ETV Bharat / international

ಹೆಚ್ಚಿನ ಪ್ರಮಾಣದ ಆ್ಯಂಟಿಬಯೋಟಿಕ್ ಸೇವನೆ ಸಾವಿಗೆ ರಹದಾರಿ: WHO ಎಚ್ಚರಿಕೆಯ ಕರೆಗಂಟೆ - ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

ಜಾಗತಿಕ ಮಹಾಮಾರಿ ಕೋವಿಡ್​-19, ಜಗತ್ತಿನಾದ್ಯಂತ ರೋಗ-ನಿರೋಧಕಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುವಂತೆ ಮಾಡಿದ್ದು, ಹೆಚ್ಚು ಹೆಚ್ಚು ಬಳಕೆಯು ಅಂತಿಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚುವ ಸಾಧ್ಯತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್​​ ಎಚ್ಚರಿಕೆ ನೀಡಿದ್ದಾರೆ.

WHO
ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
author img

By

Published : Jun 2, 2020, 4:56 PM IST

ಜಿನೀವಾ: ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಬಳಸುವಂತಹ ಪ್ರತಿಜೀವಕ ನಿರೋಧಕಶಕ್ತಿ (ಆಂಟಿ ಬಯೋಟಿಕ್‌) ಔಷಧವನ್ನು ಹೆಚ್ಚು ಬಳಕೆ ಮಾಡುತ್ತಿರುವ ಜಗತ್ತು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಮಹಾಮಾರಿ ಕೋವಿಡ್​-19, ಜತ್ತಿನಾದ್ಯಂತ ರೋಗ-ನಿರೋಧಕಗಳನ್ನು ಅಧಿಕ ಪ್ರಮಾಣದಲ್ಲಿ ಬಳಸುವಂತೆ ಮಾಡಿದೆ. ಇದು ಅಂತಿಮವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತಾ, ಸಾವಿನ ಮನೆ ಸೇರಿಸಲಿದೆ. ಮುಂದೊಂದು ದಿನ ರೋಗ-ನಿರೋಧಕಗಳಿಗೆ ಬ್ಯಾಕ್ಟಿರಿಯಾಗಳು ಬಗ್ಗದಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂತ್ರನಾಳದ ಸೋಂಕು ಸೇರಿದಂತೆ ಸಾಮಾನ್ಯ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹ ಕೆಲ ದೇಶಗಳು ಆಂಟಿ ಬಯೋಟಿಕ್ ಉಪಯೋಗಿಸುತ್ತಿದ್ದು, ಇದರಿಂದಾಗಿ ಅಂತಹ ದೇಶಗಳು ಸಣ್ಣಪುಟ್ಟ ಕಾಯಿಲೆಗಳನ್ನು ಎದುರಿಸಲು ಇರುವ ಪರಿಣಾಮಕಾರಿ ಮಾರ್ಗಗಳು ಅರಿಯದೆ ಹೊರಗುಳಿಯುತ್ತಾ, ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ ಎಂದು ಟೆಡ್ರೊಸ್ ಭವಿಷ್ಯದ ಅಪಾಯವನ್ನು ತೆರೆದಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.