ETV Bharat / international

ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ: ಭಾರತ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳು ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರಗಳಾಗಿವೆ. ಚೀನಾ ಸೇರಿದಂತೆ ಇತರ ದೇಶಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಯಾವುದೇ ಹಕ್ಕು ಹೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

China has no locus standi to comment on J&K: India
ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಸ್ಥಾನವಿಲ್ಲ: ಭಾರತ
author img

By

Published : Mar 24, 2022, 7:44 AM IST

ನವದೆಹಲಿ: ಜಮ್ಮು ಕಾಶ್ಮೀರ ಕುರಿತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರ ಟೀಕೆಗಳನ್ನು ಭಾರತ ಬುಧವಾರ ತಿರಸ್ಕರಿಸಿದೆ. ಇತರ ದೇಶಗಳಿಗೆ ತನ್ನ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಸ್ಥಾನ, ಅವಕಾಶ ಇಲ್ಲ ಎಂದು ಒತ್ತಿ ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ, ಇಸ್ಲಾಮಾಬಾದ್‌ನಲ್ಲಿ ನಡೆದ ಒಐಸಿ ಸಭೆಯ ಉಧ್ಘಾಟನಾ ಸಮಾರಂಭದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರಿಗೆ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡಲು ನಾವು ಅವಕಾಶ ಕೊಟ್ಟಿಲ್ಲ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳು ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರಗಳಾಗಿವೆ. ಚೀನಾ ಸೇರಿದಂತೆ ಇತರ ದೇಶಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಾಗೂ ಮಾತನಾಡುವ ಹಕ್ಕು ಹೊಂದಿಲ್ಲ ಎಂದು ಭಾರತ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಇದನ್ನೂ ಓದಿ: ಪಾಕ್​ ಪಿಎಂ ಇಮ್ರಾನ್ ಖಾನ್ ಆಶ್ಚರ್ಯಕರ ವಿಷಯ ಬಹಿರಂಗಗೊಳಿಸಬಹುದು: ಸಚಿವ ಶೇಖ್ ರಶೀದ್!

ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ, ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಕಾಶ್ಮೀರ ವಿವಾದ ಸರಿಯಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳುತ್ತದೆ ಎಂದು ಚೀನಾ ನಂಬುತ್ತದೆ ಎಂದು ವಾಂಗ್ ಯೀ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸ್ಪಷ್ಟನೆ ನೀಡಿದ್ದು, ಆಂತರಿಕ ವಿಚಾರದಲ್ಲಿ ಯಾರೂ ಕೂಡಾ ಮಾತನಾಡಬಾರದು ಎಂದು ತಕ್ಕ ಪ್ರತ್ಯುತ್ತರ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.