ಹುವಾ ಹಿನ್(ಥಾಯ್ಲೆಂಡ್): ಕಾಡಾನೆಯೊಂದು ಮನೆಯೊಳಗೆ ನುಗ್ಗಿ ಅಡುಗೆ ಮನೆಯ ಗೋಡೆ ಒಡೆದು ಹಾಕಿದ ಘಟನೆ ಥಾಯ್ಲೆಂಡ್ನ ಹುವಾ ಹಿನ್ನಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಆಹಾರ ಆರಿಸಿ ಬಂದ ಒಂಟಿ ಸಲಗ ಈ ರೀತಿಯಾಗಿ ನಡೆದುಕೊಂಡಿದೆ ಎಂಬ ಮಾತು ಕೇಳಿ ಬರುತ್ತಿವೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಥಾಯ್ಲೆಂಡ್ನ ಹುವಾ ಹಿನ್ ಜಿಲ್ಲೆಯ ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದಲ್ಲಿನ ಮನೆಯಲ್ಲಿ ಆನೆ ರಂಪಾಟ ನಡೆಸಿದೆ. ಅಡುಗೆ ಮನೆಯ ಗೋಡೆ ಸಂಪೂರ್ಣವಾಗಿ ಒಡೆದು ಹಾಕಿರುವ ಕಾಡಾನೆ, ತದನಂತರ ಸೊಂಡಿಲು ಒಳಗೆ ಹಾಕಿ ಅಲ್ಲಿನ ವಸ್ತು ಚೆಲ್ಲಾಪಿಲ್ಲಿ ಮಾಡಿದೆ. ಜತೆಗೆ ಆಹಾರಕ್ಕಾಗಿ ಹುಡುಕಾಟ ನಡೆಸಿದೆ ಎಂದು ತಿಳಿದು ಬಂದಿದೆ. ಮನೆಯ ಒಡತಿ ಅದರ ವಿಡಿಯೋ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಅದು ಎಲ್ಲೆಡೆ ವೈರಲ್ ಆಗ್ತಿದೆ.
ಇದನ್ನೂ ಓದಿರಿ: ಸಾವಿರಕ್ಕೂ ಹೆಚ್ಚು ಮಂದಿಯ ಬಲವಂತದ ಮತಾಂತರ: ಇಬ್ಬರ ಬಂಧಿಸಿದ ATS
ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಚೀನ್ದಲ್ಲಿ ಇಟ್ಟಿದ್ದ ತರಕಾರಿ ತಿದ್ದಿದೆ. ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಅದನ್ನ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಮನೆಯನ್ನ ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಥಾಯ್ಲೆಂಡ್ನಲ್ಲಿ ಹೆಚ್ಚಿನ ಆನೆಗಳಿರುವ ಕಾರಣ ಮೇಲಿಂದ ಮೇಲೆ ಆಹಾರ ಹುಡುಕಿಕೊಂಡು ನಗರಗಳತ್ತ ಲಗ್ಗೆ ಹಾಕುತ್ತವೆ ಎನ್ನಲಾಗಿದೆ.