ನೈರೋಬಿ(ಕೀನ್ಯಾ): ತರಬೇತಿಗೋಸ್ಕರ ತೆರಳುತ್ತಿದ್ದ ಹೆಲಿಕಾಪ್ಟರ್ವೊಂದು ಪತನಗೊಂಡಿರುವ ಪರಿಣಾಮ 17 ಸೈನಿಕರು ಸಾವನ್ನಪ್ಪಿರುವ ಘಟನೆ ಕೀನ್ಯಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಕೀನ್ಯಾದ ರಾಜಧಾನಿ ನೈರೋಬಿಯ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್ನಲ್ಲಿ 23 ಸೈನಿಕರು ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳದಿಂದ ಈಗಾಗಲೇ ಆರು ಮಂದಿಯ ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಪಘಾತದ ವೇಳೆ ರಕ್ಷಣೆ ಮಾಡಿರುವ ಕೆಲ ಸೈನಿಕರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕೀನ್ಯಾದ ಮಿಲಿಟರಿ ಕೂಡ ಇದರ ಬಗ್ಗೆ ಖಚಿತ ಮಾಹಿತಿ ನೀಡಿದೆ. ಅಪಘಾತದ ಕಾರಣದ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದ್ದು, ಈಗಾಗಲೇ ತನಿಖೆಗೆ ಆದೇಶ ನೀಡಲಾಗಿದೆ.