ETV Bharat / international

ಲಾಡ್‌ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್‌ ಪ್ರಧಾನಿ ನೆತನ್ಯಾಹು - ಇಸ್ರೇಲ್​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಉನ್ನತ ಮಟ್ಟದ ಭದ್ರತೆ ಮತ್ತು ಕಾನೂನು ಅಧಿಕಾರಿಗಳ ನಡುವಿನ ಸಭೆಯ ನಂತರ ಪ್ರಧಾನಿ ನೆತನ್ಯಾಹು ಲಾಡ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಒಂದು ವಾರದಿಂದ ನಡೆಯುತ್ತಿರುವ ಸಂಘರ್ಷ ಈಗ ಯುದ್ಧದ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ.

Israel: Netanyahu declares state of emergency
ಇಸ್ರೇಲ್‌-ಪ್ಯಾಲೆಸ್ತೇನ್‌ ನಡುವಿನ ಸಂಘರ್ಷ
author img

By

Published : May 12, 2021, 6:53 AM IST

ಟೆಲ್ ಅವೀವ್: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಅರಬ್-ಯಹೂದಿ ನಗರದಲ್ಲಿ ತೀವ್ರ ಗಲಭೆಗಳು ಭುಗಿಲೆದ್ದಿದೆ. ಪರಿಣಾಮ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲಾಡ್‌ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

  • Prime Minister Netanyahu agreed on declaring a special emergency situation in Lod; Public Security Minister Amir Ohana announced that he would exercise his authority on the matter immediately.

    — PM of Israel (@IsraeliPM) May 11, 2021 " class="align-text-top noRightClick twitterSection" data=" ">

ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್, ಲಾಡ್​ನಲ್ಲಿ ಮೂರು ಧಾರ್ಮಿಕ ಸ್ಥಳಗಳು ಮತ್ತು ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಇಸ್ರೇಲಿ ಸೇನೆ - ಭಯೋತ್ಪಾದಕರ ನಡುವೆ ವೈಮಾನಿಕ ದಾಳಿ: 12 ಮಂದಿ ನಾಗರಿಕರು ಸಾವು

ನಗರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ಪ್ರಧಾನಮಂತ್ರಿಯನ್ನು ಕೇಳಿಕೊಂಡಿದ್ದೇನೆ ಮತ್ತು ಅಸ್ತವ್ಯಸ್ತವಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಮಿಲಿಟರಿಯನ್ನು ನಿಯೋಜಿಸುವಂತೆ ಕರೆ ನೀಡಿದ್ದೇನೆ ಎಂದು ಲಾಡ್ ಮೇಯರ್ ಯೇರ್ ರೆವಿವೊ ಹೇಳಿದ್ದಾರೆ.

ಇದನ್ನೂ ಓದಿ: ಗಾಜಾ ಘರ್ಷಣೆ: ರಾಕೆಟ್​ ದಾಳಿಗೆ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ಸಾವು!

ಮಧ್ಯಪ್ರಾಚ್ಯದ ವಿಶ್ವಸಂಸ್ಥೆಯ ವಿಶೇಷ ಸಂಯೋಜಕ ಟಾರ್ ವೆನ್ನೆಸ್ಲ್ಯಾಂಡ್ ಹಿಂಸಾಚಾರವನ್ನು ತಡೆಯಲು ಎರಡೂ ಕಡೆಯವರನ್ನು ಒತ್ತಾಯಿಸಿದ್ದಾರೆ. ಪರಿಸ್ಥಿತಿ "ಪೂರ್ಣ ಪ್ರಮಾಣದ ಯುದ್ಧ" ದ ಕಡೆಗೆ ಉಲ್ಬಣಗೊಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.