ETV Bharat / international

ಹಮಾಸ್‌ ಬಂಡುಕೋರರ ಮೇಲೆ ಮುಂದುವರೆದ ಇಸ್ರೇಲ್​ ದಾಳಿ: ಗಾಜಾದಲ್ಲಿ ಅನೇಕ ಕಟ್ಟಡಗಳು ನೆಲಸಮ

ಇಸ್ರೇಲ್​- ಪ್ಯಾಲೆಸ್ತೀನ್‌​ ನಡುವಿನ ಸಂಘರ್ಷ ಮುಂದುವರೆದಿದೆ. ಇಸ್ರೇಲ್ ದಾಳಿಯಿಂದ ಗಾಜಾದ ಅನೇಕ ಕಟ್ಟಡಗಳು ನೆಲಕಚ್ಚಿವೆ.

Gaza City
ನೆಲಕಚ್ಚಿದ ಗಾಜಾದ ಬೃಹತ್​ ಕಟ್ಟಡ
author img

By

Published : May 17, 2021, 11:37 AM IST

ಗಾಜಾನಗರ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ವಿರುದ್ಧ ನಾಲ್ಕನೇ ಸಮರ ಸಾರಿದ ಕೆಲವೇ ಗಂಟೆಗಳ ಬಳಿಕ, ಗಾಜಾ ನಗರದ ಹಲವು ಸ್ಥಳಗಳಲ್ಲಿ ಇಸ್ರೇಲಿ ಯುದ್ಧ ವಿಮಾನಗಳು ದೊಡ್ಡ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿವೆ.

ಸುಮಾರು 10 ನಿಮಿಷಗಳ ಕಾಲ ನಡೆದ ಸರಣಿ ದಾಳಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ಕಳೆದ 24 ಗಂಟೆಯಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 42 ಪಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ನಡೆಸಿದ ದಾಳಿಯಲ್ಲಿ ಇಸ್ರೇಲ್‌​ ಮೂರು ಬೃಹತ್​ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಗಾಜಾದಾದ್ಯಂತ 9 ಹಮಾಸ್ ಕಮಾಂಡರ್​ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ವೈಮಾನಿಕ ದಾಳಿಯು ಏಕೈಕ ವಿದ್ಯುತ್ ಸ್ಥಾವರವಾದ ದಕ್ಷಿಣ ಗಾಜಾ ನಗರದ ದೊಡ್ಡ ಭಾಗಗಳಿಗೆ ವಿದ್ಯುತ್ ಪೂರೈಸುವ ಮಾರ್ಗವನ್ನು ಹಾನಿಗೊಳಿಸಿದೆ ಎಂದು ವಿದ್ಯುತ್ ವಿತರಣಾ ಕಂಪನಿ ತಿಳಿಸಿದೆ.

ಈ ಬಗ್ಗೆ ನೆತನ್ಯಾಹು ದೂರದರ್ಶನದಲ್ಲಿ ಮಾತನಾಡಿದ್ದು, ಹಮಾಸ್ ಬಂಡುಕೋರರ ವಿರುದ್ಧ ಇಸ್ರೇಲ್ ಸಮರ ಸಾರಿದ್ದು, ಇದಕ್ಕೆ ಅವರು ಭಾರೀ ಬೆಲೆ ತೆರುತ್ತಾರೆ ಎಂದು ಎಚ್ಚರಿಸಿದ್ದಾರೆ.

ಭಾನುವಾರ ಮುಂಜಾನೆ ಇಸ್ರೇಲ್​ ನಡೆಸಿದ ವಾಯುದಾಳಿಯಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿದೆ. ಕಳೆದ ವಾರದಲ್ಲಿ ಇಸ್ರೇಲ್​ ಮತ್ತು ಹಮಾಸ್​ ನಡುವೆ ಪದೇ ಪದೇ ವಾಯುದಾಳಿ ಉಲ್ಬಣಗೊಳ್ಳುತ್ತಿವೆ. ಇಸ್ರೇಲ್ ಮತ್ತು ಹಮಾಸ್​ನಲ್ಲಿ 2014ರ ಯುದ್ಧದ ನಂತರ 2 ಮಿಲಿಯನ್ ಪ್ಯಾಲೆಸ್ತೀನ್‌ ಜನರು ನೆಲೆಸಿರುವ ಭೂಪ್ರದೇಶದಲ್ಲಿ ಅತ್ಯಂತ ಕೆಟ್ಟ ಹೋರಾಟ ಇದಾಗಿದೆ.

ಇನ್ನು ಕುಸಿದ ಕಟ್ಟಡಗಳ ಅಡಿಯಲ್ಲಿ ಕೆಲವರು ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಈಗಾಗಲೇ 16 ಮಹಿಳೆಯರು ಮತ್ತು 10 ಮಕ್ಕಳು ಸೇರಿ ಅನೇಕರು ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಉಭಯ ಯುದ್ಧಗಳಿಂದ ಅಲ್ಲಿನ ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಿಗೆ ತೊಂದರೆ ಉಂಟಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಶಿಫಾ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಮುಖ್ಯಸ್ಥ ಮತ್ತು ಆಸ್ಪತ್ರೆಯ ಕೊರೊನಾ ವೈರಸ್ ನಿರ್ವಹಣಾ ಸಮಿತಿಯ ಹಿರಿಯ ಸದಸ್ಯ ಡಾ. ಅಮಾನ್ ಅಬು ಅಲ್- ಉಫ್ ಕೂಡ ಸೇರಿದ್ದಾರೆ.

ಇಸ್ರೇಲ್​ನ ವೈಮಾನಿಕ ದಾಳಿಗಳು ಗಾಜಾ ನಗರದ ಹಲವಾರು ಎತ್ತರದ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಕಟ್ಟಡದ ಒಳಗೆ ಹಮಾಸ್ ಮಿಲಿಟರಿ ಗುಪ್ತಚರ ಕಾರ್ಯಾಚರಣೆ ನಡೆಸುತ್ತಿದೆ ಎಂದು ನೆತನ್ಯಾಹು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.