ಇಸ್ರೇಲ್: ಇಸ್ರೇಲ್ - ಪ್ಯಾಲೇಸ್ತೀನ್ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು, ಪ್ಯಾಲೇಸ್ತೀನ್ ನಡೆಸಿರುವ ರಾಕೆಟ್ ದಾಳಿಯಲ್ಲಿ 43 ಜನರು ಸಾವನ್ನಪ್ಪಿದ್ದಾರೆ. ಗಾಜಾ ಮೂಲದ ಉಗ್ರರು ನೂರಾರು ರಾಕೆಟ್ ದಾಳಿ ನಡೆಸಿದ್ದು, ಇದರಿಂದ ನೂರಾರು ಜನರು ಗಾಯಗೊಂಡಿದ್ದಾರೆ.
ಗಾಜಾ ಉಗ್ರರು ರಾಕೆಟ್ ದಾಳಿ ನಡೆಸುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ದಾಳಿ ನಡೆಸಿದ್ದು, ಹೀಗಾಗಿ ಆಕಾಶದಲ್ಲೇ ಅನೇಕ ರಾಕೆಟ್ ಹಾಗೂ ಕ್ಷಿಪಣಿ ಅಪ್ಪಚ್ಚಿಯಾಗಿವೆ. ಸದ್ಯ ಇಸ್ರೇಲ್ನಿಂದ ವಿಡಿಯೋ ರಿಲೀಸ್ ಆಗಿದೆ.
ಇಸ್ರೇಲ್ನ ಅತಿದೊಡ್ಡ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಇತರ ನಗರ ಪ್ರದೇಶಗಳಲ್ಲಿ ಇದರಿಂದ ಅಪಾರ ಪ್ರಮಾಣದ ತೊಂದರೆ ಆಗಿದ್ದು, ಅನೇಕ ಬಹುಮಹಡಿ ಕಟ್ಟಡ ಸಂಪೂರ್ಣವಾಗಿ ನೆಲಸಮವಾಗಿವೆ. ಈ ಹಿಂದೆ 2007ರಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆ ವೇಳೆ, 233 ಜನರು ಸಾವನ್ನಪ್ಪಿದ್ದರು. ಆದರೆ, ಇದೀಗ ಮತ್ತೊಮ್ಮೆ ಅದೇ ರೀತಿಯ ಹಿಂಸಾಚಾರ ಆರಂಭಗೊಂಡಿದೆ.
ಇದನ್ನೂ ಓದಿ: ಪ್ಯಾಲೆಸ್ತೀನ್ ಕಡೆಯಿಂದ ಇಸ್ರೇಲ್ ಮೇಲೆ 200 ಕ್ಕೂ ಅಧಿಕ ರಾಕೆಟ್ ದಾಳಿ
ಕಳೆದ ಕೆಲ ದಿನಗಳಿಂದ ಗಾಜಾ ಉಗ್ರರು ಹಾಗೂ ಇಸ್ರೇಲ್, ಪ್ಯಾಲೇಸ್ತೀನ್ ಬಂಡಕೋರರ ನಡುವೆ ಸಂಘರ್ಷ ಆರಂಭಗೊಂಡಿದ್ದು, ಇದೀಗ ಅದರು ಹಿಂಸಾಚಾರ ರೂಪ ಪಡೆದುಕೊಂಡಿದೆ. ಉಭಯ ದೇಶಗಳ ನಡುವಿನ ಸಂಘರ್ಷ ಇದೀಗ ಯುದ್ಧದ ರೂಪ ಪಡೆದುಕೊಳ್ಳಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.