ಸಿಯೋಲ್: ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಈಗ ಟೀಕೆ ಹೆಚ್ಚಾಗುತ್ತಿದೆ. ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿರುವ ರಷ್ಯಾವನ್ನು ವರ್ಲ್ಡ್ ಟೇಕ್ವಾಂಡೋ ತೀವ್ರವಾಗಿ ಖಂಡಿಸಿದೆ. ಅಲ್ಲದೇ, ವ್ಲಾಡಿಮಿರ್ ಪುಟಿನ್ರಿಗೆ ನೀಡಲಾದ ಗೌರವ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಹಿಂಪಡೆಯಲು ನಿರ್ಧರಿಸಿದೆ.
'ಕ್ರೂರ ವಿಜಯಕ್ಕಿಂತ ಶಾಂತಿಯೇ ಅಮೂಲ್ಯ'ವಾದುದು. ರಷ್ಯಾ ಪರಸ್ಪರ ಗೌರವ ಮತ್ತು ಸಹಿಷ್ಣುತೆಯ ವಿರುದ್ಧವಾಗಿದೆ. ಹೀಗಾಗಿ ರಷ್ಯಾದ ಅಧ್ಯಕ್ಷರಿಗೆ 2013 ರಲ್ಲಿ ನೀಡಲಾದ ಗೌರವ 9 ನೇ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಹಿಂಪಡೆಯಲಾಗುವುದು ಎಂದು ವಿಶ್ವ ಟೇಕ್ವಾಂಡೋ ಸಂಸ್ಥೆ ಪ್ರಕಟಿಸಿದೆ.
ಅಲ್ಲದೇ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಒಗ್ಗೂಡಿ ಯಾವುದೇ ರಷ್ಯನ್ ಅಥವಾ ಬೆಲಾರೂಸ್ನ ರಾಷ್ಟ್ರೀಯ ಧ್ವಜಗಳು ಅಥವಾ ಗೀತೆಗಳನ್ನು ವಿಶ್ವ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಹಾರಾಟ, ನುಡಿಸುವುದನ್ನು ನಿರ್ಬಂಧಿಸಿದೆ.
ಇದರ ಜೊತೆಗೆ ವಿಶ್ವ ಟೇಕ್ವಾಂಡೋ ಮತ್ತು ಯುರೋಪಿಯನ್ ಟೇಕ್ವಾಂಡೋ ಸಂಸ್ಥೆಗಳೆರಡು ರಷ್ಯಾ ಮತ್ತು ಬೆಲಾರಸ್‌ನಲ್ಲಿ ಟೇಕ್ವಾಂಡೋ ಸ್ಪರ್ಧೆಗಳನ್ನು ಆಯೋಜಿಸುವುದನ್ನು ಕೈ ಬಿಟ್ಟಿದೆ.
ಓದಿ: ಯುರೋಪಿಯನ್ ಒಕ್ಕೂಟದ ಸದಸತ್ವ ಪಡೆಯುವ ಅರ್ಜಿಗೆ ಸಹಿ ಹಾಕಿದ ಉಕ್ರೇನ್ ಅಧ್ಯಕ್ಷ