ETV Bharat / international

ಎರಡು ತಿಂಗಳ ನಂತರ Iraqi Airport ಮೇಲೆ ಸ್ಫೋಟಕ ತುಂಬಿದ ಡ್ರೋನ್ ದಾಳಿ

ಸುಮಾರು 2 ತಿಂಗಳ ನಂತರ ಇರಾಕ್​ನ ಇರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಫೋಟಕ ತುಂಬಿದ ಡ್ರೋನ್​ಗಳಿಂದ ದಾಳಿ ನಡೆಸಲಾಗಿದೆ.

Drones target northern Iraqi airport after 2 month lull
ಎರಡು ತಿಂಗಳ ನಂತರ ಇರಾಕ್ ಏರ್​ಪೋರ್ಟ್ ಮೇಲೆ ಸ್ಫೋಟಕ ತುಂಬಿದ ಡ್ರೋನ್ ದಾಳಿ
author img

By

Published : Sep 12, 2021, 10:43 AM IST

ಬಾಗ್ದಾದ್(ಇರಾಕ್): ಸ್ಫೋಟಕಗಳನ್ನು ತುಂಬಿದ ಡ್ರೋನ್​ಗಳು ಉತ್ತರ ಇರಾಕ್‌ನಲ್ಲಿರುವ ಇರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದು, ಯಾವುದೇ ಸಾವು-ನೋವು, ನಷ್ಟ ಉಂಟಾಗಿಲ್ಲ ಎಂದು ಭದ್ರತಾ ಪಡೆಗಳು ಮತ್ತು ಅಧಿಕಾರಿಗಳು ಮಾಹಿತಿ ನೀಡಿವೆ.

ಅಮೆರಿಕ ನೇತೃತ್ವದ ಒಕ್ಕೂಟ ಪಡೆಗಳು ಇಲ್ಲಿದ್ದು, ಸ್ಫೋಟಕಗಳನ್ನು ಹೊತ್ತ ಎರಡು ಡ್ರೋನ್‌ಗಳು ಕುರ್ದಿಷ್ ಅರೆಸ್ವಾಯುತ್ತ ಪ್ರದೇಶದಲ್ಲಿದ್ದ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿವೆ ಎಂದು ಕುರ್ದಿಷ್​ನ ಭಯೋತ್ಪಾದನಾ ನಿಗ್ರಹ ದಳ ಮಾಹಿತಿ ನೀಡಿದೆ.

ದಾಳಿಯು ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದೆ. ಇದರಿಂದ ಯಾವುದೇ ವಿಮಾನಕ್ಕೂ ಹಾನಿಯಾಗಿಲ್ಲ. ಈಗಲೂ ವಿಮಾನ ನಿಲ್ದಾಣ ತೆರೆದಿದ್ದು, ಕುರ್ದಿಷ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯಾ ಲಾಕ್​ ಘಪುರಿ ತಿಳಿಸಿದ್ದಾರೆ.

ಇರಾಕ್‌ನಾದ್ಯಂತ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ರಾಕೆಟ್ ದಾಳಿ ನಡೆದು ಸುಮಾರು ಎರಡು ತಿಂಗಳಾಗಿತ್ತು. ಜುಲೈ 8ರಂದು, ಇರಾಕ್​ನ ರಾಜಧಾನಿ ಬಾಗ್ದಾದ್‌ನಲ್ಲಿ ರಾಕೆಟ್​ ದಾಳಿ ನಡೆದಿತ್ತು. ಈಗ ಎರಡು ತಿಂಗಳ ನಂತರ ಮತ್ತೊಂದು ದಾಳಿ ನಡೆದಿದೆ.

ಇರಾಕ್ ಮೇಲೆ ನಡೆಯುತ್ತಿರುವ ದಾಳಿಗೆ ಇರಾನ್ ನೇರ ಕಾರಣ ಎಂದು ಅಮೆರಿಕ ಆರೋಪಿಸಿದೆ. ಇತ್ತೀಚೆಗೆ ಉಗ್ರರು ಕತ್ಯುಷಾ ರಾಕೆಟ್‌ಗಳ ಬದಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಇರಾಕ್​ಗೆ ಮಿಲಿಟರಿ ತರಬೇತಿ ಮತ್ತು ಸಲಹೆ ನೀಡುವುದನ್ನು ಮುಂದುವರೆಸುವುದಾಗಿ ಅಮೆರಿಕ ಅಭಯ ನೀಡಿದೆ.

ಇದನ್ನೂ ಓದಿ: ಪ್ರಾದೇಶಿಕ ಮಿತ್ರನಾಗಿ ಭಾರತದ ಪಾತ್ರವು ಅಫ್ಘಾನಿಸ್ತಾನದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ : ಯುಎಸ್ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.