಭೇಟಿಗೆ ಅನುಮತಿ ನೀಡುವುದಿಲ್ಲ. ಈ ದೇಶಗಳ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ ಎಂದರು.
ಅಷ್ಟೇ ಅಲ್ಲದೆ, 700 ಜನರನ್ನು ಹೊತ್ತು ಇಟಲಿಯಿಂದ (ಕೆಂಪು ಸಮುದ್ರ ಪ್ರವಾಸಿ ರೆಸಾರ್ಟ್) ಅಕಾಬಾಗೆ ಬರುತ್ತಿರುವ ಹಡಗಿನ ಪ್ರವೇಶಕ್ಕೂ ನಿಷೇಧಿಸಿದ್ದೇವೆ. ನೆರೆಯ ಲೆಬನಾನ್‌ಗೆ ಬರುವ ಮತ್ತು ಹೊರಡುವ ಪ್ರಯಾಣಿಕರನ್ನೂ ನಿರ್ಬಂಧಿಸಲಾಗಿದೆ ಎಂದು ಸಚಿವರು ಹೇಳಿದರು.