ಟೆಹರಾನ್: ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ 'ಆರ್ಥಿಕ ಭಯೋತ್ಪಾದನೆ'ಯನ್ನು ಐರೋಪ್ಯ ಒಕ್ಕೂಟ ವಿರೋಧಿಸಬೇಕು ಹಾಗೂ 2015ರ ಪರಮಾಣು ಒಪ್ಪಂದದಡಿಯ ಜವಾಬ್ದಾರಿಯನ್ನು ಪೂರ್ಣಗೊಳಿಸಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಹೇಳಿದ್ದಾರೆ.
ಜರ್ಮನ್ ವಿದೇಶಾಂಗ ಸಚಿವ ಹೀಕೊ ಮಾಸ್ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಅಣು ಒಪ್ಪಂದಕ್ಕೆ ಸಂಬಂಧಿಸಿದ ಜಂಟಿ ಸಮಗ್ರ ಕ್ರಿಯಾ ಯೋಜನೆ ( ಜಾಯಿಂಟ್ ಕಾಂಪ್ರಿಹೆನ್ಸಿವ್ ಪ್ಲಾನ್ಸ್ ಆಫ್ ಆ್ಯಕ್ಷನ್: ಜೆಸಿಪಿಒಎ) ನಿಯಮದಿಂದ ಅಮೆರಿಕದ ವಾಪಸಾತಿಯಲ್ಲಿ ಏನೂ ಇಲ್ಲ. ಆದರೆ, ದೇಶಗಳ ಹಾಗೂ ಪ್ರಾದೇಶಿಕ ಸ್ಥಿರತೆಯ ನಡುವಿನ ಪರಸ್ಪರರ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಯುರೋಪಿಯನ್ ಒಕ್ಕೂಟ ಹಾಗೂ ಇರಾನ್ ಜೆಸಿಪಿಒಎ ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿ ಪ್ರಯೋಜನ ಸಾಧಿಸಿದ್ದರೇ ಅದನ್ನು ಉಳಿಸಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕ ಪರಮಾಣು ಒಪ್ಪಂದದ ನಿಯಮ ಉಲ್ಲಂಘಿಸಿದೆ. ಅಷ್ಟೇ ಅಲ್ಲ ವಾಷಿಂಗ್ಟನ್ ಭಯೋತ್ಪಾದನಾ ಚಟುವಟಿಕೆಗಳನ್ನು ಆರಂಭಿಸಿದೆ. ಆದರೆ, ಈ ಬಗ್ಗೆ ಐರೋಪ್ಯ ಒಕ್ಕೂಟದಲ್ಲಿ ಜವಾಬ್ದಾರಿಯುತ ಪ್ರತಿಕ್ರಿಯೆಗಳು ಇಲ್ಲ. ಅಮೆರಿಕ ತನ್ನ ದಬ್ಬಾಳಿಕೆ ನಿರ್ಬಂಧನೆಗಳನ್ನು ಜಾರಿಗೊಳಿಸಿ ಆರ್ಥಿಕ ಭಯೋತ್ಪಾದನೆಯಡಿ ದೌರ್ಜನ್ಯ ನಡೆಸುತ್ತಿದೆ ಎಂದು ಅಸಮಾಧಾನ ತೋಡಿಕೊಂಡರು.
ಇರಾನ್ ಪರಮಾಣು ಬಾಂಬ್ಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂಬ ಅಮೆರಿಕ ವಾದ ತಳಿಹಾಕಿದ ರೌಹಾನಿ, ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಟೆಹರಾನ್ನ 15 ವರದಿಗಳಲ್ಲಿನ ಅನುಸರಣೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.